Home ಮುಖಪುಟ

Category: <span>ಮುಖಪುಟ</span>

Post
ವೈದ್ಯಾಧಿಕಾರಿ ಇಲ್ಲದ ಶಿರ್ತಾಡಿ ಆರೋಗ್ಯ ಕೇಂದ್ರ -ಕಾಂಗ್ರೇಸ್ ಪ್ರತಿಭಟನೆ

ವೈದ್ಯಾಧಿಕಾರಿ ಇಲ್ಲದ ಶಿರ್ತಾಡಿ ಆರೋಗ್ಯ ಕೇಂದ್ರ -ಕಾಂಗ್ರೇಸ್ ಪ್ರತಿಭಟನೆ

ಮೂಡಬಿದ್ರೆ: ಪ್ರಾಥಮಿಕ ಆರೋಗ್ಯ ಕೇಂದ್ರ ಶಿರ್ತಾಡಿ ಇಲ್ಲಿ ಕಳೆದ ಎಂಟು ತಿಂಗಳಿನಿಂದ ವೈದ್ಯಾಧಿಕಾರಿಗಳು ಇಲ್ಲದೆ ಈ ಭಾಗದ ಬಡ ಜನರ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಇದರ ಕುರಿತು ಇಲಾಖೆಗಳ ಗಮನಸೆಳೆದರೂ ಕೂಡ ಸಂಪೂರ್ಣವಾಗಿ ಈ ಭಾಗದ ಬಡಜನರನ್ನು ಸರಕಾರ ನಿರ್ಲಕ್ಷಿಸಿರುವುದನ್ನು ಪ್ರತಿಭಟಿಸಿ ಇಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಪ್ರತಿಭಟನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮೂಡಬಿದ್ರೆ ನಗರ ಕಾಂಗ್ರೆಸ್ ಅಧ್ಯಕ್ಷ...

Post
ಕಾರ್ಕಳ: ಜೀಪ್ ಪಲ್ಟಿ- ಯುವತಿ ಮೃತ್ಯು, ಮೂವರಿಗೆ ಗಂಭೀರ ಗಾಯ

ಕಾರ್ಕಳ: ಜೀಪ್ ಪಲ್ಟಿ- ಯುವತಿ ಮೃತ್ಯು, ಮೂವರಿಗೆ ಗಂಭೀರ ಗಾಯ

ಕಾರ್ಕಳ: ಬೆಳ್ಮಣ್‌ನ ಮುಂಡ್ಕೂರು ಸಮೀಪದ ಸಂಕಲಕರಿಯ ಎಂಬಲ್ಲಿ ಜೀಪು ಪಲ್ಟಿಯಾದ ಪರಿಣಾಮ ಯುವತಿಯೊಬ್ಬರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತರನ್ನು ಪಾವನಿ (18) ಎಂದು ಗುರುತಿಸಲಾಗಿದೆ. ಕಿನ್ನಿಗೋಳಿಯಿಂದ ಮುಂಡ್ಕೂರು ಕಡೆಗೆ ಜೀಪಿನಲ್ಲಿ ಚಾಲಕ ಸೇರಿ ಆರು ಮಂದಿ ಪ್ರಯಾಣಿಸುತ್ತಿದ್ದರು. ಆತ್ರಾಡಿ-ಬಜ್ಪೆ ಭಾಗವಾಗಿರುವ ಬೆಳ್ಮಣ್-ಸಂಕಲಕರಿಯ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆಯಲ್ಲಿ ದಿಢೀರ್ ತಿರುವು ಬಂದಿರುವುದು ಚಾಲಕನ ಗಮನಕ್ಕೆ ಬಾರದೆ ಈ ಅವಘಡ ಸಂಭವಿಸಿದೆ. ಅಪಘಾತ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ...

Post
ಧರ್ಮಸ್ಥಳದಿಂದ ದರ್ಶನ ಮುಗಿಸಿ ಬರುವ ವೇಳೆ ಮರಕ್ಕೆ ಢಿಕ್ಕಿ ಹೊಡೆದ ಕಾರು: ತಂದೆ-ಮಗ ಸಾವು

ಧರ್ಮಸ್ಥಳದಿಂದ ದರ್ಶನ ಮುಗಿಸಿ ಬರುವ ವೇಳೆ ಮರಕ್ಕೆ ಢಿಕ್ಕಿ ಹೊಡೆದ ಕಾರು: ತಂದೆ-ಮಗ ಸಾವು

ಮೂಡಿಗೆರೆ: ಧರ್ಮಸ್ಥಳದಿಂದ ದೇವರ ದರ್ಶನ ಮುಗಿಸಿಕೊಂಡು ಬರುವ ವೇಳೆ ದಾರಿ ಮಧ್ಯೆ ಮರಕ್ಕೆ ಕಾರು ಢಿಕ್ಕಿ ಹೊಡೆದು, ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರದಲ್ಲಿ ಭಾನುವಾರ ನಡೆದಿದೆ. ಬೆಂಗಳೂರಿನ ರಾಜಾಜಿನಗರದ ನರಸಿಂಹರಾಜ್ (46)ಮತ್ತು ಕಿರಣ್ (23) ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ. ಧರ್ಮಸ್ಥಳದಿಂದ ದೇವರ ದರ್ಶನ ಮುಗಿಸಿಕೊಂಡು ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ತಾಲೂಕಿನ ಮುತ್ತಿಗೆಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ...

Post
ಪುತ್ತೂರು ಅರಣ್ಯ ಇಲಾಖೆ ಮಿಂಚಿನ ಕಾರ್ಯಾಚರಣೆ: ದಂತಚೋರರ ಬಂಧನ

ಪುತ್ತೂರು ಅರಣ್ಯ ಇಲಾಖೆ ಮಿಂಚಿನ ಕಾರ್ಯಾಚರಣೆ: ದಂತಚೋರರ ಬಂಧನ

ಪುತ್ತೂರು: ಅರಣ್ಯ ಇಲಾಖೆಯ ವಿಶೇಷ ತಂಡ ಕುಖ್ಯಾತ ಅಂತರ್ ರಾಜ್ಯ ದಂತಚೋರರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಮಾಣಿ-ಮೈಸೂರು ಬೈಪಾಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಯ ಮಹಾವೀರ ಆಸ್ಪತ್ರೆಗೆ ತಿರುಗುವ ಜಂಕ್ಷನ್‌ನಲ್ಲಿ ಆರೋಪಿಗಳನ್ನು ಅಡ್ಡಗಟ್ಟಿ ದಂತ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಶಶಿಕುಮಾರ್, ಸತೀಶ್ ,ವಿಜ್ಞೇಶ್, ವಿನಿತ್, ಸಂಪತ್‌ಕುಮಾರ, ರತೀಶ ಎಂದು‌ ಗುರುತಿಸಲಾಗಿದೆ. ಆರೋಪಿಗಳು ತಮಿಳುನಾಡು ಮತ್ತು ಕೇರಳ ಮೂಲದವರಾಗಿದ್ದು, 6 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಸದರಿ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ...

Post
ಮೋದಿ ಬಂದು ಹೋಗಲಿ ಬೇಡ ಅಂದವರ್ಯಾರು.? ಆದ್ರೇ ಕಾಲೇಜುಗಳಿಗೆ ರಜೆ ಯಾಕೆ.? ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ ? – ಡಿಕೆಶಿ ಕಿಡಿ

ಮೋದಿ ಬಂದು ಹೋಗಲಿ ಬೇಡ ಅಂದವರ್ಯಾರು.? ಆದ್ರೇ ಕಾಲೇಜುಗಳಿಗೆ ರಜೆ ಯಾಕೆ.? ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ ? – ಡಿಕೆಶಿ ಕಿಡಿ

ಬೆಂಗಳೂರು: ಪ್ರಧಾನಿ ಮೋದಿ ( PM Narendra Modi ) ಹಾದು ಹೋಗುವ ಮಾರ್ಗದಲ್ಲಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೋದಿ ಬಂದು ಹೋಗಲಿ ಬೇಡ ಅಂದವರ್ಯಾರು. ಅದು ಅವರ ಪಕ್ಷಕ್ಕೆ ಸಂಬಂಧಿಸಿದ್ದು. ಆದರೆ, ಕಾಲೇಜುಗಳಿಗೆ ರಜೆ ಕೊಡುತ್ತಿರುವುದು ಯಾಕೆ ? ವಿದ್ಯಾರ್ಥಿಗಳು ಏನು ಟೆರರಿಸ್ಟ್ ಗಳಾ ? ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದಂತ ಕೆಪಿಸಿಸಿ ಅಧ್ಯಕ್ಷ...

Post
ಇಂದು ರಾಹುಲ್ ಗಾಂಧಿ ಹುಟ್ಟುಹಬ್ಬ: ಸಂಭ್ರಮಿಸದಂತೆ ಕಾರ್ಯಕರ್ತರಿಗೆ ಕರೆ

ಇಂದು ರಾಹುಲ್ ಗಾಂಧಿ ಹುಟ್ಟುಹಬ್ಬ: ಸಂಭ್ರಮಿಸದಂತೆ ಕಾರ್ಯಕರ್ತರಿಗೆ ಕರೆ

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು 53ನೇ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ.   ದೇಶದ ರಕ್ಷಣಾ ಪಡೆಗಳಿಗೆ 4 ವರ್ಷಗಳ ಅಲ್ಪಾವಧಿ ನೇಮಕಾತಿಯ ‘ಅಗ್ನಿಪಥ’ ಯೋಜನೆ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ಯುವ ಜನತೆ ಪ್ರತಿಭಟನೆಯಲ್ಲಿ ನಿರತರಾಗಿರುವ ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ನನ್ನ ಹುಟ್ಟುಹಬ್ಬದಂದು ಯಾವುದೇ ರೀತಿಯ ಆಚರಣೆಗಳನ್ನುನಡೆಸದಂತೆ...

Post
ಬೆಳಗಾವಿಯಲ್ಲಿ ಪಾರ್ಕಿಂಗ್‌ ಗಲಾಟೆ ಕೊಲೆಯಲ್ಲಿ ಅಂತ್ಯ-ವಾಹನಗಳಿಗೆ ಬೆಂಕಿ, ಉದ್ವಿಗ್ನ ಪರಿಸ್ಥಿತಿ

ಬೆಳಗಾವಿಯಲ್ಲಿ ಪಾರ್ಕಿಂಗ್‌ ಗಲಾಟೆ ಕೊಲೆಯಲ್ಲಿ ಅಂತ್ಯ-ವಾಹನಗಳಿಗೆ ಬೆಂಕಿ, ಉದ್ವಿಗ್ನ ಪರಿಸ್ಥಿತಿ

ಬೆಳಗಾವಿ: ಜಮೀನು ವಿವಾದ ಸಂಬಂಧಿಸಿದ ಜಗಳವೊಂದು ಕಾರು ಪಾರ್ಕಿಂಗ್‌ ವಿಚಾರದಲ್ಲಿನ ಗಲಾಟೆಗೆ ಕಾರಣವಾಗಿ ವ್ಯಕ್ತಿಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕೊಲೆ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಶನಿವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನವೊಂದರ ಜಮೀನು ವಿವಾದ ಕೆಲ ವರ್ಷಗಳಿಂದ ಚಾಲ್ತಿಯಲ್ಲಿತ್ತು. ಶನಿವಾರ ರಾತ್ರಿ ಇದೇ ಜಗಳವು ಕಾರು ಪಾರ್ಕಿಂಗ್‌ ಮಾಡುವ ವಿಚಾರದಲ್ಲಿ ಮತ್ತಷ್ಟು ಗಲಾಟೆಗೆ ಕಾರಣವಾಗಿದೆ. ಈ ವೇಳೆ ಇತ್ತಂಡಗಳ ನಡುವೆ ಮಾತಿಗೆ ಮಾತು ಬೆಳೆದು...

Post
ದ್ವಿತೀಯ PUC ಪರೀಕ್ಷೆಯಲ್ಲಿ ಅನುತ್ತೀರ್ಣ: ರಾಜ್ಯಾದ್ಯಂತ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ..!

ದ್ವಿತೀಯ PUC ಪರೀಕ್ಷೆಯಲ್ಲಿ ಅನುತ್ತೀರ್ಣ: ರಾಜ್ಯಾದ್ಯಂತ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ..!

ಕೊಡಗು: ಇಂದು ದ್ವಿತೀಯ ಪಿಯುಸಿ ಫಲಿತಾಂಶ  ಪ್ರಕಟವಾಗಿದೆ. 5,99,794 ಮಕ್ಕಳಲ್ಲಿ 4,02,697 ಮಕ್ಕಳು ಪಾಸ್ ಆಗಿದ್ದು , ಶೇ .61 ರಷ್ಟು ಫಲಿತಾಂಶ ಬಂದಿದೆ . ಫೇಲ್ ಆಗಿದ್ದಕ್ಕೆ ಹಾಗೂ ಕಡಿಮೆ ಅಂಕ ಪಡೆದ ನಾಲ್ವರು ವಿದ್ಯಾರ್ಥಿಗಳು ದೃತಿಗೆಟ್ಟು ಆತ್ಮಹತ್ಯೆಗೆ  ಶರಣಾಗಿದ್ದಾರೆ. ಕೊಡಗಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸವನ ಹಳ್ಳಿ ನಿವಾಸಿ ಸಂಧ್ಯಾ (18) ಮೃತ ದುರ್ದೈವಿ, ಕುಶಾಲನಗರ ವಿವೇಕಾನಂದ ಕಾಲೇಜಿನಲ್ಲಿ PUC ಓದುತ್ತಿದ್ದ ವಿದ್ಯಾರ್ಥಿನಿ ಸಂಧ್ಯಾ, ಹೆರೂರು ನಿವಾಸಿ ನಿವೃತ ಯೋಧ ಸುಭಾಷ್ ಪುತ್ರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಡ್ಯದ...

Post
Big Breaking: ಬೆಂಗಳೂರಿನಲ್ಲಿ ಸಹ ನಟನ ಬರ್ಬರ ಕೊಲೆ

Big Breaking: ಬೆಂಗಳೂರಿನಲ್ಲಿ ಸಹ ನಟನ ಬರ್ಬರ ಕೊಲೆ

ಬೆಂಗಳೂರು: ಚಾಕುವಿನಿಂದ ಇರಿದು ಸಹ ನಟನೊಬ್ಬನನ್ನು ಕೊಲೆಗೈದಿರುವ ಘಟನೆ ಆರ್‌ ಆರ್‌ ನಗರದ ಪಟ್ಟಣಗೆರೆಯಲ್ಲಿ ಶನಿವಾರ ( ಜೂ. 18) ರಂದು ನಡೆದಿದೆ. ಸತೀಶ್‌ ವಜ್ರ (36) ಕೊಲೆಯಾದ ನಟ. ಕೌಟುಂಬಿಕ ವಿಚಾರಕ್ಕೆ ಸತೀಶ್‌ ಕೊಲೆಯಾಗಿದೆ ಎಂದು ಶಂಕಿಸಲಾಗಿದೆ. ಮನೆಯಲ್ಲಿ ಚಾಕುವಿನಿಂದ ಇರಿದು ಭಾಮೈದನೇ ಸತೀಶ್‌ ನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಸತೀಶ್‌ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಲಗೋರಿʼ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸತೀಶ್‌ ಸಹ ನಟನಾಗಿ ಕಾಣಿಸಿಕೊಂಡಿದ್ದರು. ಆರ್‌ ಆರ್‌ ನಗರ ಠಾಣಾ...

Post
ದಕ ಜಿಲ್ಲಾ ಪಂಚಾಯತ್ ಎಡವಟ್ಟು -ಗ್ರಾಮ ಪಂಚಾಯಿತಿ ಸಿಬ್ಬಂದಿ ಗಳಿಗೆ ಭವಿಷ್ಯ ನಿಧಿ ಯೋಜನೆ ತಪ್ಪುಅದೇಶ

ದಕ ಜಿಲ್ಲಾ ಪಂಚಾಯತ್ ಎಡವಟ್ಟು -ಗ್ರಾಮ ಪಂಚಾಯಿತಿ ಸಿಬ್ಬಂದಿ ಗಳಿಗೆ ಭವಿಷ್ಯ ನಿಧಿ ಯೋಜನೆ ತಪ್ಪುಅದೇಶ

ದ.ಕ: ಗ್ರಾಮ ಪಂಚಾಯತ್ ಕ್ಲರ್ಕ್ , ಡಾಟಾ ಎಂಟ್ರಿ ಆಪರೇಟರ್, ವಾಟರ್ ಮೆನ್, ಬಿಲ್ ಕಲೆಕ್ಟರ್,ಪಂಪ್ ಆಪರೇಟರ್, ಪಂಪು ಮೆಕಾನಿಕ್,ಜವಾನ,ಸ್ವಚ್ಚತಗಾರ ಇವರಿಗೆ ಪಿಎಫ್ ಮತ್ತು ಇಎಸ್ಐ ನೀಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಮಾಡಿದ್ದು ಪಂಚಾಯತ್ ನೌಕರರಿಗೆ ಸಂತಸ ತಂದ ವಿಚಾರ , ಆದರೆ ಇದಕ್ಕೆ ಅವರ ವೇತನದಿಂದಲೇ ಹಣ ನೀಡುವಂತೆ ಆದೇಶ ಆಗಿರುವುದು ಕಾರ್ಮಿಕ ಕಾನೂನಿಗೆ ವಿರುದ್ಧವಾಗಿದೆ. ಪಂಚಾಯತ್ ಸಿಬ್ಬಂದಿಗಳು ತಮ್ಮ ವೇತನದಿಂದಲೇ ಭವಿಷ್ಯ ನಿಧಿಗೆ ಹಣ ನೀಡುವುದರಿಂದ ಅವರ ವೇತನವನ್ನು ಕಡಿತಗೊಳಿಸುವ ಪ್ರಮೇಯ...

  • 1
  • 2
  • 7