ಉನ್ನತ ಗುಣಮಟ್ಟದ ಶಿಕ್ಷಣಕ್ಕೆ ಗುರುವಾಯನಕೆರೆಯ ಎಕ್ಸೆಲ್ ಕಾಲೇಜು ರಾಜ್ಯ ಮಟ್ಟದ ಕಾಲೇಜಾಗಿ ಗುರುತಿಸಿದೆ – ಮೂಡುಬಿದಿರೆ ಭಟ್ಟಾರಕ ಶ್ರೀಗಳು
ಬೆಳ್ತಂಗಡಿ: ಭಾರತದ ಸಂಸ್ಕಾರ, ಸಂಸ್ಕೃತಿಯ ಪರಂಪರೆಯಿಂದ ಜಗತ್ತಿನಲ್ಲಿ ಭಾರತ ಉನ್ನತ ಮಟ್ಟದಲ್ಲಿ ಬೆಳಗುತ್ತಿದೆ. ಅದೇ ರೀತಿ ಬೆಳ್ತಂಗಡಿಯ ಗುರುವಾಯನಕೆರೆ ಎಕ್ಸೆಲ್ ಕಾಲೇಜು ಉನ್ನತ ಗುಣಮಟ್ಟದ ಶಿಕ್ಷಣದ ಜೊತೆ ಸಂಸ್ಕಾರಯುತ ಶಿಕ್ಷಣ ನೀಡುವುದರಿಂದ ರಾಜ್ಯದ ಪೋಷಕರು ಎಕ್ಸೆಲ್ ಕಾಲೇಜನ್ನು ಪ್ರೀತಿಸುತ್ತಿದ್ದು ಇಂದು ಶಿಕ್ಷಣ ಕ್ರಾಂತಿಯಲ್ಲಿ ಎಕ್ಸೆಲ್ ಕಾಲೇಜು ರಾಜ್ಯಮಟ್ಟದಲ್ಲಿ ಬೆಳೆದಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದು ಮೂಡಬಿದರೆ ಜೈನ ಮಠದ ಸ್ವಸ್ತಿ ಶ್ರಿ ಭಾರತಭೂಷಣ ಡಾಕ್ಟರ್ ಚಾರುಕೀರ್ತಿ ಭಟ್ಟಾರಕ ಪಂಡಿತಾರ್ಯವರ್ಯ ಶ್ರೀಗಳು ನುಡಿದರು. ಅವರು ಸಪ್ಟಂಬರ್ 15ರಂದು ಭಾನುವಾರ ಬೆಳ್ತಂಗಡಿಯ ಗುರುವಾಯನಕೆರೆ ಕುವೆಟ್ಟು ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ನಡೆದ ಎಕ್ಸೆಲ್ ವಿದ್ಯಾರ್ಥಿಗಳ ಪಾಲಕರಾದ 301 ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ವಿದ್ಯಾರ್ಥಿಗಳು ಸಾದಕರ ವಿದ್ವಾಂಸರ ಸಾದನೆಗಳನ್ನು ಅರಿತುಕೊಳ್ಳುವ ಮನೋಭಾವಣೆ ವಿದ್ಯಾರ್ಥಿ ದೆಸೆಯಲ್ಲಿಯೇ ಬೆಳೆಸಬೇಕು. ಆಗ ದೇಶದ ಉತ್ತಮ ಪ್ರಜೆಗಳಾಗಲು ಸಾದ್ಯ ಎಂದರು.
ವಿಧಾನ ಪರಿಷತ್ ಶಾಸಕ ಎಸ್. ಎಲ್. ಬೋಜೇಗೌಡ ಮಾತನಾಡಿ ಶಿಕ್ಷಣ ಮತ್ತು ಅರೋಗ್ಯ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ವರ ಹಕ್ಕು. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ನಾನು ಎಂಬ ಅಹಂ ಇಡದೆ ಶಿಕ್ಷಣವೇ ನನ್ನ ಗುರಿ ಎಂದು ಭಾವಿಸಬೇಕು. ಪೋಷಕರು ಕೂಡ ಮಕ್ಕಳಿಗೆ ತಮ್ಮ ಶ್ರಮ ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು, ಮಕ್ಕಳೊಂದಿಗೆ ಪ್ರೀತಿಯ ಭಾವನೆ ಇಡಬೇಕು ಎಂದರು. ದೆಹಲಿ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಡಾಕ್ಟರ್ ರಮೇಶ್ ಸಾಲಿಯಾನ್ ದಿಕ್ಸೂಚಿ ಭಾಷಣ ಮಾಡಿ ಗುರುವಾಯನಕೆರೆ ಎಂಬ ಪ್ರದೇಶ ಶಿಕ್ಷಣ ಕ್ಷೇತ್ರವಾಗಿ ಬೆಳೆಯಲು ಎಕ್ಸೆಲ್ ಕಾಲೇಜು ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಪದವಿ, ಕಾಲೇಜು ಶಿಕ್ಷಣ ಭವಿಷ್ಯ ರೂಪಿಸುವ ತಾಣವಾಗುತ್ತದೆ. ಕಾಲೇಜಿನಲ್ಲಿ ಕಠಿಣ ಶಿಕ್ಷಣ ಸಿಗುತ್ತಿದೆ ಎಂದರೆ ಮಕ್ಕಳ ಭವಿಷ್ಯ ಸುಲಭವಾಗುತ್ತಿದೆ ಎಂದರ್ಥ. ಪೋಷಕರು ಮಕ್ಕಳ ಶಿಕ್ಷಣದಲ್ಲಿ ಅತಿಯಾದ ಅನುಕಂಪ ಬೇಡ ಕಲಿಯುವ ಸಮಯ ಕಲಿಯಲಿ ಮತ್ತೆ ಅವರ ಬದುಕು ನೆಮ್ಮದಿಯಿಂದ ಇರುತ್ತದೆ ಎಂದರು.
ವಿದ್ಯಾರ್ಥಿಗಳು ಟೀಕೆಯ ಕಡೆ ಗಮನ ಹರಿಸಬೇಡಿ. ಟೀಕೆಯನ್ನು ಭವಿಷ್ಯದ ಪಾಠ ಎಂದು ತಿಳಿಯಿರಿ. ಶಿಕ್ಷಣವನ್ನು ಒತ್ತಡ ಎನ್ನದೆ ಪ್ರೀತಿಯಿಂದ ಕಾಣಬೇಕು ಎಂದರು. ಗುರುವಾಯನಕೆರೆ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅದ್ಯಕ್ಷ ಸುಮಂತ್ ಕುಮಾರ್ ಜೈನ್ ಅದ್ಯಕ್ಷತೆ ವಹಿಸಿದರು. ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಜಿ. ಎಸ್. ಎಕ್ಸೆಲ್ ಅರಮಲೆ ಬೆಟ್ಡ ಕ್ಯಾಂಪಸ್ ನ ಪ್ರಭಾರ ಪ್ರಾಚಾರ್ಯ ಡಾಕ್ಟರ್ ಪ್ರಜ್ವಲ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾಕ್ಟರ್ ನವೀನ್ ಕುಮಾರ್ ಮರಿಕೆ ಪ್ರಾಸ್ತಾವಿಸಿ ಸ್ವಾಗತಿಸಿದರು.
ದಾಖಲೆಯಾಗಿ ಎಕ್ಸೆಲ್ ವಿದ್ಯಾರ್ಥಿಗಳ ಪಾಲಕರಾದ 301 ಶಿಕ್ಷಕರಿಗೆ ಗೌರವಾರ್ಪಣೆ ನಡೆಯಿತು. ಡಾಕ್ಟರ್ ಪ್ರಜ್ವಲ್ ವಂದಿಸಿದರು, ಉಪನ್ಯಾಸಕರುಗಳಾದ ದುರ್ಗಾ ಪರಮೇಶ್ವರ್, ಪ್ರಜ್ವಿತ್, ಪ್ರಸನ್ನ, ಕುಮಾರ್ ಸಂತೋಷ್ ಕೆ. ಕೆ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಠಲ ನಾಯಕ್ ಕಲ್ಲಡ್ಕ ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಿತು.