ಕಲ್ಲಡ್ಕ : ನ.15 ಕ್ಕೆ ರಕ್ತದಾನ ಶಿಬಿರ

ಬಿ.ಸಿ.ರೋಡ್ : ಮರ್ಹೂಮ್ ಉಮ್ಮರ್ ಫಾರೂಕ್ ಕಲ್ಲಡ್ಕ ರವರ ಸ್ಮರಣಾರ್ಥ ಝಮಾನ್ ಬಾಯ್ಸ್ ಕಲ್ಲಡ್ಕ, ಬ್ಲಡ್ ಡೋನರ್ಸ್ ಮಂಗಳೂರು, ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಇವುಗಳ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ನ.15 ರಂದು ಬೆಳಿಗ್ಗೆ 9 ರಿಂದ ಮದ್ಯಾಹ್ನ 1ರ ತನಕ ಕಲ್ಲಡ್ಕದ ಸರಕಾರಿ ಶಾಲೆಯಲ್ಲಿ ನಡೆಯಲಿರುವುದು.
ಕಾರ್ಯಕ್ರಮವನ್ನು ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಶೇಖ್ ಮುಹಮ್ಮದ್ ಇರ್ಫಾನಿ ಉದ್ಘಾಟಿಸಲಿದ್ದು ಕಲ್ಲಡ್ಕ ಝಮಾನ್ ಬಾಯ್ಸ್ ಅದ್ಯಕ್ಷ ಮುನಾಝ್ ಅದ್ಯಕ್ಷತೆ ವಹಿಸುವರು.
ರಿಯಾಝ್ ಫರಂಗಿಪೇಟೆ, ರಾಜೇಂದ್ರ ಹೊಳ್ಳ ಕಲ್ಲಡ್ಕ, ಸಿದ್ದೀಕ್ ಪನಾಮಾ, ತೌಫೀಕ್ ಕಲ್ಲಡ್ಕ, ಹಕೀಂ ಇಸ್ಮಾಯಿಲ್ ನಗರ, ಇಮ್ತಿಯಾಝ್ ಗೋಳ್ತಮಜಲು, ಲತೀಫ್ ನೇರಳಕಟ್ಟೆ, ಸಿದ್ದೀಕ್ ಮಂಜೇಶ್ವರ, ಜಿ.ಎಸ್.ಸಿದ್ದೀಕ್ ಕಲ್ಲಡ್ಕ, ಸಂಶುದ್ದೀನ್ ಸನ್ ಲೈಟ್, ಫಲುಲ್ ಕಲ್ಲಡ್ಕ ಮೊದಲಾದವರು ಮುಖ್ಯ ಅತಿಥಿಗಳಾಗಿ ‌ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published.