ಕಾಂಗ್ರೆಸ್ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ವಿಧಿವಶ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ನಿಧನ ಹೊಂದಿದ್ದು- ಪಕ್ಷದ ಅಧ್ಯಕ್ಷರಾದ ಸೋನಿಯಾಗಾಂಧಿಯವರಿಗೆ ಸುದೀರ್ಘಕಾಲ ರಾಜಕೀಯ ಕಾರ್ಯದರ್ಶಿಯಾಗಿ ಪಕ್ಷವನ್ನು ಸೋಲು-ಗೆಲುವುಗಳ ಕಾಲದಲ್ಲಿ ನಿರ್ವಾಜ್ಯ ನಿಷ್ಠೆಯಿಂದ ಮುನ್ನಡೆಸಿದ್ದ ಅಹ್ಮದ್ ಪಟೇಲ್ ತಮ್ಮ ಇಡೀ ಬದುಕನ್ನೇ ಪಕ್ಷಕ್ಕೆ ಮುಡಿಪಾಗಿಟ್ಟವರು.

ಪ್ರಚಾರದ ಬೆಳಕಿನಲ್ಲಿ ಹೆಚ್ಚು ಕಾಣಿಸಿಕೊಳ್ಳದೆ, ರಾಜಕೀಯ ಅಧಿಕಾರಕ್ಕಾಗಿ ಹೆಚ್ಚು ಆಸೆ ಪಡದೆ, ಪಕ್ಷವನ್ನೇ ತನ್ನ ಕುಟುಂಬವೆಂದು ತಿಳಿದುಕೊಂಡು ದುಡಿಯುತ್ತಿದ್ದ ಪಟೇಲ್ ಅವರು ರಾಜಕೀಯ ಬದುಕು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆಲ್ಲ ಮಾದರಿಯಾಗಿದ್ದಾರು.
ಸೋನಿಯಾಗಾಂಧಿಯವರು ಮೊದಲ ಬಾರಿ ಪಕ್ಷದ ಅಧ್ಯಕ್ಷರಾದ ದಿನದಿಂದ ತನ್ನ ಕೊನೆದಿನದ ವರೆಗೆ ಅವರ ರಾಜಕೀಯ ಕಾರ್ಯದರ್ಶಿಯಾಗಿ ಅವರೆಲ್ಲ ದು:ಖ ದುಮ್ಮಾನಗಳನ್ನು ಹಂಚಿಕೊಂಡು ಬೆಂಗಾವಲಿಗೆ ನಿಂತಿದ್ದವರು ಅಹ್ಮದ್ ಪಟೇಲ್.

Leave a Reply

Your email address will not be published.