ಸವಾಲಿಗೆ–ಸವಾಲೆಂದ ರಮಾನಾಥ ರೈ

ಮಂಗಳೂರು: ಅಕ್ರಮ ಬಾಕ್ಸೈಟ್ ದಂಧೆಯಲ್ಲಿ ಬಂಟ್ವಾಳ ಶಾಸಕರ ಪತ್ನಿ ಮತ್ತು ಕೈರಂಗಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಮೀಲಾಗಿದ್ದಾರೆ ಎಂದೂ ಮಾಜಿ ಸಚಿವರಾದ ರಮಾನಾಥ ರೈ ಆರೋಪ ಮಾಡಿರುವುದಕ್ಕೆ ” ದಾಖಲೆ ಸಮೇತ ಆರೋಪ ಸಾಬೀತುಪಡಿಸಲಿ ” ರಾಜಕೀಯ ತ್ಯಜೀಸುವೆ ಎಂದು ಶಾಸಕರಾದ ರಾಜೇಶ್ ನಾಯಕ್ ಹೇಳಿರುವ ಪ್ರತಿಕ್ರಿಯೆಗೆ

ನಿನ್ನೆ ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕೋಷ್ಟಿ ನಡೆಸಿದ ರಮಾನಾಥ ರೈ ಅವರು ರಾಜೇಶ್ ನಾಯಕ್ ಅವರ ಪತ್ನಿ ಹೆಸರಲ್ಲಿ ಕಲ್ಲು ಕ್ವಾರಿಗೆ ಪರವಾನಗಿ ಪಡೆದು ಅದೇ ಪರವಾನಗಿಯಲ್ಲಿ ರೆಡ್ ಬಾಕ್ಸೈಟ್ ನ್ನು ತಮಿಳುನಾಡು, ಆಂಧ್ರಪ್ರದೇಶದ ಸಿಮೆಂಟ್ ಕಂಪನಿಗಳಿಗೆ ಸಾಗಾಟ ಮಾಡಿದ್ದಾರೆ, ಇದರಲ್ಲಿ ಪಿಡಿಒ ಶಾಮೀಲಾಗಿದ್ದಾರೆ ಎಂದು ಗೋಷ್ಠಿ ಯಲ್ಲಿ ರಮಾನಾಥ ರೈ ಅವರು ದಾಖಲೆ ಪತ್ರ ಹಾಜರು ಪಡಿಸಿದ್ದಾರೆ.

ಇದೀಗ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದ್ದು ಬಂಟ್ವಾಳ ಶಾಸಕರು ತಾನು ಹೇಳಿದ ಮಾತು ಪಾಲಿಸುತ್ತಾರ ಎಂಬುದೇ ಈಗೀರುವ ಪ್ರಶ್ನೆ.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ವಿಧಾನ ಪರಿಷತ್ ಸದಸ್ಯ ಮಾಜಿ ಸದಸ್ಯರಾದ ಐವನ್ ಡಿಸೋಜ, ಮಾಜಿ ಮೇಯರ್ ಗಳಾದ ಹರಿನಾಥ, ಶಶಿಧರ ಹೆಗ್ಡೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೇಟ್ ಪಿಂಟೋ, ವಿಶ್ವಾಸ್ ಕುಮಾರ್ ದಾಸ್, ಸಂತೋಷ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಸದಾಶಿವ ಉಳ್ಳಾಲ ಇದ್ದರು.

Leave a Reply

Your email address will not be published.