ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಯು.ಬಿ.ಟಿ ಹೆಲ್ಪ್ ಗೈಸ್ ಉಳಾಯಿಬೆಟ್ಟು ನೂತನ ಕಛೇರಿ ಉದ್ಘಾಟನೆಯ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು : ನ. 23, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಯು.ಬಿ.ಟಿ ಹೆಲ್ಪ್ ಗೈಸ್ ಉಳಾಯಿಬೆಟ್ಟು ಇದರ ನೂತನ ಕಛೇರಿ ಉದ್ಘಾಟನೆಯ ಪ್ರಯುಕ್ತ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಆದಿತ್ಯವಾರದಂದು ಉಳಾಯಿಬೆಟ್ಟು ಜಿ.ಕೆ.ಬಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು.

ಸಾಲೆ ಜುಮಾ ಮಸೀದಿ ಅದ್ಯಕ್ಷ ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯು.ಬಿ.ಟಿ ಹೆಲ್ಪ್ ಗೈಸ್ ಉಳಾಯಿಬೆಟ್ಟು ಇದರ ಉಪಾಧ್ಯಕ್ಷ ಕಬೀರ್ ದಿಡ್ಡ್ ಉದ್ಘಾಟಿಸಿದರು.

ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 102 ಮಂದಿ ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಮುಖ್ಯ ಅತಿಥಿಗಳಾಗಿ ಚೇತನ್ ಕೊಪ್ಪ, ಆರೀಫ್ ಬಾಖವಿ, ಅಯ್ಯೂಬ್ ಕನಿಬೆಟ್ಟು, ಮುಸ್ತಫಾ ಉಳಾಯಿಬೆಟ್ಟು, ಎಸ್.ಎಂ.ಎ,ಇಕ್ಬಾಲ್, ಜಿ.ಕೆ.ಬಿ,ಅಬ್ದುಲ್ ರಹಿಮಾನ್, ಶರೀಫ್ ಕನಿಬೆಟ್ಟು ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published.