ಬೆಳ್ಳಾರೆ ವರ್ತಕ ಸಂಘದಿಂದ ನೂತನ ಪಂಚಾಯತ್ ಸದಸ್ಯರಿಗೆ ಅಭಿನಂದನೆ

ಸುಳ್ಯ: ಬೆಳ್ಳಾರೆ ವರ್ತಕ ಹಾಗೂ ಕೈಗಾರಿಕಾ ಸಂಘದ ವತಿಯಿಂದ ಬೆಳ್ಳಾರೆ ಗ್ರಾಮ ಪಂಚಾಯತ್ ನೂತನ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ನಮ್ರತಾ ಕಲಾ ಮಂದಿರದಲ್ಲಿ ಜರುಗಿತು.

ಅಭಿನಂದನೆಯನ್ನು ಬೆಳ್ಳಾರೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ನೆರವೇರಿಸಿದರು. ಸುಳ್ಯ ವಕೀಲರ ಸಂಘದ ಅಧ್ಯಕ್ಷ ಯಂ ವೆಂಕಪ್ಪ ಗೌಡ ಚುನಾಯಿತ ಸದಸ್ಯರ ಅಭಿನಂದಿಸಿ ಗಾಂಧೀಜಿ ಕಂಡ ಗ್ರಾಮಸ್ವರಾಜ್ಯದ ಕಲ್ಪನೆ ಗ್ರಾಮಮಟ್ಟದಲ್ಲಿ ಸಾಕಾರ ಗೊಳ್ಳಬೇಕಾದರೆ ಅದರಲ್ಲಿ ಸದಸ್ಯರ ಪಾತ್ರ ಹೇಗಿರಬೇಕೆಂಬ ವಿಷಯದಲ್ಲಿ ಮಾತನಾಡಿ ನೂತನ ಸದಸ್ಯರನ್ನು ಹುರಿದುಂಬಿಸಿದರು .
ಕಾಯ್ರಕ್ರಮದ ಅಧ್ಯಕ್ಷತೆಯನ್ನು ವರ್ತಕ ಸಂಘದ ಅಧ್ಯಕ್ಷ ಮಾಧವ ಗೌಡ ಬೆಳ್ಳಾರೆ ವಹಿಸಿದ್ದರು .ವರ್ತಕಸಂಘದ ಗೌರವಾಧ್ಯಕ್ಷರಾದ ಪ್ರಮೋದ್ ಶೆಟ್ಟಿ, ಕಾರ್ಯದರ್ಶಿ ಈಶ್ವರ ಪೆರುವಾಜೆ, ಅಬೂಬಕ್ಕರ್ ಮಂಗಳ ಉಪಸ್ಥಿತರಿದ್ದರು.


ಸುಬ್ರಹ್ಮಣ್ಯ ಜೋಶಿ ಸ್ವಾಗತಿಸಿ, ಪ್ರಸ್ತಾವಿಕ ಮಾತಾನಾಡಿದರು. ಬಾಲಕೃಷ್ಣ ಬೋರ್ಕರ್ ನಿರೂಪಿಸಿದರು.

Leave a Reply

Your email address will not be published.