ಮೈಸೂರು ವಿಭಾಗ ಹಾಗೂ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟ 2024-25ರ ಕಪ್ ಬಜ್ಪೆಯ ಸೈಂಟ್ ಜೋಸೆಫ್ ಶಾಲೆಯ ಮಡಿಲಿಗೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ (ಆಡಳಿತ) ದಕ್ಷಿಣ ಕನ್ನಡ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ಉತ್ತರ ವಲಯ ಹಾಗೂ ಸಂತ ಜೋಸೆಫರ ಪದವಿಪೂರ್ವ ಕಾಲೇಜು ಬಜಪೆ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಹಾಗೂ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ 2024-25 ದಿನಾಂಕ ಸಪ್ಟಂಬರ್ 12ರಿಂದ 15ರ ತನಕ ಬಜ್ಪೆಯ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.
ಕಳೆದ 12 ವರ್ಷಗಳಲ್ಲಿ ಸೈಂಟ್ ಜೋಸೆಫ್ ಹೈಸ್ಕೂಲ್ ಬಾಲಕಿಯರು ಕರ್ನಾಟಕ ರಾಜ್ಯ ಮಟ್ಟದ ಪಂದ್ಯಗಳಲ್ಲಿ 7 ಬಾರಿ ಗೆದ್ದು ರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳಿಗೆ ಅರ್ಹತೆ ಪಡೆದಿದ್ದಾರೆ. ಕಳೆದ 11 ವರ್ಷಗಳಿಂದ ಸೈಂಟ್ ಜೋಸೆಫ್ ಪ್ರೌಢಶಾಲೆ ಬಜ್ಪೆ ಬಾಲಕಿಯರು ಅವಿರತವಾಗಿ ಇಂಡಿಪೆಂಡೆನ್ಸ್ ಕಪ್ ಗೆದ್ದಿದ್ದಾರೆ.
ವಿಜೇತರಾದ ಎಲ್ಲಾ ಮಕ್ಕಳಿಗೆ ಬಜ್ಪೆ ಶಾಲೆಯ ಸಂಚಾಲಕರಾದ ವಂದನೀಯ ಡಾಕ್ಟರ್ ರೊನಾಲ್ಡ್ ಕುಟಿನ್ಹೊ, ಶಾಲಾ ಶಿಕ್ಷಕ ವೃಂದ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟ್ಯಾನಿ ಡಿಸೋಜ, ಕಾರ್ಯದರ್ಶಿ ಗ್ರೇಸಿ ಸಿಕ್ವೇರಾ, ಆಯೋಗಗಳ ಸಂಯೋಜಕಿ ಮೇಬಲ್ ಸಲ್ಡಾನ್ಹಾ, ಬಜ್ಪೆ ಚರ್ಚ್ ನ ಸಮಸ್ತ ಕ್ರೈಸ್ತ ಬಾಂಧವರು ಹಾಗೂ ಮಕ್ಕಳ ಪೋಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.