ಸರ್ಕಿಟ್ ಹೌಸ್ ನಿಂದ ಪಂಜಿನ ಮೆರವಣಿಗೆ

ಮಂಗಳೂರು ವಿಮಾನ ನಿಲ್ದಾಣವನ್ನು ಬಿಜೆಪಿ ಸರಕಾರ ಅದಾನಿ ಕಂಪನಿಗೆ ಮಾರಾಟ ಮಾಡಿ ಸರಕಾರಿ ಸಾಮ್ಯದ ಆಸ್ತಿಯನ್ನು ಖಾಸಗಿಕರಣದ ವಿರುದ್ದ ನವೆಂಬರ್ 18 ರಂದು ಮಂಗಳೂರಿನ ಸರ್ಕಿಟ್ ಹೌಸ್ ನಿಂದ ಬಜಪೆ ವಿಮಾನ ನಿಲ್ದಾಣದವರೆಗೆ ಹಮ್ಮಿಕೊಂಡಿರುವ ಪಂಜಿನ ಮೆರವಣಿಗೆಯ ಅಂಗವಾಗಿ ಮೂಡಬಿದಿರೆಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈ ನೇತ್ರತ್ವದಲ್ಲಿ ಇಂದು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸೀಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಹಾಸ್ ಸನೀಲ್,ಮೂಡಬಿದಿರೆ ಯುವ ಕಾಂಗ್ರೆಸ್ ಉಸ್ತುವಾರಿ ಪ್ರಸಾದ್ ಮಲ್ಲಿ, ಸುರೇಶ್ ಕೋಟ್ಯಾನ್, ಕೊರಗಪ್ಪ,ಅರುಣ್ ಕುಮಾರ್ ಶೆಟ್ಟಿ, ಜಯ ಕುಮಾರ್ ಶೆಟ್ಟಿ, ಸಂತೋಷ್ ಶೆಟ್ಟಿ, ಇರ್ಷಾದ್, ವಜೀರ್, ಕ್ಲಾರಿಯೋ, ಪುರಂದರ ದೇವಾಡಿಗ, ಸುಕುಮಾರ್ ಜೈನ್,ಕರಿಮ್,ಶಂಕರ್ , ಹರೀಶ್ ಅಳಿಯೂರು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.