ಪುರುಷೋತ್ತಮ ಬಂಗೇರ ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ಆಯ್ಕೆ
ಬಂಟ್ವಾಳ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅಧಿಕಾರೇತರ ಸದಸ್ಯರಾಗಿ ಪುರುಷೋತ್ತಮ ಬಂಗೇರ ಬಂಟ್ವಾಳ ಕಸಬ ಇವರು ಆಯ್ಕೆಯಾಗಿದ್ದಾರೆ.
ಉಳಿದಂತೆ ವೆಂಕಪ್ಪ ಪೂಜಾರಿ ಅರ್ಬಿಗುಡ್ಡೆ, ಪ್ರವೀಣ್ ರೊಡ್ರಿಗಸ್ ಕಾವಳಪಡೂರು, ಮುಹಮ್ಮದ್ ರಿಯಾಝ್ ನೆಹರೂ ನಗರ, ಅಶೋಕ್ ಭಂಡಾರಿಬೆಟ್ಟು, ರೇಶ್ಮಾ ಟೆಲ್ಲಿಸ್ ಬೋಳಂಗಡಿ, ರವೀಂದ್ರ ಸಪಲ್ಯ ಬೋಳಂತೂರು ಹಾಗೂ ಶಿವಾನಂದ ನಾಯ್ಕ ಕೊಳ್ನಾಡು ಅವರನ್ನು ರಾಜ್ಯಪಾಲರ ಆಜ್ಞಾನುಸಾರ ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ.