Home ಸುದ್ದಿ

Category: <span>ಸುದ್ದಿ</span>

Post
ಎಬಿವಿಪಿ ಅಭ್ಯಾಸವರ್ಗ ಸಮಾರೋಪ

ಎಬಿವಿಪಿ ಅಭ್ಯಾಸವರ್ಗ ಸಮಾರೋಪ

ಮಂಗಳೂರು :ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ಅಭ್ಯಾಸ ವರ್ಗದ ಸಮಾರೋಪ ಸಮಾರಂಭವು ಶಕ್ತಿನಗರದ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಸುಮನಸ ಸಭಾಭವನದಲ್ಲಿ ನೆರವೇರಿತು . ಸಮಾರೋಪ ಸಮಾರಂಭದ ಭಾಷಣವನ್ನು ಅಭಾವಿಪ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ಅವರು ಮಾಡಿ , ವಿದ್ಯಾರ್ಥಿ ಪರಿಷತ್ ನ ಬಗ್ಗೆ , ಕಾರ್ಯಗಳ ಬಗ್ಗೆ , ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು . ಈ ಸಮಾರೋಪ ಸಮಾರಂಭದಲ್ಲಿ ವಿಭಾಗ ಪ್ರಮುಖರಾದ ಕೇಶವ ಬಂಗೇರರವರು ಮಂಗಳೂರು ಮಹಾನಗರದ ನೂತನ ಕಾರ್ಯಕಾರಿಣಿ ಘೋಷಿಸಿದರು. ಮಂಗಳೂರು...

Post
ಪಾಣಿಮಂಗಳೂರು : ಜನವರಿ 8ಕ್ಕೆ ಖಾಝಿ ಕೋಟ ಉಸ್ತಾದ್, ಹಾಗು ಸಿ.ಎಂ. ಉಸ್ತಾದ್ ಕೃತಿಬಿಡುಗಡೆ, ಸೆಮಿನಾರ್, ಅನುಸ್ಮರಣೆ

ಪಾಣಿಮಂಗಳೂರು : ಜನವರಿ 8ಕ್ಕೆ ಖಾಝಿ ಕೋಟ ಉಸ್ತಾದ್, ಹಾಗು ಸಿ.ಎಂ. ಉಸ್ತಾದ್ ಕೃತಿಬಿಡುಗಡೆ, ಸೆಮಿನಾರ್, ಅನುಸ್ಮರಣೆ

ಬಂಟ್ವಾಳ : ಜ.06, ಧಾರ್ಮಿಕ ಸಾಮಾಜಿಕ ರಂಗದಲ್ಲಿ ನಾನಾ ರೀತಿಯ ಕೊಡುಗೆಯನ್ನು ನೀಡಿದ ಜಿಲ್ಲೆಯ ಖಾಝಿಗಳಾಗಿದ್ದ ಶೈಖುನಾ ಕೋಟ ಉಸ್ತಾದ್, ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಇವರ ಜೀವನ ಚರಿತ್ರೆ ಕೃತಿ ಬಿಡುಗಡೆ, ಸೆಮಿನಾರ್ ಅನುಸ್ಮರಣೆ ಕಾರ್ಯಕ್ರಮ ಜ. 8 ರಂದು ಸಂಜೆ ಪಾಣೆಮಂಗಳೂರು ಸಮೀಪ ನೆಹರುನಗರ ಮಸೀದಿ ವಠಾರದಲ್ಲಿ ಜರಗಲಿದೆ. ಕೋಟ ಉಸ್ತಾದರ ಪೂರ್ವ ವಿದ್ಯಾರ್ಥಿ ಸಂಘಟನೆ ಅರ್ಶದೀಸ್ ಅಸೋಶಿಯೇಶನ್ ಕೇಂದ್ರ ಸಮಿತಿ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅರ್ಶದಿ ರೈಟಿಂಗ್ ಹಬ್ ವತಿಯಿಂದ ಈ ಕೃತಿ ಬಿಡುಗಡೆಗೊಳ್ಳಲಿದೆ...

Post
ಬೆಳ್ಳಾರೆ ಮೆಸ್ಕಾಂ ಮಾರ್ಗದಾಳು ಮಾಧವ ವಿಧಿವಶ

ಬೆಳ್ಳಾರೆ ಮೆಸ್ಕಾಂ ಮಾರ್ಗದಾಳು ಮಾಧವ ವಿಧಿವಶ

ಸುಳ್ಯ: ಬೆಳ್ಳಾರೆ ಮೆಸ್ಕಾಂ ಶಾಖಾಧಿಕಾರಿ ಕಚೇರಿಯಲ್ಲಿ ಹಲವಾರು ವರುಷಗಳಿಂದ ಮಾರ್ಗದಾಳು ಸೇವೆಯಲ್ಲಿದ್ದ ಮಾಧವ ಇವರು ಅಸೌಖ್ಯದಿಂದ ವಿಧಿವಶರಾಗಿದ್ದಾರೆ. ಮೂಲತ ಇವರು ಪುತ್ತೂರಿನವರಾಗಿದ್ದು, ಪತ್ನಿ, ಮಕ್ಕಳನ್ನು ಆಗಲಿದ್ದಾರೆ.

Post
ಬಂಟ್ವಾಳದಲ್ಲಿ ಕಾಂಗ್ರೆಸ್ ವಿಭಾಗೀಯ ಸಭೆ

ಬಂಟ್ವಾಳದಲ್ಲಿ ಕಾಂಗ್ರೆಸ್ ವಿಭಾಗೀಯ ಸಭೆ

ಬಂಟ್ವಾಳದಲ್ಲಿ ಜ 6 ರಂದು ನಡೆಯುವ ಮೈಸೂರು ವಿಭಾಗೀಯ ಪ್ರಮುಖ ನಾಯಕರ ಸಭೆಯ ಬಗ್ಗೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಅವರು ಪತ್ರಿಗೋಷ್ಠಿ ನಡೆಸಿ ಕಾರ್ಯಕ್ರಮದ ವಿಚಾರ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಯು. ಟಿ ಖಾದರ್, ಜಿಲ್ಲಾ ಅಧ್ಯಕ್ಷರಾದ ಹರೀಶ್ ಕುಮಾರ್ ಕೆ, ಮಾಜಿ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ,ಕೋಡಿಜಾಲ್ ಇಬ್ರಾಹಿಂ,ಜಿಲ್ಲಾ ಯುವ...

Post
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಹರ್ನಿಶಿ ದುಡಿದ ಕಾರ್ಯಕರ್ತರಿಗೆ, ಸ್ಪರ್ಧಿಸಿದ ಅಭ್ಯರ್ಥಿಗಳಿಗೆ, ಹಾಗೂ ವಿಜೇತರಿಗೆ            *ಅಭಿನಂದನಾ ಸಮಾರಂಭ* ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ಜಯಪ್ರಕಾಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಯು ಟಿ ಖಾದರ್, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ , ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ರಾದ ಐವಾನ್ ಡಿ ಸೋಜ ಹಾಗೂ...

Post
ಇಂದಿನ ಐಕಾನ್ – ಆಧ್ಯಾತ್ಮದ ಪರಾಕಾಷ್ಟೆ ಪೇಜಾವರ ಶ್ರೀಗಳು

ಇಂದಿನ ಐಕಾನ್ – ಆಧ್ಯಾತ್ಮದ ಪರಾಕಾಷ್ಟೆ ಪೇಜಾವರ ಶ್ರೀಗಳು

ರಾಷ್ಟ್ರಸಂತ ಪೇಜಾವರ ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವೆ ಪೂರ್ತಿ( ಡಿಸೆಂಬರ್ 29) ಆಯ್ತು. ಅವರ 88 ವರ್ಷಗಳ ಸುದೀರ್ಘ ಮತ್ತು ಶುದ್ಧವಾದ ಪರಿವ್ರಾಜಕ ಜೀವನದ ಪುಟಗಳನ್ನು ತಿರುವಿದರೆ ವಿಸ್ಮಯವೇ ಕಣ್ಣು ಮುಂದೆ ಬರುತ್ತದೆ. ಒಬ್ಬ ಸಂತ ತನ್ನ ಮಡಿ, ಮೈಲಿಗೆಗಳ ಕೋಟೆಯನ್ನು ದಾಟಿ ನಿಂತು ಇಷ್ಟೊಂದು ಸಮಾಜ ಸುಧಾರಣೆ ಮಾಡಲು ಹೇಗೆ ಸಾಧ್ಯವಾಯಿತು? ಎಲ್ಲವೂ ಕೃಷ್ಣನ ಅನುಗ್ರಹ ಎಂದು ಅವರು ಹೇಳಿದ್ದರು. ಪುತ್ತೂರು ತಾಲೂಕಿನ ರಾಮಕುಂಜ ಎಂಬ ಪುಟ್ಟ ಊರಿನ ಮುಗ್ಧ ಬಾಲಕ...

Post
ಇಂದಿನ ಐಕಾನ್ – ಕಾರ್ಕಳದಿಂದ ಹೊರಟು ಜಗತ್ತು ಸುತ್ತಿದ ಹಕ್ಕಿ ಎಸ್ ಏ ಹುಸೇನ್. ( ಭಾಗ ೨)

ಇಂದಿನ ಐಕಾನ್ – ಕಾರ್ಕಳದಿಂದ ಹೊರಟು ಜಗತ್ತು ಸುತ್ತಿದ ಹಕ್ಕಿ ಎಸ್ ಏ ಹುಸೇನ್. ( ಭಾಗ ೨)

ಮುಂಬೈಯ BNHS ಸಂಸ್ಥೆ ಸೇರಿದ ಹುಸೇನ್ ಸಾಹೇಬರು ಸಲೀಂ ಅಲಿ ಅವರ ಶಿಷ್ಯನಾಗಿ ಮೊದಲು ಆರಿಸಿದ ಪ್ರಾಜೆಕ್ಟ್ ಎಂದರೆ ವಲಸೆ ಹಕ್ಕಿಗಳ ಬದುಕಿನ ಬಗ್ಗೆ ಅಧ್ಯಯನ. ಭಾರತದ ಹಕ್ಕಿ ತಾತ ಸಲೀಂ ಆಲಿ ಅವರು ತಮ್ಮ ಶಿಷ್ಯನ ಸಾಮರ್ಥ್ಯವನ್ನು ಮನಗಂಡು ಅವರಿಗೆ ಸಾಕಷ್ಟು ಸವಾಲಿನ ಪ್ರಾಜೆಕ್ಟಗಳನ್ನು ಕೊಡಲು ಆರಂಭ ಮಾಡಿದರು. ಗುರು ಶಿಷ್ಯರು ಇಬ್ಬರೂ ಗನ್, ದುರ್ಬೀನು, ಕ್ಯಾಮೆರಾ, ನೋಟ್ ಬುಕ್ ಮತ್ತು ಪೆನ್ ಹಿಡಿದು ಕಾಡಿನ ಒಳಗೆ ಹೋದರೆ ಊಟ ತಿಂಡಿ ಮರೆತೇ ಬಿಡುತ್ತಿದ್ದರು. ಸಲೀಂ...

Post
ಇಂದಿನ ಐಕಾನ್ – ಕಾರ್ಕಳದಿಂದ ಜಗತ್ತು ಸುತ್ತಿದ ಹಕ್ಕಿ ಎಸ್.ಏ.ಹುಸೇನ್( ಭಾಗ ೧)

ಇಂದಿನ ಐಕಾನ್ – ಕಾರ್ಕಳದಿಂದ ಜಗತ್ತು ಸುತ್ತಿದ ಹಕ್ಕಿ ಎಸ್.ಏ.ಹುಸೇನ್( ಭಾಗ ೧)

ಕಾರ್ಕಳದಿಂದ ಹೊರಟ ಓರ್ವ ಅಸಾಧಾರಣ ಸಾಧಕ ಹಕ್ಕಿಗಳನ್ನು ಪ್ರೀತಿಸುತ್ತಾ, ಅವುಗಳ ಬಗ್ಗೆ ಸಂಶೋಧನೆ ಮಾಡುತ್ತಾ ಜಾಗತಿಕ ಮಟ್ಟದಲ್ಲಿ ಮಿಂಚಿದ್ದು ನಿಜಕ್ಕೂ ಅದ್ಭುತ! ಹಕ್ಕಿ ತಾತ ಎಂದು ಕರೆಸಿಕೊಂಡ ಸಲೀಂ ಆಲಿ ಅವರ ಶಿಷ್ಯನಾಗಿ ಅವರು ಹಕ್ಕಿಗಳ ಅನೂಹ್ಯವಾದ ಜಗತ್ತಿನಲ್ಲಿ ಮಕ್ಕಾ ಮತ್ತು ಮದೀನಾಗಳನ್ನು ಕಂಡದ್ದು ಒಂದು ರೋಚಕವಾದ ಇತಿಹಾಸ! ಅವರೇ ನಮ್ಮ ಇಂದಿನ ಐಕಾನ್ ಸೈಯ್ಯದ್ ಅಬ್ದುಲ್ಲಾ ಹುಸೇನ್. ಅವರು ಹುಟ್ಟಿದ್ದು, ತನ್ನ ಬಾಲ್ಯವನ್ನು ಕಳೆದದ್ದು, ಕಾಲೇಜು ಶಿಕ್ಷಣ ಪಡೆದದ್ದು, ನಿವೃತ್ತಿ ಜೀವನವನ್ನು ನಡೆಸಿದ್ದು, ಕೊನೆಗೆ ಮರಣ...

Post
ಇಂದಿನ ಐಕಾನ್ – ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿಜಿ

ಇಂದಿನ ಐಕಾನ್ – ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿಜಿ

“ನನಗೆ ಅಷ್ಟೊಂದು ಎತ್ತರ ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!” ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ಆದ ರಾಜಕಾರಣಿ, ಪ್ರಖರ ಭಾಷಣಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ! ವಾಜಪೇಯಿ ಬದುಕಿದ ರೀತಿಯೇ ಹಾಗೆ! ಅವರು ಹುಟ್ಟಿದ್ದು 1924 ಡಿಸೆಂಬರ್ 25ರಂದು ಒಬ್ಬ ಅಧ್ಯಾಪಕನ ಮಗನಾಗಿ. ಹಿಂದೀ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಪದವಿ ಪಡೆದ ನಂತರ...

Post
ಇಂದಿನ ಐಕಾನ್ – ಹಿಟ್ಲರನ ಅಹಂಕಾರ ಮುರಿದ ಕಪ್ಪು ಚಿರತೆ ಜೆಸ್ಸಿ ಓವೆನ್ಸ್

ಇಂದಿನ ಐಕಾನ್ – ಹಿಟ್ಲರನ ಅಹಂಕಾರ ಮುರಿದ ಕಪ್ಪು ಚಿರತೆ ಜೆಸ್ಸಿ ಓವೆನ್ಸ್

‘ಮಾನವ ಸೋದರತೆಯ ರಾಷ್ಟ್ರಗಳ ಸಾರ್ವಭೌಮತೆಯನ್ನು ಮೀರಿದೆ’ – ಇದು ನಾನು ನಂಬಿದ ಜೇಸಿಐ ಸಂಸ್ಥೆಯ ಪ್ರಾರ್ಥನೆಯ ಒಂದು ಸಾಲು. ಇದು ನನಗೆ ಆತನ ಬದುಕಿಂದ ಹೆಚ್ಚು ಆಪ್ತವಾಗಿದೆ. ‘ಶತಮಾನದ ಕ್ರೀಡಾಪಟು’ ಎಂದು ಬಿಬಿಸಿ ಆತನಿಗೆ ಗೌರವ ನೀಡಿತು. ಆತ 1980ರಲ್ಲಿ ಮೃತನಾದಾಗ ಆಗಿನ ಅಮೇರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಹೇಳಿದ ಶೃದ್ಧಾಂಜಲಿಯ ಮಾತು ತುಂಬಾ ಮಾರ್ಮಿಕವಾಗಿದೆ. “ನಾನು ಆತನ ಹಾಗೆ ಸರ್ವಾಧಿಕಾರ, ಬಡತನ ಮತ್ತು ವರ್ಣ ತಾರತಮ್ಯದ ವಿರುದ್ಧ ಹೋರಾಡಿದ ಇನ್ನೊಬ್ಬ ಕ್ರೀಡಾಪಟುವನ್ನು ನೋಡಿಯೇ ಇಲ್ಲ!” ಈ...