ನರಿಕೊಂಬುವಿನಲ್ಲಿ ಹೆಲ್ತ್ ಕಾರ್ಡ್ ವಿತರಣೆ

ಬಂಟ್ವಾಳ: ನಾಗರಿಕ ಜಾಗ್ರತ ಸಮಿತಿ ನರಿಕೊಂಬು ಇದರ ವತಿಯಿಂದ ಕ್ಷೇಮ ಹೆಲ್ತ್ ಕಾರ್ಡ್ ವಿತರಣಾ ಸಮಾರಂಭ ಕಾರ್ಯಕ್ರಮ ನರಿಕೊಂಬುನಲ್ಲಿ ಜರುಗಿತು. ಕಾರ್ಯಕ್ರಮನ್ನು ಮಾಜಿ ಸಚಿವರಾದ ರಮಾನಾಥ ರೈ ಯವರು ಹೆಲ್ತ್ ಕಾರ್ಡ್ ವಿತರಿಸುವ ಮೂಲಕ ಚಾಲನೆ ನೀಡಿದರು ಬಳಿಕ ಸಭೆಯನ್ನು ಉದ್ದೇಶಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ತಾನು ಗಳಿಸಿದರಲ್ಲಿ ಸ್ವಲ್ಪ ಅಂಶವನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸುವವರಿಗೆ ದೇವರ ಆಶೀರ್ವಾದ ಯಾವತ್ತು ಇರುತ್ತದೆ ಎಂದು ರಮಾನಾಥ ರೈ ಮಾತನಾಡಿದರು.

ಜಾಗ್ರತ ಸಮಿತಿ ನರಿಕೊಂಬು ಇದರ ಆಶ್ರಯದಲ್ಲಿ ವರ್ಷಂಪ್ರತಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಸಹಯೋಗದಲ್ಲಿ ನರಿಕೊಂಬು ಮತ್ತು ಶಂಭೂರು ಗ್ರಾಮಗಳ ಫಲಾನುಭವಿಗಳಿಗೆ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ರವರ ಮುತುವರ್ಜಿಯಲ್ಲಿ ಹೆಲ್ತ್ ಕಾರ್ಡ್ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಸೇವಾಂಜಲಿ ಪ್ರತಿಷ್ಠಾನದ ಕ್ರಷ್ಣಕುಮಾರ್ ಪೂಂಜ,ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ,ನಾಗರಿಕ ಜಾಗ್ರತ ಸಮಿತಿ ಅಧ್ಯಕ್ಷ,ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್,ಬೇಬಿ ಕುಂದರ್,ಸುದೀಪ್ ಕುಮಾರ್ ಶೆಟ್ಟಿ,ಆಲ್ಫೋನ್ಸ್ ಮೆನೇಜಸ್,ಉಮೇಶ್ ಬೋಳಂತೂರು,ಮಾಧವ ಪೂಜಾರಿ ಕರ್ಬೆಟ್ಟು,ಚಂದ್ರಶೇಖರ ಪೂಜಾರಿ ಕೋರ್ಯ,ಆಲ್ಬರ್ಟ್ ಮೆನೇಜಸ್ ವೇದಿಕೆಯಲ್ಲಿದ್ದರು.

ಸಮಿತಿ ಪ್ರಮುಖರಾದ ಕ್ರಷ್ಣಪ್ಪ ಪೂಜಾರಿ ನಾಟಿ,ಮಾಧವ ಮಾಣಿಮಜಲು,ಸಾಯಿರಾಮ್ ನಾಯಕ್,ಸುಂದರ ಪೂಜಾರಿ ಏಲಬೆ,ಭರತ್ ರಾಜ್ ಏಲಬೆ,ದಿವಾಕರ ಅಬೆರೊಟ್ಟು,ದಿವಾಕರ ಏಲಬೆ,ಉಮೇಶ್ ನೆಲ್ಲಿಗುಡ್ಡೆ,ಬೋಗನಾಥ ಏಲಬೆ,ಗೋವಿಂದ ಪೂಜಾರಿ ಏಲಬೆ,ಸುಮತಿ ಸದಾನಂದ ಗಣೇಶ ಜನತಾಗ್ರಹ,ಲಿಂಗಪ್ಪ ಕೊಟ್ಟಾರಿ,ಲಕ್ಷ್ಮಣ ಪೂಜಾರಿ ಕಲ್ಯಾಣ ಅಗ್ರಹಾರ,ಗೋಪಾಲ ಅಂಚನ್ ಕರ್ಬೆಟ್ಟು,ನವೀನ್ ಮೆನೇಜಸ್,ಮೋನಪ್ಪ ನಿನ್ನಿಪಡ್ಪು,ಗೀತಾ ಶೇಡಿಗುರಿ,ಪ್ರಸಾದ್ ಕರ್ಬೆಟ್ಟು ಉಪಸ್ಥಿತರಿದ್ದರು.ಸಾಯಿರಾಮ್ ನಾಯಕ್ ಸ್ವಾಗತಿಸಿ,ನವೀನ್ ಮೆನೇಜಸ್ ವಂದಿಸಿದರು,ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ ಪ್ರಸ್ತಾವನೆಗೈದರು,ಉಮೇಶ್ ಬೋಳಂತೂರು ನಿರೂಪಿಸಿದರು.

Leave a Reply

Your email address will not be published.