ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಧ್ವಜದಿನ ಕಾರ್ಯಕ್ರಮ
ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಇದರ ಧ್ವಜ ದಿನ ಕಾರ್ಯಕ್ರಮ ಸೆಪ್ಟೆಂಬರ್ 19ರಂದು ಗುರುವಾರ ಸೂರಿಕುಮೇರು ಯುನಿಟ್ ವತಿಯಿಂದ ಸಂಜರಿ ಕಾಂಪ್ಲೆಕ್ಸ್ ಬಳಿ ನಡೆಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕ ಯೂಸುಫ್ ಹಾಜಿ ಸೂರಿಕುಮೇರು ಧ್ವಜಾರೋಹಣ ಮಾಡಿದರು.
ಜಮಾಲ್ ನೂರಾನಿ ಮಾಣಿ ದುಆ ಮಾಡಿದರು. ಹಾಫಿಳ್ ಮುರ್ಶಿದ್ ಸೂರಿಕುಮೇರು ಸಂದೇಶ ಭಾಷಣ ಮಾಡಿ, ಇಸ್ಲಾಮಿನ ತತ್ವಾದರ್ಶ ಮೈಗೂಡಿಸಿಕೊಂಡು ಅಹ್ಲ್ ಸುನ್ನತ್ ವಲ್ ಜಮಾಅತ್ ನಲ್ಲಿ ಭದ್ರವಾಗಿ ನೆರೆಯೂರಿ ಈಮಾನ್ ಕಾಪಾಡಿಕೊಳ್ಳುವುದೇ ಸಂಘಟನೆಯ ಧ್ಯೇಯ ವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಸೂರಿಕುಮೇರು ಯುನಿಟ್ ಕಾರ್ಯದರ್ಶಿ, ಕರೀಂ ಸೂರಿಕುಮೇರು, ನಾಯಕರಾದ ಮುಫೀದ್ ಮಾಣಿ, ಹಸೈನ್ ಟೈಲರ್, ಇಮ್ರಾನ್ ಸೂರಿಕುಮೇರು, ಅಜ್ಮಲ್ ಮಾಣಿ, ಮುಈನ್ ಸೂರಿಕುಮೇರು ಉಪಸ್ಥಿತರಿದ್ದರು. ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.