ಬಂಟ್ವಾಳ: ಬೈಕ್ ನಲ್ಲಿ ಬಂದು ವೃದ್ದೆಯ ಸರ ದೋಚಿದ್ದ ಆರೋಪಿ ಸೆರೆ

ಬಂಟ್ವಾಳ: ಕಾವಳಪಡೂರು ಹಂಚಿಕಟ್ಟೆ ಎ೦ಬಲ್ಲಿ ಜೂನ್‌ 15ರಂದು ನಡೆದುಕೊ೦ಡು ಹೋಗುತ್ತಿದ್ದ ವೃದ್ದೆಯ ಸರವನ್ನು ಸೆಳೆದೊಯ್ದ ಆರೋಪಿ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್‌ ನಿರೀಕ್ಷಕ ಟಿ.ಡಿ.ನಾಗರಾಜ್‌, ಪಿಎಸ್ಸೈ ಹರೀಶ್‌ ಅವರ ತಂಡ ಬಂಧಿಸಿದೆ.

ಬಂಧಿತನನ್ನು ತಣ್ಣೀರುಪಂಥ ನಿವಾಸಿ ಇಲ್ಯಾಸ್‌ (26) ಎಂದು ಗುರುತಿಸಲಾಗಿದೆ.

ಬುಧವಾರದಂದು ಮಧ್ಯಾಹ್ನ 4.15 ಗಂಟೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಹಂಚಿಕಟ್ಟೆ ಸಾಲುಮರದ ತಿಮ್ಮಕ್ಕ ರಸ್ತೆಯ ಹತ್ತಿರ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪೂವಮ್ಮ (69) ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನ ಲೇಪಿತ ಬೆಳ್ಳಿಯ ಸರವನ್ನು ಮೋಟರ್ ಬೈಕ್ ನಲ್ಲಿ ಬಂದ ಅಪರಿಚಿತ ಸುಲಿಗೆ ಮಾಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖೆ ನಡೆಸಿ ಆರೋಪಿಇಲ್ಯಾಸ್‌ ನನ್ನು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಸುಲಿಗೆ ಮಾಡಿರುವ 2 ಚಿನ್ನ ಲೇಪಿತ ಬೆಳ್ಳಿಯ ಚೈನ್‌ಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15
ದಿನಗಳ ಸ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published.