ಕಂಬೋಡಿ–ಜೋಡುರಸ್ತೆ ಉದ್ಘಾಟನೆ

ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದ ಬಾಂಬಿಲಪಾದವಿಂದ ಕಂಬೋಡಿವರೆಗೆ ಜೋಡುರಸ್ತೆ ಕಾಮಗಾರಿಗೆ ಮಾಜಿ ಸಚಿವರು ರಮಾನಾಥ ರೈ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ವಿ ಶೆಟ್ಟಿ ಇವರು ಸುಮಾರು 2 ಲಕ್ಷ ಅನುದಾನ ಒದಗಿಸಿದ್ದು ಹಾಗೆ ಈ ರಸ್ತೆಯ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ನೆರೆವೇರಿಸಿದರು.

ಈ ಸಂದರ್ಭದಲ್ಲಿ ಬಾಂಬಿಲ ಚರ್ಚ್ ಧರ್ಮಗುರುಗಳಾದ ಪೀಠರ್ ಗೋನ್ಸಾಲ್ವಿಸ್,ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ವಿ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ರಸ್ತೆಗೆ ಸ್ಥಳ ಒದಗಿಸಿದ ತೋಮಸ್ ರೊಡ್ರಿಗಸ್ ಪುಲ್ಲಾಜೆ ಹಾಗೂ ಅಸೈತೋಟ, ದಾಮರ್ಲಪುಡೆ, ಪಡು, ಪುಲ್ಲಾಜೆಯ ನಾಗರೀಕರು ಉಪಸ್ಥಿತರಿದ್ದರು.

Leave a Reply

Your email address will not be published.