ನೆಹರು ಚಿಂತನೆಗಳ ಪುನರ್ಮನನ ಇಂದಿನ ಭಾರತಕ್ಕೆ ಅತ್ಯಾವಶ್ಯಕ – ರಮನಾಥ ರೈ

ಮಂಗಳೂರು: ಸ್ವತಂತ್ರ ಭಾರತಕ್ಕೆ ವಿಶ್ವ ಮಾನ್ಯತೆಯನ್ನು ತಂದು ಕೊಟ್ಟು ಅಲಿಪ್ತನೀತಿ, ಪಂಚಾಶೀಲಾ ತತ್ವಗಳ ಮೂಲಕ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಸೆದ ಶಿಲ್ಪಿ ಮಾಜಿ ಪ್ರಧಾನಿ ಜವಾಹಾರಲಾಲ್ ನೆಹರು ರವರ ದೂರ ದ್ರಿಷ್ಟಿಯ ಚಿಂತನೆಗಳ

ಪುನರ್ಮನನ ಇಂದಿನ ಭಾರತಕ್ಕೆ ಅತೀ ಅವಸ್ಯಕವಾಗಿದೆ ಎಂದು ಮಾಜಿ ಸಚಿವರು ಬಿ ರಮಾನಾಥ ರೈ ಹೇಳಿದರು
ದ ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ನೆಹರು ಮೈದಾನದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ಪಂಡಿತ್ ಜವಾಹಾರ್ಲಾಲ್ ನೆಹರುರವರ ಜನ್ಮದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡುತಿದ್ದರು. ಜಿಲ್ಲಾಧ್ಯಕ್ಷರಾದ ಕೆ ಹರೀಶ್ ಕುಮಾರ್ ರವರು ನೆಹರು ಪ್ರತಿಮೆಗೆ ಪುಷ್ಪರ್ಚನೆಮಾಡಿ ಜಯಂತಿಗೆ ಚಾಲನೆ ನೀಡಿ ಗಣ್ಯರನ್ನು ಸ್ವಾಗತಿಸಿ ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ ನೆಹರು ಕುಟುಂಬವನ್ನು ರಾಷ್ಟ್ರ ಗೌರವಿಸುವುದು ನೈಜ ದೇಶಪ್ರೇಮವಾಗಿದೆ ಎಂದರು.

ಸಮಾರಂಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಇಬ್ರಾಹಿಂ ಕೊಡಿಜಾಲ್, ಮಾಜಿ ಶಾಸಕರಾದ ಐವನ್ ಡಿಸೋಜ ಮೊಯಿದಿನ್ ಭಾವ, ಜೆ ಆರ್ ಲೋಬೊ ರವರು ನೆಹರು ಸಾಧನೆಗಳ ಗುಣಗಾನ ಮಾಡಿದರು.

ಇದೆ ಸಂದರ್ಭದಲ್ಲಿ ಇತ್ತೀಚಿಗೆ ಅಕಾಲಿಕ ಮರಣವಣ್ಣಪ್ಪಿದ ಕಾಂಗ್ರೆಸ್ ಯುವ ನೇತಾರ ಮುದಸ್ಸಿರ್ ಕುದ್ರೋಳಿ ಅವರಿಗೆ ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ವಂದೇಮಾತರಂ ಗೀತೆಯೊಂದಿಗೆ ಆರಂಭಗೊಂಡ ಸಭೆಯು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
ಮನಪಾ ವಿರೋಧ ಪಕ್ಷ ನಾಯಕ ಅಬ್ದುಲ್ ರಾವೂಫ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಪದ್ಮನಾಭ ನರಿಂಗಾನ, ಶಶಿಧರ್ ಹೆಗ್ಡೆ, ಸದಾಶಿವ ಉಳ್ಳಾಲ್, ಶಾಲೆಟ್ ಪಿಂಟೋ, ವೇದಿಕೆಯಲ್ಲಿದ್ದರು.
ಮನಪಾ ಮಾಜಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published.