March 24, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ʻಸಾಹಿತ್ಯದ ಮೂಲಕವೂ ಅನ್ಯಾಯದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಬಹುದುʼ-ಮೆಲ್ವಿನ್ ಪಿಂಟೊ ನೀರುಡೆ

ಮ೦ಗಳೂರು: ನಾವು ನೇರವಾಗಿ ಹೇಳಲಾಗದುದನ್ನು ಸಾಹಿತ್ಯದ ಮೂಲಕ ಹೇಳಿ ಅನ್ಯಾಯದ ವಿರುದ್ದ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಬಹುದುʼ ಎಂದು ಕೊಂಕಣಿಯ ಪ್ರಮುಖ ಸಮಕಾಲೀನ ಕಥೆಗಾರ ಮೆಲ್ವಿನ್ ಪಿಂಟೊ ನೀರುಡೆ ಹೇಳಿದರು. ಅವರು ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ ಆರಂಭಿಸಿರುವ ʻಬೊಲ್ಕಾಂವ್ʼ ಮಾಸಿಕ ಸಾಹಿತ್ಯಾವಲೋಕನದ ಮೊದಲ ಸಭೆಯಲ್ಲಿ ಸಣ್ಣ ಕಥೆಗಳು ಮತ್ತು ನಾನುʼ ಎಂಬ ವಿಷಯದ ಕುರಿತು ಮಾತನಾಡಿದರು.

 

“ಅರುಂಧತಿ ರಾಯ್ ಅವರು ತಮ್ಮ ಎರಡನೇ ಕಾದಂಬರಿ ʻದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್ʼನಲ್ಲಿ ಸಾಹಿತ್ಯದ ವ್ಯಾಪ್ತಿಯಲ್ಲೇ ನಿಂತು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ್ದಾರೆ. ಚಾ. ಫ್ರಾ. ಡಿಕೊಸ್ತಾರವರು ತನ್ನ ನಾಟಕಗಳಲ್ಲಿ ಹಾಗೂ ಕವಿತೆಗಳಲ್ಲಿ ಈ ಪ್ರಯತ್ನವನ್ನು ಮಾಡಿದ್ದಾರೆ. ದಲಿತ ಸಾಹಿತ್ಯದಲ್ಲೂ ನಾವು ಇದನ್ನು ಕಾಣುತ್ತೇವೆ. ನನ್ನ ಪ್ರಕಾರ ಇಂದಿನ ಸಂದರ್ಭದಲ್ಲಿ ಸಾಹಿತ್ಯಕ್ಕೆ ಬಹಳ ಮಹತ್ವವಿದೆ ಎ೦ದರು.

ಕಾರ್ಯಕ್ರಮವನ್ನು ಸಂತ ಅಲೋಶಿಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂದನೀಯ ಡಾ| ಪ್ರವೀಣ್ ಮಾರ್ಟಿಸ್ ಅಬ್ಬಲ್ಲಿಗೆ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಬೊಲ್ಕಾಂವ್ ಉದ್ಘಾಟಿಸಿದ ವಂದನೀಯ ಡಾ| ಪ್ರವೀಣ್ ಮಾರ್ಟಿಸ್ ಮಾತನಾಡಿ ʻ144 ವರ್ಷಗಳ ಹಿಂದೆ ಸಂತ ಅಲೋಶಿಯಸ್ ಕಾಲೇಜು ಸ್ಥಾಪನೆಯಾದಾಗಿನಿಂದ ಕೊಂಕಣಿ ಭಾಷೆ ಮತ್ತು ವಿವಿಧ ಭಾಷಾ ಚಟುವಟಿಕೆಗಳನ್ನು ಜೆಸ್ವಿಟ್ ಧರ್ಮಗುರುಗಳು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಬೊಲ್ಕಾಂವ್ ಮಾಸಿಕ ಸಾಹಿತ್ಯ ಮಂಚದ ಮೂಲಕ ಕೊಂಕಣಿ ಭಾಷೆಯನ್ನು, ಅದರ ಸಾಹಿತಿಗಳನ್ನು ಮತ್ತು ಅವರ ಸಾಹಿತ್ಯವನ್ನು ಅನುಭವಿಸಲು ಸಾಧ್ಯವಾಗಲಿ ಮತ್ತು ಇಲ್ಲಿನ ಸಂವಾದ ಕೊಂಕಣಿ ಭಾಷೆಯ ಬೆಳವಣಿಗೆಗೆ ಸ್ಪೂರ್ತಿದಾಯಕವಾಗಲಿ ʼ ಎಂದು ಶುಭ ಹಾರೈಸಿದರು.

ಕೊಂಕಣಿ ಸಂಸ್ಥೆಯ ನಿರ್ದೇಶಕ ವಂದನೀಯ ಡಾ| ಮೆಲ್ವಿನ್ ಪಿಂಟೋ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಲ್ವಿನ್ ಡೆಸಾ, ʻಬೊಲ್ಕಾಂವ್ʼ ಸಾಹಿತ್ಯ ಮಂಚದ ಸಂಚಾಲಕ ಮತ್ತು ಹಿರಿಯ ಪತ್ರಕರ್ತ ಎಚ್. ಎಂ. ಪೆರ್ನಾಲ್ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆಯ ಕಾರ್ಯ ಸಂಯೋಜಕ ಜೋಕಿಂ ಪಿಂಟೋ ವೇದಿಕೆಯಲ್ಲಿದ್ದರು.

ಬೊಲ್ಕಾಂವ್ ಮಾಸಿಕ ಸಭೆಯ ಸಂಚಾಲಕರಾದ ಎಚ್. ಎಂ. ಪೆರ್ನಾಲ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಎರಡನೇ ಬೊಲ್ಕಾಂವ್ ಸಭೆಯು ಅಕ್ಟೋಬರ್ 12ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಸಚಿವ ಡಾ| ಅಲ್ವಿನ್ ಡೆಸಾ, ಅವರು `ಸಾಹಿತ್ಯ ಮತ್ತು ವಿಮರ್ಶೆʼ ಕುರಿತು ಈ ಸಭೆಯಲ್ಲಿ ಮಾತನಾಡಲಿದ್ದಾರೆ.

You may also like

News

Saint Philomena College in Puttur Celebrates the Inauguration of its Autonomous Status

Saint Philomena College, Puttur managed by the Catholic Board of Education, Mangaluru, proudly announced its official recognition as an Autonomous
News

ಒಳ್ಳೆಯ ಪ್ರಸ್ತಾವನೆಗಾಗಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವತಿಯಿಂದ MLC ಐವನ್ ಡಿಸೋಜರವರಿಗೆ ಅಭಿನಂದನೆ

ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರ ನಿಯೋಗದಿಂದ ಸನ್ಮಾನ ವಿಧಾನ್ ಪರಿಷತ್ ಕಲಾಪದಲ್ಲಿ ಅಲ್ಪಸಂಖ್ಯಾತರ ಪರವಾಗಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ MLC ಐವನ್ ಡಿಸೋಜಾ ಮಂಗಳೂರು

You cannot copy content of this page