ಪುತ್ತೂರು:   ಬಾಲವನ ವೈಬ್ ಸೈಟ್ ಅನಾವರಣ

ಡಾ ಶಿವರಾಮ ಕಾರಂತರ ಬಾಲವನದಲ್ಲಿ ಜುಲೈ 24 ರಂದು ಡಾ ಶಿವರಾಮ ಕಾರಂತರ ಬಾಲವನ ವೈಬ್ ಸೈಟ್ ನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಶಾಸಕರಾದ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷ ಕೆ ರಾಧಾಕೃಷ್ಣ ಬೋರ್ಕರ್, ಸಹಾಯಕ ಆಯುಕ್ತಕರಾದ ಯತೀಶ್ ಉಳ್ಳಾಲ, ತಹಶಿಲ್ದಾರ್ ರಮೇಶ್ ಬಾಬು, ನಗರ ಸಭಾ ಪೌರಯುಕ್ತೆ ರೂಪಾ ಡಿ ಶೆಟ್ಟಿ. ಉಪಸ್ಥಿತರಿದ್ದರು.

ಬಾಲವನ ಆಡಳಿತಾಧಿಕಾರಿ ಡಾ ಸುಂದರ ಕೇನಾಜೆ ಸ್ವಾಗತಿಸಿ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ವಂದಿಸಿದರು.
ಬಾಲವನ ಕಾರ್ಯಕ್ರಮ ಸಂಯೋಜಕ ಕ್ರಷ್ಣಪ್ಪ ಬಂಬಿಲ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published.