ಮರಿಯಾಶ್ರಮ್ ತಲಪಾಡಿ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಮರಿಯಶ್ರಮ್ ಘಟಕ, ಸಿ.ಓ.ಡಿ.ಪಿ. (ರಿ.) ಮಂಗಳೂರು, ಪ್ರವರ್ತಿತ ಸಿಂಚನ ಮತ್ತು ಸಾಧನ ಮಹಾಸಂಘ ತಲಪಾಡಿ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಆಭಿವ್ರದ್ದಿ ಕೇಂದ್ರ, ಯೆನಪೋಯ (ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ) ದೇರಳಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಮರಿಯಾಶ್ರಮ್ ತಲಪಾಡಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಮರಿಯಶ್ರಮ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾರವರು ದೀಪ ಬೆಳಗಿಸುವ ಮೂಲಕ ಉದ್ಗಾಟಿಸಿದರು.
ಕಾರ್ಯಕ್ರಮದಲ್ಲಿ ಯೆನಪೋಯ ಆಸ್ಪತ್ರೆ ವೈದ್ಯರಾದ ಡಾ. ಫಾತಿಮಾ, ಡಾ. ಸಿರಾಜ್, ಕಥೊಲಿಕ್ ಸಭಾ ಕಾಸರಗೋಡ್ ವಲಯ ಹಾಗೂ ಮರಿಯಶ್ರಮ್ ಘಟಕದ ಅಧ್ಯಕ್ಷ ಫ್ರಾನ್ಸಿಸ್ ಮೊಂತೇರೊ, ಸಿ.ಓ.ಡಿ.ಪಿ. (ರಿ.) ಮಂಗಳೂರು ಇದರ ಸಂಯೋಜಕಿ ಲೀಡಿಯ, ಸಿಂಚನ ಮಹಾಸಂಘ ಆಧ್ಯಕ್ಷೆ ನಝೀಮ ಮತ್ತು ಸಾಧನ ಮಹಾಸಂಘ ಆಧ್ಯಕ್ಷೆ ಝೀನತ್, ಮರಿಯಶ್ರಮ್ ತಲಪಾಡಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಲೀನಾ ಡಿಕೊಸ್ತಾ, ಮರಿಯಾಶ್ರಮ್ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಪಿಂಟೊ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರುಡಾಲ್ಫ್ ಸಾಲ್ಡಾನ್ಹಾ ಸ್ವಾಗತಿಸಿ, ಸೀಮಾ ಮಥಾಯಸ್ ವಂದಿಸಿ, ಸ್ಯಾಂಡ್ರಾ ಡಿಸೋಜ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 150 ಕ್ಕೂ ಅಧಿಕ ಮಂದಿ ಭಾಗವಹಿಸಿದರು.