ಕೆಪಿಎಸ್ ಸಿ ಗೆ ಮಂಗಳೂರಿನ ವಕೀಲೆ ಎಲ್ಫ್ರೀಡಾ ನೇಮಕ
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಮಂಗಳೂರಿನ ವಕೀಲೆ ಎಲ್ಫ್ರೀಡಾ ಡಿಸಿಲ್ವಾ ಅವರನ್ನು ನೇಮಕ ಮಾಡಲಾಗಿದೆ. ಇವರು ಮಂಗಳೂರು ಧರ್ಮಕ್ಷೇತ್ರದ ಕಾಸ್ಸಿಯಾ ಚರ್ಚ್ ನ ಸದಸ್ಯೆ ಹಾಗೂ ಮಂಗಳೂರು ವಿಭಾಗದ ಎಸಿಎಫ್ ಕ್ಲಿಫರ್ಡ್ ಲೋಬೊ ಇವರ ಪತ್ನಿಯಾಗಿದ್ದಾರೆ. ಆಯೋಗದಲ್ಲಿ ಅಧಿಕಾರೇತರ ವರ್ಗದಿಂದ ಖಾಲಿ ಇದ್ದ ಹುದ್ದೆಗೆ ಎಲ್ಫ್ರೀಡಾ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಆಯೋಗದಲ್ಲಿ ಒಟ್ಟು 16 ಸದಸ್ಯ ಸ್ಥಾನಗಳಿದ್ದು, ಈ ನೇಮಕದಿಂದ ಎಲ್ಲಾ ಸ್ಥಾನಗಳೂ ಭರ್ತಿಯಾದಂತಾಗಿದೆ.