ಕಥೊಲಿಕ್ ಸಭಾ ಶಕ್ತಿನಗರ ಘಟಕದ ಮುಂದಾಳತ್ವದಲ್ಲಿ ಯಶಸ್ವಿಯಾದ ರಕ್ತದಾನ ಶಿಬಿರ
ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತ ನಿಧಿ ಮಂಗಳೂರು ಇವರ ಸಹಕಾರದಲ್ಲಿ ಶಕ್ತಿ ಫ್ರೆಂಡ್ಸ್ ಕ್ಲಬ್ ಶಕ್ತಿನಗರ, ಕಥೊಲಿಕ್ ಸಭಾ ಸಿಟಿ ವಲಯ, ಲಯನ್ಸ್ ಕ್ಲಬ್ ಮಂಗಳೂರು, ಟಾಟಾ ಹೆಲ್ತ್ ಇನ್ಶೂರೆನ್ಸ್ ಕಂಪನಿ, ರಿಕ್ಷಾ ಚಾಲಕ ಮಾಲಕರ ಸಂಘ ಶಕ್ತಿನಗರ, ನೇಜಿಗುರಿ ಗುಂಪು ಇವರ ಸಹಭಾಗಿತ್ವದಲ್ಲಿ ‘ರಕ್ತದಾನ ಶಿಬಿರ -2024’ ಶಕ್ತಿ ಫ್ರೆಂಡ್ಸ್ ಕ್ಲಬ್, ಶಕ್ತಿನಗರದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ದಿವಂಗತ ನವೀನ್ ಪೂಜಾರಿ (ಮಾಜಿ ಅಧ್ಯಕ್ಷರು, ರಿಕ್ಷಾ ಚಾಲಕ ಮಾಲಕರ ಸಂಘ ಶಕ್ತಿನಗರ) ಇವರಿಗೆ ಶ್ರದ್ಧಾಂಜಲಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು.
ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ್ಯಂಟನಿ ಡಿಸೋಜಾ (ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತ ನಿಧಿ ಮಂಗಳೂರು) ಇವರು ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಬರೋಬ್ಬರಿ 70 ಬಾರಿ ರಕ್ತಾದಾನ ಮಾಡಿ ಸಮಾಜಕ್ಕೆ ಮಾದರಿಯಾದ ಟೋನಿ ಪಿಂಟೊ ಇವರನ್ನು ಸನ್ಮಾನಿಸಲಾಯಿತು.
ಪದವು 35ನೇ ವಾರ್ಡ್ ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ, ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಲಯನ್ ಜಯರಾಜ್ ಪ್ರಕಾಶ್, ಕಥೊಲಿಕ್ ಸಭಾ ಸಿಟಿ ವಲಯ ಹಾಗೂ ನೇಜಿಗುರಿ ಗುಂಪು ಇದರ ಅಧ್ಯಕ್ಷ ಅರುಣ್ ಡಿಸೋಜ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತ ನಿಧಿ ಮಂಗಳೂರು ಇದರ ಆ್ಯಂಟನಿ ಡಿಸೋಜ, ರಕ್ತದಾನ ಶಿಬಿರದ ಸಂಚಾಲಕ ಟೋನಿ ಪಿಂಟೊ, ಶಕ್ತಿನಗರ ಚರ್ಚ್ ಉಪಾಧ್ಯಕ್ಷ ಸ್ಟ್ಯಾನಿ ಮಸ್ಕರೇನ್ಹಸ್, ಶಕ್ತಿ ಫ್ರೆಂಡ್ಸ್ ಕ್ಲಬ್ ಶಕ್ತಿನಗರ ಇದರ ಅಧ್ಯಕ್ಷ ಬಿ.ಎಸ್. ಬೂಬ, ರಿಕ್ಷಾ ಚಾಲಕ ಮಾಲಕರ ಸಂಘ ಶಕ್ತಿನಗರ ಇದರ ಅಧ್ಯಕ್ಷ ಬಸವರಾಜ್, ಟಾಟಾ ಹೆಲ್ತ್ ಇನ್ಶೂರೆನ್ಸ್ ಕಂಪನಿ ಇದರ ರಾಮ್ ಮೋಹನ್ ರೈ, ಕಥೊಲಿಕ್ ಸಭಾ ಶಕ್ತಿನಗರ ಘಟಕ ಅಧ್ಯಕ್ಷ ಡೇವಿಡ್ ಕ್ರಾಸ್ತಾ, ನೇಜಿಗುರಿ ಗುಂಪಿನ ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಲ್ಲಾ ಸಂಘಟನೆಯ ಸದಸ್ಯರು ಹಾಗೂ ರಕ್ತದಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಲಯನ್ ಜಯರಾಜ್ ಪ್ರಕಾಶ್ ಸ್ವಾಗತಿಸಿ, ರಕ್ತದಾನ ಶಿಬಿರದ ಸಂಚಾಲಕ ಟೋನಿ ಪಿಂಟೋ ವಂದಿಸಿ, ರಾಕೇಶ್ ನೇಜಿಗುರಿ ಕಾರ್ಯಕ್ರಮ ನಿರೂಪಿಸಿದರು. ಸರ್ವರಿಗೂ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.