ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೌಷ್ಠಿಕತೆ, ಆರೋಗ್ಯ ಮತ್ತು ಸ್ವಚ್ಛತೆ ಮಾಹಿತಿ ಕಾರ್ಯಕ್ರಮ
ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮತ್ತು ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೌಷ್ಠಿಕತೆ, ಆರೋಗ್ಯ ಮತ್ತು ಸ್ವಚ್ಛತೆ ಮಾಹಿತಿ ಕಾರ್ಯಕ್ರಮವನ್ನು ಸಪ್ಟಂಬರ್ 6 ರಂದು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ರೆನಿಟಾ ಲೂವಿಸ್‌ರವರು ಮಕ್ಕಳಿಗೆ ಪೌಷ್ಟಿಕತೆಯ ಬಗ್ಗೆ ಸವಿಸ್ತಾರವಾಗಿ “ದಾರಿ ಬದಿಯಲ್ಲಿ ಮಾರುವಂತಹ ತಿಂಡಿ ತಿನಿಸು (ಜಂಕ್ ಫುಡ್)ಗಳಿಂದ ಆಗುವ ದುಷ್ಪರಿಣಾಮ”ಗಳ ಬಗ್ಗೆ ತಿಳಿಸಿದರು. 350 ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ 3 BSW ವಿದ್ಯಾರ್ಥಿಗಳು ಹಾಜರಿದ್ದರು.