ಮಾಣಿ ಬಾಲವಿಕಾಸ ಶಾಲೆಗೆ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ
ಬಂಟ್ವಾಳ : ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಹಾಗೂ ಮಾಣಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿಯು ಮಾಣಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸ್ಪರ್ಧೆಯಲ್ಲಿ ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯು 11 ಪ್ರಥಮ ಹಾಗೂ 2 ದ್ವಿತೀಯ ಬಹುಮಾನಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಧಾರ್ಮಿಕ ಪಠಣ ಸಂಸ್ಕೃತ ಮತ್ತು ಭಾವಗೀತೆ – ಸ್ವಸ್ತಿ (10ನೇ), ಕನ್ನಡ ಭಾಷಣ – ನಿವ್ಯಾ ರೈ (10ನೇ), ಇಂಗ್ಲಿಷ್ ಮತ್ತು ಹಿಂದಿ ಭಾಷಣ – ಪೂರ್ವಿ ಎ. ಭಾರಧ್ವಜ್ (9ನೇ), ಕವನ ವಾಚನ – ದೇವಿಕಾ ಕೆ(9ನೇ), ಘಜಲ್ – ವೈಷ್ಣವಿ (10ನೇ), ರಸಪ್ರಶ್ನೆ – ಆರನ್ ಪೈಸ್ (10ನೇ) ಮತ್ತು ಪುನೀತ್ ಕೆ.ಜಿ. (10ನೇ), ಆಶು ಭಾಷಣ ಮತ್ತು ಚರ್ಚಾ ಸ್ಪರ್ಧೆ- ಪ್ರಗತಿ(9ನೇ) ಹಾಗೂ ಕವ್ವಾಲಿ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ. ಭರತನಾಟ್ಯದಲ್ಲಿ ಸಂಜನಾ ಎಸ್. ಭಟ್ (9ನೇ) ಹಾಗೂ ಜಾನಪದ ನೃತ್ಯ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಜೇತ ವಿದ್ಯಾರ್ಥಿಗಳೆಲ್ಲರೂ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದ ಹಾಗೂ ಶಾಲಾ ಆಡಳಿತ ಮಂಡಳಿ ಶುಭಶಯಗಳನ್ನು ಸಲ್ಲಿಸಿದ್ದಾರೆ.