February 7, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರಾವಳಿ ಸುದ್ದಿ ನೂತನ ವೆಬ್ ಸೈಟ್ ಉದ್ಘಾಟನೆ

 

ಬಂಟ್ವಾಳ : ಕರಾವಳಿ ಸುದ್ದಿ ವಾರಪತ್ರಿಕೆಯ ನೂತನ ವೆಬ್ ಸೈಟ್ www.karavalisuddi.com ಸಪ್ಟೆಂಬರ್ 8ರ ಭಾನುವಾರ ಲೋಕಾರ್ಪಣೆಗೊಂಡಿತು. ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿ’ಸೋಜ ನೂತನ ವೆಬ್ ಸೈಟ್ ಅನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು ಮತ್ತು ಶುಭ ಹಾರೈಸಿದರು.
ಕಥೊಲಿಕ್ ಸಭಾದ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಮಾತನಾಡಿ, ಮಾತೆ ಮೇರಿಯಮ್ಮನವರ ಹುಟ್ಟುಹಬ್ಬದ ದಿನದಂದೇ ಕರಾವಳಿ ಸುದ್ದಿ ವಾರಪತ್ರಿಕೆಯ ತಂಡ ನೂತನ ವೆಬ್ ಸೈಟ್ ಆರಂಭಿಸಿರುವುದು ಸಂತೋಷದ ವಿಚಾರ ಎಂದ ಅವರು, ಹೇಗೆ ಕನ್ಯಾ ಮರಿಯಮ್ಮನ ಮುಕಾಂತರ ಧರೆಗೆ ಇಳಿದು ಬಂದ ಪ್ರಭು ಯೇಸು ಕ್ರಿಸ್ತರು ಪ್ರಪಂಚಕ್ಕೆ ಬೆಳಕಾದರು ಹಾಗೆಯೇ ಈ ಮಾಧ್ಯಮ ಸಮಾಜಕ್ಕೆ ಬೆಳಕಾಗಲಿ ಎಂದು ಹಾರೈಸಿದರು.


ಕರಾವಳಿ ಸುದ್ದಿ ವಾರಪತ್ರಿಕೆ ಸಂಪಾದಕ ರೋಷನ್ ಬೊನಿಫಾಸ್ ಮಾರ್ಟಿಸ್ ರವರು ಮಾತನಾಡಿ, ಕರಾವಳಿ ಸುದ್ಧಿ ವಾರಪತ್ರಿಕೆಗೆ ಓದುಗರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ, ಈ ಪ್ರೇರಣೆಯಿಂದಲೇ ನಮ್ಮ ಬಳಗ ನೂತನ ವೆಬ್ ಸೈಟ್ ಆರಂಭಿಸಿದ್ದು, ಮುಂದಿನ ದಿನಗಳಲ್ಲಿಯೂ ಅರಿವಿನತ್ತ ನಮ್ಮಚಿತ್ತ ಎನ್ನುವ ಘೋಷವಾಕ್ಯದೊಂದಿಗೆ ಮುನ್ನಡೆಯಲಿದೆ ಎಂದರು.
ಸೂರಿಕುಮೇರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ವೀವನ್ ಆಲ್ವಿನ್ ಪಾಯ್ಸ್, ಚರ್ಚ್ ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ, ಕಥೋಲಿಕ್ ಸಭಾ ಸೂರಿಕುಮೇರು ಘಟಕದ ಅಧ್ಯಕ್ಷ ತೊಮಸ್ ಲಸ್ರಾದೋ, ಉಪಸಂಪಾದಕಿ ಅನಿತಾ ಮಾರ್ಟಿಸ್ ಮತ್ತಿತರರು ಉಪಸ್ಥಿತರಿದ್ದರು. ಚಲನಚಿತ್ರ ನಟ, ಕರಾವಳಿ ಸುದ್ದಿ ಪತ್ರಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೇತನ್ ರೈ ಮಾಣಿ ಕಾರ್ಯಕ್ರಮ ನಿರೂಪಿಸಿದರು.

 

You may also like

News

ಜೆರಾರ್ಡ್ ಟವರ್ಸ್ ರವರ ಏಕಾಂಗಿ ಪ್ರತಿಭಟನೆಗೆ ಕಣ್ಣುಗಳನ್ನು ತೆರೆದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು

ಧರೆಗುರುಳಿಸಿದ ಕದ್ರಿ ಶಿವಭಾಗ್ ನಲ್ಲಿರುವ ಒಣ ಮರ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ಗಿಟ್ಟಿಸಿಕೊಂಡ ಸಾಮಾಜಿಕ ಕಾರ್ಯಕರ್ತ ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಶಿವಭಾಗ್ ಬಸ್
News

‘FOUNDER’S DAY’ was celebrated at Lourdes Central School Bejai Mangaluru

“The things you do for yourself are gone when you are gone, but the things you do for others, remain

You cannot copy content of this page