February 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆಧಾರ್ ಕಾರ್ಡ್ ಅಪ್ಡೇಟ್‌ಗೆ ಸಪ್ಟಂಬರ್14 ಕೊನೇ ದಿನ:

Pin page

ಆಧಾರ್ ಕಾರ್ಡ್ ಅಪ್ಡೇಟ್‌ಗೆ ಸಪ್ಟಂಬರ್14 ಕೊನೇ ದಿನವಾಗಿದೆ. ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಅತ್ಯಂತ ಮುಖ್ಯವಾದ ದಾಖಲೆಯಾಗಿದ್ದು, ಹಲವಾರು ಸ್ಥಳಗಳಲ್ಲಿ ಇದು ಕಡ್ಡಾಯವಾಗಿದೆ. ಆದರೆ ಹಲವರಿಗೆ ತಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಬಗ್ಗೆ ತುಂಬಾ ಬೇಸರವಿರುತ್ತದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನೀಡುವ ಸೇವೆಗಳನ್ನು ಪಡೆಯಲು ನಾಗರಿಕರಿಗೆ ಆಧಾರ್ ಕಡ್ಡಾಯವಾಗಿದೆ.

ಫೋಟೋ ಬದಲಾವಣೆಗೆ ಸರಳ ಹಂತಗಳು:

ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸುವ ಆಯ್ಕೆಗಳಿವೆ. ಹಲವರಿಗೆ ಈ ಬಗ್ಗೆ ತಿಳಿದಿಲ್ಲ. ಸರಳ ಹಂತಗಳ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಸುಲಭವಾಗಿ ನವೀಕರಿಸಬಹುದು. ಇದಕ್ಕೆ ರೂಪಾಯಿ 100 ಶುಲ್ಕ ವಿಧಿಸಲಾಗುತ್ತದೆ. ಸಪ್ಟಂಬರ್ 14ರ ಒಳಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಲು ಅವಕಾಶವಿದೆ. ಆದರೆ, ಫೋಟೋವನ್ನು ಆನ್‌ಲೈನ್‌ನಲ್ಲಿ ನವೀಕರಿಸಲಾಗುವುದಿಲ್ಲ. ಫೋಟೋವನ್ನು ನವೀಕರಿಸಲು ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು. ಆದರೆ ನೀವು ನೋಂದಣಿ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ಆಧಾರ್ ಕೇಂದ್ರಕ್ಕೆ ಹೋಗುವ ಮೊದಲು ಅದನ್ನು ಭರ್ತಿ ಮಾಡಬಹುದು.
ಆಧಾರ್ ಕಾರ್ಡ್ ಫೋಟೋವನ್ನು ಬದಲಾಯಿಸುವ ಮತ್ತು ನವೀಕರಿಸುವ ಹಂತಗಳು ಇಲ್ಲಿವೆ.

* ಮೊದಲು ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.

*ಯುಐಡಿಎಐ ವೆಬ್‌ಸೈಟ್‌ನಿಂದ ಆಧಾರ್ ನೋಂದಣಿ/ ತಿದ್ದುಪಡಿ/ ನವೀಕರಣ ಫಾರ್ಮ್ ಡೌನ್‌ಲೋಡ್ ಮಾಡಿ. ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.

* ಆಧಾರ್ ಕಾರ್ಯ ನಿರ್ವಾಹಕರಿಗೆ ಬಯೋಮೆಟ್ರಿಕ್ ವಿವರಗಳನ್ನು ಸಲ್ಲಿಸಿ.

* ಆಧಾರ್ ಕಾರ್ಯ ನಿರ್ವಾಹಕರು ಎಲ್ಲಾ ವಿವರಗಳನ್ನು ಮತ್ತು ಬಯೋಮೆಟ್ರಿಕ್ ಅನ್ನು ಪರಿಶೀಲಿಸುತ್ತಾರೆ.

* ನಂತರ ಹೊಸ ಚಿತ್ರದ ಮೇಲೆ ಕ್ಲಿಕ್ ಮಾಡಿ ಮತ್ತು ಹೊಸ ಚಿತ್ರವನ್ನು ಆಧಾರ್ ಸಂಖ್ಯೆಯಲ್ಲಿ ಸೇರಿಸಲಾಗುತ್ತದೆ. ನೀವು ಬಯಸಿದಲ್ಲಿ ನಿಮ್ಮ ಲೈವ್ ಫೋಟೋವನ್ನು ಸಹ ನವೀಕರಿಸಬಹುದು.

* ರೂಪಾಯಿ 100 ಶುಲ್ಕ ಪಾವತಿಸಿ.

* ನಂತರ ಆಧಾರ್ ಕಾರ್ಯ ನಿರ್ವಾಹಕರು ನಿಮಗೆ ಯುಆರ್‌ಎನ್ ಹೊಂದಿರುವ ಸ್ವೀಕೃತಿ ಸ್ಲಿಪ್ ಅನ್ನು ನೀಡುತ್ತಾರೆ.

* ನೀವು ಯುಐಡಿಎಐ ಆಧಾರ್ ನವೀಕರಣ ಸ್ಥಿತಿಯನ್ನು ಪರಿಶೀಲಿಸಲು ಒದಗಿಸಲಾದ ಯುಆರ್‌ಎನ್ ಅನ್ನು ಬಳಸಬಹುದು.

* 90 ದಿವಸಗಳಲ್ಲಿ ವಿವರಗಳನ್ನು ನವೀಕರಿಸಲಾಗುತ್ತದೆ.

You may also like

News

ಪ್ರಸಿದ್ದ ಚಲನಚಿತ್ರ ನಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೇತನ್ ರೈ ಮಾಣಿ ಇವರ ಮಗಳು ವೆನ್ಯ ರೈ ನಾಯಕಿಯಾಗಿ ನಟಿಸಿದ ‘ಆರಾಟ’ ಕನ್ನಡ ಸಿನಿಮಾ 16ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ

ಬೆಂಗಳೂರಿನಲ್ಲಿ ಮಾರ್ಚ್ 1ರಿಂದ 8ರ ತನಕ ನಡೆಯಲಿರುವ 16ನೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಪ್ರಸಿದ್ದ ಚಲನಚಿತ್ರ ನಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚೇತನ್
News

 ಗೆಳೆಯರ ಬಳಗ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮ

ಗೆಳೆಯರ ಬಳಗ ಅಕ್ಷಯನಗರ (ರಿ.) ನಿಡಿಗಲ್ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮವು ಫೆಬ್ರವರಿ 9ರಂದು ಆದಿತ್ಯವಾರ ಕಲ್ಮಂಜ ಗ್ರಾಮದ ಅಕ್ಷಯನಗರದ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

You cannot copy content of this page