January 14, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

 ‘ಪಯಣ್ʼ ಕೊಂಕಣಿ ಚಲನಚಿತ್ರ ರಾಜ್ಯಾದ್ಯಂತ ಸಪ್ಟಂಬರ್ 20ರಂದು ತೆರೆಗೆ

ಮಂಗಳೂರು: ʻಸಂಗೀತ್ ಘರ್, ಮಂಗಳೂರುʼ ಬ್ಯಾನರ್ನಡಿಯಲ್ಲಿ ತಯಾರಾಗಿರುವ ಬಹು ನಿರೀಕ್ಷಿತ ಕೊಂಕಣಿ ಚಲನಚಿತ್ರ ʻಪಯಣ್ʼ (ಪ್ರಯಾಣ) ಸಪ್ಟಂಬರ್ 20ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಮುಹೂರ್ತದಿಂದಲೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟು ಕೊಂಡಂತಿರುವ ಈ ಚಿತ್ರದ ಟೀಜರ್ ಬಿಡುಗಡೆಯಾದದ್ದೇ ಕೊಂಕಣಿ ಚಲನಚಿತ್ರ ಪ್ರೇಮಿಗಳಿಂದ ಪ್ರಸಂಶೆಯ ಸುರಿಮಳೆ ಹರಿದು ಬಂದಿತ್ತು. ಚಲನಚಿತ್ರದ ಟ್ರೇಲರ್‌ಗೂ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರಕಿತ್ತು. ಈಗಾಗಲೇ ಮಂಗಳೂರು ಮತ್ತು ಪುತ್ತೂರು ಪ್ರೀಮಿಯರ್ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿವೆ ಮತ್ತು ವೀಕ್ಷಕರಿಂದ ಕೊಂಕಣಿ ಚಲನಚಿತ್ರದ ಇತಿಹಾಸದಲ್ಲಿ ʻಪಯಣ್ʼ ಒಂದು ಮೈಲಿಗಲ್ಲು ಎಂದು ಪ್ರಶಂಸೆಗೊಳಪಟ್ಟಿದೆ. ನೀಟಾ ಜೊನ್ ಪೆರಿಸ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

ಪಯಣ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಜೊಯೆಲ್ ಪಿರೇರಾ ಬರೆದಿದ್ದು, ಸಾಹಿತ್ಯ ಮೆಲ್ವಿನ್ ಪೆರಿಸ್, ಸಂಗೀತ ನಿರ್ದೇಶನ ರೋಶನ್ ಡಿಸೋಜಾ ಆಂಜೆಲೊರ್. ಪುತ್ತೂರಿನ ಯುವ ಪ್ರತಿಭೆ ಬ್ರಾಯನ್ ಸಿಕ್ವೇರಾ ನಾಯಕ ನಟನಾಗಿ ಹಾಗೂ ಜಾಸ್ಮಿನ್ ಡಿಸೋಜಾ, ಕೇಟ್ ಪಿರೇರಾ ಮತ್ತು ಶೈನಾ ಡಿಸೋಜ, ನಾಯಕಿ ನಟಿಯರಾಗಿ ನಟಿಸಿದ್ದಾರೆ.

ನಟರಾದ ರೈನಲ್ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ, ಮೆಲಿಶಾ ಪಿಂಟೊ ಮುಖ್ಯ ಭೂಮಿಕೆಯಲ್ಲಿದ್ದಾರೆ. ಛಾಯಾಗ್ರಹಣ ವಿ. ರಾಮಾಂಜನೆಯ ಮತ್ತು ಸಂಕಲನ ಮೆವಿನ್ ಜೊಯೆಲ್ ಪಿಂಟೊ ಶಿರ್ತಾಡಿ ಇವರದ್ದು. ಮಂಗಳೂರು ಹಾಗೂ ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲಿ ಪಯಣ್ ಚಿತ್ರೀಕರಣ ನಡೆಸಲಾಗಿದೆ. ಸಪ್ಟಂಬರ್ 20ರಂದು ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಕುಂದಾಪುರ ಹಾಗೂ ಪುತ್ತೂರು ಏಕಕಾಲದಲ್ಲಿ ಪಯಣ್ ಬಿಡುಗಡೆಯಾಗಲಿದೆ. ಈಗಾಗಲೇ ಮುಂಬಯಿ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗುವ ದಿನಾಂಕಗಳು ನಿಗದಿಯಾಗಿವೆ.

ಪಯಣ್… ಜೀವನದ ನಿಜವಾದ ಸಾಮರಸ್ಯಕ್ಕೆ ಸಂಗೀತ ಕಲೆಯ ನಿಪುಣತೆಗಿಂತಲೂ ಹೆಚ್ಚಿನದ್ದು ಬೇಕು ಎಂಬುದನ್ನು ಕಂಡುಹಿಡಿಯುವ ಸಂಗೀತಗಾರನ ಹೋರಾಟದ ಪ್ರಯಾಣ ಕಥೆ. ಅವರು ಸಂಗೀತ ಉದ್ಯಮದ ಸವಾಲುಗಳನ್ನು ಎದುರಿಸಿ ಮುನ್ನಡೆಯುವಾಗ ವೈಯಕ್ತಿಕ ಪೈಶಾಚಿಕತೆಯನ್ನು ಎದುರಿಸುವುದರೊಂದಿಗೆ ವಂಚನೆ ಮತ್ತು ಅನಿರೀಕ್ಷಿತ ಜಾಲಗಳನ್ನು ಎದುರಿಸುತ್ತಾರೆ. ಸಂಗೀತ ಕ್ಷೇತ್ರದಲ್ಲಿ ಪಡಿಯಚ್ಚನ್ನು ಒತ್ತಿ, ತನ್ನ ಹಿಂದೆ ಪರಂಪರೆಯೊಂದನ್ನು ಬಿಟ್ಟು ಹೋಗುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟ ಅವರು ತನ್ನ ಸಂಗೀತ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಕೇಂದ್ರಬಿಂದುವಾಗಿಸಿದ ಕಥೆಯೇ ಪಯಣ್.

You may also like

News

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಬೆನಕ ಆಸ್ಪತ್ರೆಯ ವಿಸ್ತ್ರತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಬೆಳ್ತಂಗಡಿ : ಉಜಿರೆ ಬೆನಕ ಆಸ್ಪತ್ರೆಗೆ ಜನವರಿ 13ರಂದು ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥಂಗಳು ಆಸ್ಪತ್ರೆಯ ವಿಸ್ಕೃತ ಕಟ್ಟಡದ ಧಾರ್ಮಿಕ
News

ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದು

You cannot copy content of this page