ದ.ಕ: ಗ್ರಾಮ ಪಂಚಾಯತ್ ಕ್ಲರ್ಕ್ , ಡಾಟಾ ಎಂಟ್ರಿ ಆಪರೇಟರ್, ವಾಟರ್ ಮೆನ್, ಬಿಲ್ ಕಲೆಕ್ಟರ್,ಪಂಪ್ ಆಪರೇಟರ್, ಪಂಪು ಮೆಕಾನಿಕ್,ಜವಾನ,ಸ್ವಚ್ಚತಗಾರ ಇವರಿಗೆ ಪಿಎಫ್ ಮತ್ತು ಇಎಸ್ಐ ನೀಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಮಾಡಿದ್ದು ಪಂಚಾಯತ್ ನೌಕರರಿಗೆ ಸಂತಸ ತಂದ ವಿಚಾರ , ಆದರೆ ಇದಕ್ಕೆ ಅವರ ವೇತನದಿಂದಲೇ ಹಣ ನೀಡುವಂತೆ ಆದೇಶ ಆಗಿರುವುದು ಕಾರ್ಮಿಕ ಕಾನೂನಿಗೆ ವಿರುದ್ಧವಾಗಿದೆ.
ಪಂಚಾಯತ್ ಸಿಬ್ಬಂದಿಗಳು ತಮ್ಮ ವೇತನದಿಂದಲೇ ಭವಿಷ್ಯ ನಿಧಿಗೆ ಹಣ ನೀಡುವುದರಿಂದ ಅವರ ವೇತನವನ್ನು ಕಡಿತಗೊಳಿಸುವ ಪ್ರಮೇಯ ಬಂದಿದೆ.ಇದಕ್ಕೆ ಶೇ 50 ರಷ್ಟು ಹಣವನ್ನು ಸಿಬ್ಬಂದಿಯಿಂದ ಉಳಿದ ಹಣವನ್ನು ವೇತನ ಪಾವತಿದಾರರಿಂದ ನೀಡುವಂತೆ ಆದೇಶ ಮಾಡದೆ ಇರುವುದರ ಬಗ್ಗೆ ಸಿಬ್ಬಂದಿಗಳ ಪರ ನ್ಯಾಯಲಯ ಮೋರೆ ಹೋಗುವುದು ಅನಿವಾರ್ಯ
ಪಂಚಾಯತ್ ನೌಕರರ ವೇತನ ಪರಿಷ್ಕರಣೆ ಯಲ್ಲೂ ಇಲಾಖೆ ಗಮನ ನೀಡದೆ ಹೆಚ್ಚಿನ ಕರ್ತವ್ಯ ನೀಡಿ ನೌಕರರ ನೆಮ್ಮದಿ ಕೆಡುವಂತಾಗಿದೆ ಎಂದು ಪಂಚಾಯತ್ ಸಿಬ್ಬಂದಿ ಒಬ್ಬರು ಮಾಹಿತಿ ನೀಡಿರುವುದನ್ನು ಗಮನ ಹರಿಸಿ ಇಂತ ಲೋಪ ತಡೆಯಲು ಸರ್ಕಾರ ಗಮನ ಹರಿಸುವುದು ಸೂಕ್ತ.
Leave a Reply