ಮುಂಬೈ ಗಾಣಿಗ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯರಿಗೆ ಮಾತೃ ವಿಯೋಗ
ಬಂಟ್ವಾಳ : ರಾಯಿ ಸಮೀಪದ ದೈಲ ನಿವಾಸಿ, ಪ್ರಗತಿಪರ ಕೃಷಿಕ ದಿವಂಗತ ಪದ್ಮನಾಭ ಸಪಲ್ಯ ರಾಯಿ ಇವರ ಪತ್ನಿ ಕುಸುಮಾ ಪಿ. ಸಪಲ್ಯ (93) ಇವರು ಅಸೌಖ್ಯದಿಂದ ಶುಕ್ರವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಮುಂಬೈ ಸಾಫಲ್ಯ (ಗಾಣಿಗ) ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ ಸಹಿತ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ವಿವಿಧ ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದ ಮೃತರ ಅಂತ್ಯಕ್ರಿಯೆ ಇಂದು ಸಪ್ಟಂಬರ್ 14 ರಂದು ಸ್ವಗೃಹದ ಬಳಿ ನೆರವೇರಿತು ಎಂದು ಮೃತರ ಕುಟುಂಬಿಕರು ತಿಳಿಸಿದ್ದಾರೆ.