ದಕ್ಷಿಣಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ರಕ್ಷಾಬಂಧನ

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಶಾಲೆಟ್ ಪಿಂಟೋ ರವರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈಯವರಿಗೆ ಸಸ್ಯಗಳ ಬೀಜವುಳ್ಳ ಪರಿಸರ ಉಪಯುಕ್ತವಾದ ರಾಕಿ ಕಟ್ಟುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ಸಿಟಿ ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್ ದಾಸ್, ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಕೇಶವ ಮರೋಳಿ, ಝೀನತ್ ಬಂದರ್, ಅಶ್ರಫ್ ಬಜಾಲ್, ಮಾಜಿ ಸದಸ್ಯರಾದ ಪ್ರಕಾಶ್ ಸಾಲ್ಯಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಶಾಂತಳಾ ಗಟ್ಟಿ, ಮಂಜುಳಾ ನಾಯಕ್, ಶಶಿಕಲಾ ಪದ್ಮನಾಭ್, ನಮಿತಾ ರಾವ್, ಜೆಸಿಂತಾ ಆಲ್ಫೆರ್ಡ್, ರೂಪಾ ಚೇತನ್, ಚಂದ್ರಕಲಾ, ವಸಂತಿ, ಚೇತನ್, ಗಿರೀಶ್ ಶೆಟ್ಟಿ, ಅನ್ಸಾರುದ್ದೀನ್ ಸಾಲ್ಮರ, ,ಸಮರ್ಥ್ ಭಟ್, ಸವಾದ್ ಸುಳ್ಯ ಉಪಸ್ಥಿತರಿದ್ದರು. ಶೋಭ ಕೇಶವ್ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published.