October 16, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜೀವನದಲ್ಲಿ ನಿಜವಾಗಿ ಯಶಸ್ಸು ಕಂಡವನು ಹಳ್ಳಿ ಶಾಲೆಯಲ್ಲಿ ಕಲಿತವನು – ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು

 

ಬಂಟ್ವಾಳ : ಹಳ್ಳಿ ಶಾಲೆಯಲ್ಲಿ ಕಲಿತವ ಎನ್ನುವ ಕೀಳರಿಮೆ ಬೇಡ, ಜೇವನದಲ್ಲಿ ನಿಜವಾಗಿ ಯಶಸ್ಸು ಕಂಡವನು ಹಳ್ಳಿ ಶಾಲೆಯಲ್ಲಿ ಕಲಿತವನು ಎಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಹೇಳಿದರು.

ಅವರು ಮಂಗಳವಾರ ಕರ್ನಾಟಕ ಸರಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಬಾಲವಿಕಾಸ ಸಮಿತಿ, ಗೋಳ್ತಮಜಲ್ ಗ್ರಾಮ ಪಂಚಾಯತ್, ಸ್ತ್ರೀಶಕ್ತಿ ಗುಂಪು ಕಲ್ಲಡ್ಕ ಶಾಲೆ ಅಂಗನವಾಡಿ ಕೇಂದ್ರ, ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂಗನವಾಡಿ ಕೇಂದ್ರ ಕಲ್ಲಡ್ಕ ಶಾಲೆ ಇದರ ನೂತನ ಅಂಗನವಾಡಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅಂಗನವಾಡಿಯ ಪುಟಾಣಿ ಮಕ್ಕಳ ಜೊತೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ವಹಿಸಿದ್ದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರನ್ನು ಅಂಗನವಾಡಿ ದತ್ತು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕಟ್ಟಡ ನಿರ್ಮಿಸಿದ ಗುತ್ತಿಗೆದಾರ ಪದ್ಮನಾಭ ಗೌಡ ಮೈರಾ ಹಾಗೂ ಅಂಗನವಾಡಿ ಶಿಕ್ಷಕಿ ಯಮುನಾ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಜಯಂತ್ ಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುಮ್ತಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯ ಶಂಕರ್ ಆಳ್ವ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಲೋಚನಾ ಭಟ್, ಬಂಟ್ವಾಳ ತಾಲೂಕು ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ದಿನೇಶ್ ಅಮ್ಮ್ಟೂರ್, ಜಾನ್ಸಿರಾಣಿ ಮಹಿಳಾ ಮಂಡಳಿ ಅಧ್ಯಕ್ಷ ಮೀನಾಕ್ಷಿ ಆರ್. ಪೂಜಾರಿ, ಕಲ್ಲಡ್ಕ ಶಾರದಾ ಪೂಜಾ ಸಮಿತಿಯ ಅಧ್ಯಕ್ಷ ಯೋಗೀಶ್, ಪಂಚಾಯತ್ ಸದಸ್ಯರುಗಳಾದ ಲಿಖಿತ ಆರ್. ಶೆಟ್ಟಿ, ರಾಜೇಶ್ ಕೊಟ್ಟಾರಿ, ಲೀಲಾವತಿ, ದೀಪಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಕಲ್ಲಡ್ಕ ಮಾದರಿ ಶಾಲಾ ಪದವಿಧರ ಮುಖ್ಯ ಶಿಕ್ಷಕ ಅಶ್ರಫ್, ಮಕ್ಕಳ ತಾಯಂದಿರರು, ಸ್ತ್ರೀಶಕ್ತಿ ಗುಂಪಿನ ಸದಸ್ಯರುಗಳು ಮೊದಲಾದವರು ಭಾಗವಹಿಸಿದ್ದರು.

ಅಂಗನವಾಡಿ ಪುಟಾಣಿಗಳು ನಾಡಗೀತೆಯ ಮೂಲಕ ಪ್ರಾರ್ಥಿಸಿ, ಅಂಗನವಾಡಿ ಶಿಕ್ಷಕಿ ಯಮುನಾ ಸ್ವಾಗತಿಸಿ, ಶಿಶು ಅಭಿವೃದ್ಧಿ ಯೋಜನಾ ಮೇಲ್ವಿಚಾರಕಿ ಲೀಲಾವತಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಬಾಲ ವಿಕಾಸ ಸಮಿತಿಯ ರೇಣುಕಾ ವಂದಿಸಿ, ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

You may also like

News

ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ಹೊಸ ಆಯುಕ್ತರ ನೇಮಕ

ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಡಾ. ಮಹೇಶ್ ವಾಲ್ವೇಕರ್ ಹಾಗೂ ವೆಂಕಟ್ ಸಿಂಗ್ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಖಾಲಿ ಇದ್ದ ಮೂವರು ಆಯುಕ್ತರ ಹುದ್ದೆಗಳನ್ನು ಅಕ್ಟೋಬರ್
News

ಬಿಕರ್ನಕಟ್ಟೆಯಲ್ಲಿ ವೋಟ್‌ ಚೋರ್‌ ಗದ್ದಿ-ಚೋಡ್‌ ಸಹಿ ಸಂಗ್ರಹ  ಅಭಿಯಾನ – MLC ಐವನ್‌ ಡಿಸೋಜ

ವೋಟ್‌ ಚೋರ್‌ ಗದ್ದಿ-ಚೋಡ್‌ ಈ ಅಭಿಯಾನ ಇಂದು ಅಕ್ಟೋಬರ್ 15ರಂದು ಬುಧವಾರ ಬಿಕರ್ನಕಟ್ಟೆಯಲ್ಲಿ  ನಡೆಸಲಾಯಿತು. ಈ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ MLC ಐವನ್‌ ಡಿಸೋಜರವರು ಬಿಜೆಪಿ ಸರಕಾರ

You cannot copy content of this page