ಸುಳ್ಯ : ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಆಲೆಟ್ಟಿ ಮತ್ತು ದೇವಚಳ್ಳ ಗ್ರಾಮದ ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸಿದ ಕೆಪಿಸಿಸಿ ಸಂಯೋಜಕರಾದ ನಂದಕುಮಾರ್ ಜ 28 ರಂದು ಆಲೆಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಒಬ್ಬರಿಗೆ ಆಸ್ಪತ್ರೆ ಚಿಕಿತ್ಸೆಗೆ ಧನಸಹಾಯ, ಅಸೌಖ್ಯದಿಂದ ಇರುವ ರವಿ ಮುಗೇರ ಅವರ ಮನೆಗೆ ರಸ್ತೆ ಸಮಸ್ಯೆ ಯನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದ್ದಾರೆ.ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಪರಿಶಿಷ್ಟ ಜಾತಿ ಕುಟುಂಬಗಳ ಮನೆಗಳಿಗೆ ಹೋಗುವ ದಾರಿಯಲ್ಲಿ ನದಿಗೆ ಕಾಲು ಸೇತುವೆ ನಿರ್ಮಾಣದ ಬಗ್ಗೆ ಕೆಪಿಸಿಸಿ ಪ್ಯಾನ್ ಲಿಸ್ಟ್ ಸದಸ್ಯರಾದ ಭರತ್ ಮುಂಡೋಡಿ ಅವರಲ್ಲಿ ಚರ್ಚೆ ನಡೆಸಿದ್ದಾರೆ.
ಈ ಕಾರ್ಯದಲ್ಲಿ ಶಂಸುದ್ಧೀನ್, ತೇಜ್ ಕುಮಾರ್ ಬಡ್ಡಡ್ಕ, ಸತ್ಯಕುಮಾರ್ ಅಡಿಂಜ, ದೇವಪ್ಪ ನಾಯ್ಕ, ಪ್ರಸನ್ನ ಬಡ್ಡಡ್ಕ,ನವೀನ ಗುಂಡ್ಯ, ಪುರುಷೋತ್ತಮ ದೋಣಿ ಮೂಲೆ, ಶ್ರೀಮತಿ ಸರೋಜಿನಿ, ಶ್ರೀ ಮತಿ ಗೀತಾ, ಶಶಿಧರ ಎಂ.ಜೆ, ಗೋಕುಲ್ ದಾಸ್ ,ವಿಜೇಶ್ ಹಿರಿಯಡ್ಕ , ರಜಾಕ್ ಮತ್ತಿತರರು ಉಪಸ್ಥಿತರಿದ್ದರು.
Leave a Reply