ಪಂಚಾಯತ್ ಚುನಾವಣೆಗೆ ತರಬೇತಿ ಕಾರ್ಯಗಾರ– ಐವನ್ ಡಿಸೋಜ

ಸುಳ್ಯ: ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವವರಿಗೆ ತರಬೇತಿ ಕಾರ್ಯ ಹಮ್ಮಿಕೊಂಡು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕಾರ್ಯ ಮಾಡಲಿದ್ದೇವೆ ಎಂದು

ಗ್ರಾಮ ಪಂಚಾಯತ್ ಚುನಾವಣೆ ಪೂರ್ವಭಾವಿ-ಸಭೆಗೆ ಸುಳ್ಯಕ್ಕೆ ಆಗಮಿಸಿದ ಸುಳ್ಯ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ಉಸ್ತುವಾರಿ ಐವನ್ ಡಿ ಸೋಜ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂಶುದ್ಧೀನ್ ಅವರ ಮನೆಯಲ್ಲಿ ಪತ್ರಿಕೋಷ್ಟಿಯಲ್ಲಿ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ, ಸಂಶುದ್ಧೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಕೆಪಿಸಿಸಿ ಉಸ್ತುವಾರಿ ನಂದಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷರಾದ ರಾಜರಾಮ್ ಬೆಟ್ಟ, ಧರ್ಮಪಾಲ ಕ್ಯೊಂಗಾಜೆ, ಸದಾಶಿವ ಶೆಟ್ಟಿ ಸುರತ್ಕಲ್, ಮುಸ್ತಫ ಹಾಜರಿದ್ದರು.

Leave a Reply

Your email address will not be published.