ವಿಟ್ಲದ ಹೊರೈಝನ್ ಶಾಲೆಯಲ್ಲಿ ಮಿಲಾದ್ ಫೆಸ್ಟ್ ಬ್ರೀಝೇ ಮದೀನಾ.
ವಿಟ್ಲದಲ್ಲಿರುವ ಹೊರೈಝನ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳ ಮಿಲಾದ್ ಫೆಸ್ಟ್ ಬ್ರೀಝೇ ಮದೀನಾ ” ಕಾರ್ಯಕ್ರಮವು ಶಾಲೆಯ ಅಧ್ಯಕ್ಷ ಅಝೀಝ್ ಸನ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ದಾವೂದ್ ಹನೀಫಿ ದುವಾದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಶಾಲಾ ಉಪಾಧ್ಯಕ್ಷ ವಿ.ಕೆ.ಎಂ. ಅಶ್ರಫ್, ಸಲಹೆಗಾರ ವಿ.ಎಚ್. ಅಶ್ರಫ್, ಕೋಶಾಧಿಕಾರಿ ಅಂದುಞಿ ಗಮಿ, ಕಾರ್ಯದರ್ಶಿ ನೋಟರಿ ಅಬೂಬಕರ್, ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು, ಮಸೀದಿಯ ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಟ್ರಸ್ಟಿಗಳಾದ ಶೀತಲ್ ಇಕ್ಬಾಲ್, ಅಬ್ದುಲ್ ಹಮೀದ್ ಬದ್ರಿಯಾ, ಇಸಾಕ್ ಸಾಹೇಬ್ ವೇದಿಕೆಯಲ್ಲಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು, ಪ್ರವಾದಿ ಪ್ರೇಮದ ಹಾಡು, ಭಾಷಣಗಳು ಹಾಗೂ ವಿವಿಧ ಕಾರ್ಯಕ್ರಮಗಳು ನಡೆದುವು. ಸದರ್ ಉಮ್ಮರ್ ಸಅದಿ ಸ್ವಾಗತಿಸಿ, ಇಸ್ಮಾಯಿಲ್ ಹನೀಫಿ ವಂದಿಸಿದರು. ಸ್ವಾದಿಕ್ ಸಖಾಫಿ ನಿರೂಪಿಸಿದರು.