ಬಜ್ಪೆಯ ಸಂತ ಜೋಸೆಫರ ದೇವಾಲಯದಲ್ಲಿ ಮೊಂತಿ ಹಬ್ಬ ಆಚರಣೆ
ಬಜ್ಪೆಯ ಸಂತ ಜೋಸೆಫರ ದೇವಾಲಯದಲ್ಲಿ ಸಪ್ಟಂಬರ್ 8ರಂದು ಮೊಂತಿ ಹಬ್ಬ ಆಚರಣೆಯನ್ನು ಭಕ್ತಿಪೂರ್ವಕವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗಿನ 8.00 ಗಂಟೆಗೆ ಸರಿಯಾಗಿ ಫರೊಕಿಯಲ್ ಶಾಲೆಯ ಆವರಣದಿಂದ ಮೇರಿ ಮಾತೆಯ ವಿಗ್ರಹವನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ತಂದು ಸಂಭ್ರಮದ ಬಲಿ ಪೂಜೆಯನ್ನು ನಡೆಸಲಾಯಿತು.
ಪೂಜೆಯ ಬಳಿಕ ಬಜ್ಪೆ ಸೈಂಟ್ ಜೋಸೆಫ್ ಹೈಸ್ಕೂಲ್ 8ನೇ ತರಗತಿಯ ವಿದ್ಯಾರ್ಥಿ ವರುಣ್ ಡಿಕೋಸ್ತ ಥೈಲ್ಯಾಂಡಿನಲ್ಲಿ ನಡೆದ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದು ಮಂಗಳೂರಿಗೆ ಮತ್ತೊಂದು ಗರಿಮೆ ತಂದಿದ್ದಾನೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಜಯಗಳಿಸಿದ್ದಾನೆ ಎಂಬುವುದು ಹೆಗ್ಗಳಿಕೆ ವಿಚಾರ. ಕ್ಯಾಲಿಕಟ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದ ವರುಣ್ ಡಿ’ಕೋಸ್ತ, ಅಂತಾರಾಷ್ಟ್ರೀಯ ಮಟ್ಟದ ಟ್ಯಾಲೇಂಟ್ ಮತ್ತು ಫ್ಯಾಷನ್ ಲೋಕದಲ್ಲಿ ನಡೆಯುವ ಈ ಸ್ಪರ್ಧೆ ಆಗಸ್ಟ್ 7ರಿಂದ 11ರವರೆಗೆ ಥೈಲ್ಯಾಂಡ್ ನಲ್ಲಿ ನಡೆದಿತ್ತು. ಬೊಸ್ವಾನಾ, ಸೌತ್ ಆಫ್ರಿಕಾ, ಲೆಬನಾನ್, ಅರ್ಮೇನಿಯಾ, ಯುಎಇ, ಒಮಾನ್, ಥೈಲ್ಯಾಂಡ್, ಮಲೇಶಿಯಾ, ಫಿಲಿಪೈನ್ಸ್, ಇಂಡೋನೇಷ್ಯಾ, ವಿಯೆಟ್ನಾಂ, ಖಜಕಿಸಾತ್ತನ್ ಈ ರೀತಿ 21 ಅಂತಾರಾಷ್ಟ್ರೀಯ 57 ಸ್ಪರ್ಧಿಗಳೊಂದಿಗೆ, 13-15ರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಗೆಲುವು ಸಾಧಿಸಿ ಭಾರತ ದೇಶಕ್ಕೆ ಕೀರ್ತಿ ತಂದು ಕೊಟ್ಟಿದ್ದಾನೆ. ವರುಣ್ ಡಿ’ಕೋಸ್ತ ಬಜ್ಪೆಯ ಲಿಡ್ವಿನ್ ಡಿಕೋಸ್ತಾ ಹಾಗೂ ವಿನ್ಸೆಂಟ್ ಡಿಕೋಸ್ತಾ ದಂಪತಿಗಳ ಮೂವರು ಮಕ್ಕಳಲ್ಲಿ ಕಿರಿಯ ಮಗ. ಇವನ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು.
ಬಜ್ಪೆ ಚರ್ಚ್ ನ ಪ್ರಧಾನ ಧರ್ಮ ಗುರುಗಳಾದ ವಂದನಿಯ ಫಾದರ್ ಡಾ. ರೊನಲ್ಡ್ ಕುಟಿನ್ಹೊ, ಸೈಂಟ್ ಜೋನ್ ಪಾವ್ಲ್ ದ್ವಿತೀಯ ಶ್ರೈನ್ ಇಲ್ಲಿಯ ವಂದನೀಯ ಫಾದರ್ ಅನಿಲ್ ರೋಶನ್ ಲೋಬೊ, ಸಹಾಯಕ ಧರ್ಮ ಗುರುಗಳಾದ ವಂದನೀಯ ಫಾದರ್ ವಿವಿಯನ್ ನಿಶಾಂತ್ ರೊಡ್ರಿಗಸ್, ಪಾಲಾನ ಸಮಿತಿಯ ಉಪಾಧ್ಯಕ್ಷ ಸ್ಟೇನಿ ಡಿಸೋಜ, ಕಾರ್ಯದರ್ಶಿ ಗ್ರೇಸಿ ಸಿಕ್ವೇರಾ ಹಾಗೂ ನೂರಾರು ಭಕ್ತರು ಹಾಜರಿದ್ದರು.