ಸೂರಿಕುಮೇರು ಚರ್ಚ್ ನಲ್ಲಿ ಶಿಕ್ಷಕರ ದಿನಾಚರಣೆ
ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಐಸಿವೈಯಂ ಸೂರಿಕುಮೇರು ಬೊರಿಮಾರ್ ಸಂಘಟನೆಯ ಮುಂದಾಳತ್ವದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ 47 ವರ್ಷಗಳ ಹಿಂದೆ ಸೂರಿಕುಮೇರು ಚರ್ಚ್ ನಲ್ಲಿ ಧರ್ಮಗುರುಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ವಂದನೀಯ ಫಾದರ್ ಲಾರೆನ್ಸ್ ಮಾರ್ಟಿಸ್ ಆಗಮಿಸಿ ದಿವ್ಯ ಬಲಿಪೂಜೆಯನ್ನು ನಡೆಸಿ ಶಿಕ್ಷಕರಿಗೆ ಹಾಗೂ ಭಕ್ತಾದಿಗಳಿಗೆ ದೇವರ ಆಶೀರ್ವಾದವನ್ನು ಬೇಡಿದರು. ಸೂರಿಕುಮೇರು ಚರ್ಚ್ ನ ಅಭಿವೃದ್ಧಿಯನ್ನು ಕಂಡು ವಿಸ್ಮಿತರಾಗಿ ಬಹಳ ವರ್ಷಗಳ ನಂತರ ನನ್ನ ಮನೆಗೆ ಬಂದಂತೆ ಆಯಿತು ಎಂದು ಹರ್ಷ ವ್ಯಕ್ತಪಡಿಸಿದರು.
ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ ಇವರ ಮಾರ್ಗದರ್ಶನದಲ್ಲಿ ಪೂಜೆಯ ಬಳಿಕ ಚರ್ಚ್ ಸಭಾಂಗಣದಲ್ಲಿ ಶಿಕ್ಷಕರಿಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ, ಐಸಿವೈಯಂ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷೆ ಪ್ರಿನ್ಸಿಟಾ ಡಿಸೋಜ, ಕಾರ್ಯದರ್ಶಿ ವಿನಿಶಾ ಮಸ್ಕರೇನ್ಹಸ್ ಹಾಗೂ ಶಿಕ್ಷಕಿ ಜೆಸಿಂತಾ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.