ಸುಳ್ಯ: ಕೋಲ್ಚಾರು ನಲ್ಲಿ ಸರಳ ರೀತಿಯಲ್ಲಿ 24 ನೇ ವರ್ಷದ ಗಣೇಶ ಚತುರ್ಥಿ ಅಚರಣೆ “

ಕೋಲ್ಚಾರು ಶ್ರೀ ಶಾರದಾಂಬಾ ಭಜನ ಮಂದಿರದಲ್ಲಿ 24 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಪೆರಾಜೆ ರಾಮಚಂದ್ರ ಭಟ್ ಇವರ ನೇತೃತ್ವದಲ್ಲಿ ಪ್ರಾತಃಕಾಲ ಬೆಳಿಗ್ಗೆ ಶ್ರೀ ಗಣಪತಿ ಹೋಮ , ಶ್ರೀ ಗಣೇಶನ ವಿಗ್ರಹ ಪ್ರತಿಷ್ಠಾಪನೆ , ತಂದನಂತರ ಭಜನ ಕಾರ್ಯಕ್ರಮವು ನೆರವೇರುವುದರ ಮೂಲಕ ಮದ್ಯಾಹ್ನ ಮಹಾಪೂಜೆ ಮುಗಿದ ನಂತರ ಶ್ರೀ ಗಣಪತಿಯ ವಿಗ್ರಹವನ್ನು ವಿಸರ್ಜನೆ ಮಾಡುವುದರೊಂದಿಗೆ ಬಹಳ ಸರಳ ರೀತಿಯಲ್ಲಿ ಸರಕಾರದ ನಿಯಮದಂತೆ ಆಚರಣೆ ಮಾಡಲಾಯಿತು . ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಧರ್ಮಪಾಲ ಕೊಯಿಂಗಾಜೆ , ಉಪಾದ್ಯಕ್ಷರಾದ ತೀರ್ಥಪ್ರಸಾದ್ ಕೊಯಿಂಗಾಜೆ , ಕೋಶಾಧಿಕಾರಿಯಾದ ಮಾಲಿಂಗ ಕಣಕ್ಕೂರು , ಕಾರ್ಯದರ್ಶಿಯಾದ ಯತೀಶ್ ಬಾಳ್ಯಾಡಿ , ಜೊತೆ ಕಾರ್ಯದರ್ಶಿ ಸತೀಶ್ ಕೊಯಿಂಗಾಜೆ , ಅಲ್ಲದೆ ಪುರುಷೋತ್ತಮ ಕೋಲ್ಚಾರು , ಹರೀಶ್ ಕೊಯಿಂಗಾಜೆ , ಸುದರ್ಶನ ಪಾತಿಕಲ್ಲು , ಸೀತಾರಾಮ ಕೊಲ್ಲಾರಮೂಲೆ , ಶ್ರೀದರ ಕೊಯಿಂಗಾಜೆ , ರಾಧಾಕೃಷ್ಣ ಕೊಯಿಂಗಾಜೆ , ರೋಹಿತ್ ಕೊಯಿಂಗಾಜೆ , ಯತಿರಾಜ್ ಕೊಯಿಂಗಾಜೆ ,ಧನು ಕೋಲ್ಚಾರು , ದಯಾನಂದ ಪಾತಿಕಲ್ಲು , ಆನಂದ ಕಡಿಕಡ್ಕ , ಪ್ರಣೀತ್ ಕಣಕ್ಕೂರು , ಕಮಲಾಕ್ಷ ಕೊಯಿಂಗಾಜೆ , ಪ್ರಣೀತ್ ಕಣಕ್ಕೂರು ,ವಾಮನ ಕೊಯಿಂಗಾಜೆ ಸೀತಾರಾಮ ಕಣಕ್ಕೂರು , ದಿನೇಶ ಕಣಕ್ಕೂರು , ಉಪಸ್ಥಿತರಿದ್ದರು .

Leave a Reply

Your email address will not be published.