ಕಾಂಗ್ರೆಸ್ ಪಕ್ಷವು ಪಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರುವ ದಿನ ದೂರವಿಲ್ಲ : ರಮಾನಾಥ ರೈ

ಈ ಬಾರಿಯ ಗ್ರಾಮ ಪಂಚಾಯತು ಚುನಾವಣೆಯಲ್ಲಿ ರಾಜ್ಯದಲ್ಲಿ 32 ಸಾವಿರಕ್ಕೂ ಅಧಿಕ ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಮುಂಬರುವ ತಾಲೂಕು ಪಂಚಾಯತು ಮತ್ತು ಜಿಲ್ಲಾ ಪಂಚಾಯತು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸಿ ಪಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದರು.ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ಸಮಿತಿ ಇದರ ಆಶ್ರಯದಲ್ಲಿ ಇಲ್ಲಿನ ಒಕ್ಕೆತ್ತೂರು ಸಮೀಪದ ಕೊಡಂಗೆಯಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಹಗಲಿರುಳು ದುಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ, ವಿಜೇತ ಸದಸ್ಯರಿಗೆ ಮತ್ತು ಮತದಾರ ಬಂಧುಗಳಿಗೆ ಅಭಿನಂದನಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು .ಸಾಮರಸ್ಯದ ಬದುಕಿಗಾಗಿ ಜಿಲ್ಲೆಯನ್ನು ಬಿಜೆಪಿ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕಾದ ಅನವಾರ್ಯತೆ ಇದೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಮ್.ಎಸ್. ಮೊಹಮ್ಮದ್, ಕೊಳ್ನಾಡು ಗ್ರಾ.ಪಂ. ಮಾಜಿ ಅದ್ಯಕ್ಷ ಸುಭಾಶ್ ಶೆಟ್ಟಿ ಕೊಳ್ನಾಡು, ರಘು ಪೂಜಾರಿ, ಎಂ.ಕೆ ಮೂಸ ಮಾತನಾಡಿದರು.  ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಸದಸ್ಯೆ ಶೋಭಾ ರೈ, ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ ಪೂಜಾರಿ, ವಿಟ್ಲ ಪಟ್ಟಣ ಪಂಚಾಯತು ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು. ‌ಸನ್ಮಾನ ಇದೇ ವೇಳೆ ಸಕ್ರಿಯ ಕಾಂಗ್ರೆಸ್ ಪ್ರಮುಖರಾದ ಸುಭಾಶ್ಚಂದ್ರ ಶೆಟ್ಟಿ ಕುಲಾಲ್, ತಾ.ಪಂ.ಸದಸ್ಯೆ ಶೋಭಾ ರೈ, ಇಕ್ಬಾಲ್ ಕೊಡಂಗೆ, ಅಬ್ದುಲ್ಲ ಕುಂಞ ಕೊಡಂಗಾಯಿ, ಸುಲೈಮಾನ್ ಒಕ್ಕೆತ್ತೂರು, ಜಾವೇದ್ ಕೊಡಂಗೆ ಇವರನ್ನು ಸನ್ಮಾನಿಸಲಾಯಿತು.

ಅಭಿನಂದನೆ ವಿಟ್ಲ ಪಡ್ನೂರು ಗ್ರಾ.ಪಂ. ಗೆ ನೂತನ ಸದಸ್ಯರಾಗಿ ಆಯ್ಕೆಯಾದ ಸಂದೇಶ್ ಶೆಟ್ಟಿ ಬಿಕ್ನಾಜೆ, ಶರೀಫ್ ಕೊಡಂಗೆ, ಅರ್ಶದ್ ಕುಕ್ಕಿಲ, ಲಕ್ಷ್ಮೀ ಕಡಂಬು ಹಾಗೂ ಪರಾಜಿತ ಅಭ್ಯರ್ಥಿಗಳಾದ ಸಿದ್ದೀಕ್ ಸರವು, ಅಝರುದ್ದೀನ್ ಕೊಡಂಗಾಯಿ, ಲಕ್ಷ್ಮೀ ಕೊಡಂಗಾಯಿ, ಲತಾ ತಮ್ಮಯ್ಯ ಗೌಡ, ರಝಿಯಾ ಭಾನು, ಭಾರತಿ ಶೆಟ್ಟಿ, ಇಬ್ರಾಯಿ ಕಡಂಬು, ವಿಮಲ, ಶ್ರೀಲತಾ ನವೀನ ಗೌಡ ಇವರನ್ನು ಹಾಗೂ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಸಲಾಯಿತು .

ಪಕ್ಷಕ್ಕೆ ಸೇರ್ಪಡೆ ಎಸ್ಡಿಪಿಐ ಪಕ್ಷದ ರಹೀಂ ಕುಕ್ಕಿಲ ಅವರಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಕಾಂಗ್ರೆಸ್ ಪಕ್ಷದ ದ್ವಜ ನೀಡುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. . ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ ಸ್ವಾಗತಿಸಿ, ಮುಸ್ತಾಫ ಡಿ.ಬಿ.ವಂದಿಸಿದರು. ನೌಫಲ್ ಕುಡ್ತಮುಗೇರ್ ನಿರೂಪಿಸಿದರು.. .

Leave a Reply

Your email address will not be published.