ರಾಜ್ಯದ ವಿವಿದೆಡೆಗಳಲ್ಲಿ ನಿಷ್ಟಾವಂತ ಸೇವೆ ಸಲ್ಲಿಸಿ ಪೋಲಿಸ್ ಇಲಾಖೆಗೆ ಗೌರವ ತಂದ ಶಿಸ್ತು ಬದ್ಧ-ಪ್ರಾಮಾಣಿಕ, ಮುಖ್ಯ ಮಂತ್ರಿಗಳ ಪದಕ ವಿಜೇತ ಎಸ್.ಪಿ. ಯತೀಶ್ ಎನ್.
ವಿವಿಧ ಹುದ್ದೆಗಳಲ್ಲಿ ರಾಜ್ಯದ ವಿವಿದೆಡೆ ನಿಷ್ಟಾವಂತ ಸೇವೆ ಸಲ್ಲಿಸಿ, ನೂರಾರು ಪ್ರಕರಣಗಳನ್ನು ಪತ್ತೆ ಹಚ್ಚಿ, ಶಿಸ್ತು ಬದ್ಧ ಹಾಗೂ ಪ್ರಾಮಾಣಿಕ ಪೋಲಿಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾದ ಯತೀಶ್ ಎನ್. ಇವರನ್ನು ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕಗೊಳಿಸಿ ಮಹತ್ತರ ಕೊಡುಗೆ ನೀಡಿದ್ದು ಅತ್ಯಂತ ಸಮಂಜಸವೆನ್ನಬೇಕು.
ಮೂಲತಃ ಬೆಂಗಳೂರು ಜಿಲ್ಲೆಯವರಾದ ಯತೀಶ್ ವಿವಿದೆಡೆಗಳಲ್ಲಿ ASP ಯಾಗಿಯೂ ಮತ್ತು S.P. ಯಾಗಿಯೂ ಸೇವೆ ಸಲ್ಲಿಸಿ ಜನ ಮನ್ನಣೆಗಳಿಸಿದವರು. 2016ರ ಕನಾ೯ಟಕ ಕೇಡರ್ ನ IPS ಅಧಿಕಾರಿ ಯತೀಶ್ ಮಂಡ್ಯ ಜಿಲ್ಲೆಯಲ್ಲಿ 2 ವರ್ಷ SP ಯಾಗಿ ಸೇವೆ ಸಲ್ಲಿಸಿ ಪೋಲಿಸ್ ಇಲಾಖೆಯಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರದಂತಹ ಅನಿಷ್ಟತೆಗಳನ್ನು ನಿದಾ೯ಕ್ಷಿಣ್ಯವಾಗಿ ಕೊನೆಗೊಳಿಸಿ ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನರಾಗಿದ್ದಂತಹ SP ಯತೀಶ್ ರವರು ಮಂಡ್ಯ ಜಿಲ್ಲೆಯ ಎಲ್ಲಾ ಪೊಲೀಸರಿಗೆ ಶಿಸ್ತಿನ ಪಾಠವನ್ನು ಕಲಿಸಿ ಕೊಟ್ಟಿದ್ದಾರೆ. ಭ್ರಷ್ಟಾಚಾರದ ಕಾಯಿಲೆಗೆ ಸಿಲುಕಿ ಜನ ಸಾಮಾನ್ಯರಿಗೆ ಭಾರವಾಗಿದ್ದ ಬಹುತೇಕ ಭ್ರಷ್ಟ ಪೋಲಿಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಲ್ಲದೆ ಇಲಾಖೆಯಲ್ಲಿ ನಿಷ್ಠೆಯಿಂದ ದುಡಿಯಲು ಪ್ರೇರಣೆ ಒದಗಿಸಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ಸಮಯಗಳಿಂದ SP ಯಾಗಿ ಸೇವೆ ಸಲ್ಲಿಸುತ್ತಿರುವ ಯತೀಶ್ ಇವರ ಅಪ್ರತಿಮ ಸೇವೆಗೋಸ್ಕರ ಸರಕಾರವು ಅವರಿಗೆ ಈ ಬಾರಿಯ ಮುಖ್ಯ ಮಂತ್ರಿಗಳ ಪದಕವನ್ನು ನೀಡಿ ಗೌರವಿಸಿದ್ದು ಪೋಲಿಸ್ ಇಲಾಖೆ ಹಾಗೂ ಜನತೆಗೆ ಸಂದ ಅತ್ಯಮೋಘ ಗೌರವವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನೇಕ ಭ್ರಷ್ಟ ಪೊಲೀಸರೂ, ಪೊಲೀಸ್ ಅಧಿಕಾರಿಗಳೂ ಇವರ ಕಾನೂನು ಕ್ರಮಕ್ಕೊಳಗಾಗಿ ಶೀಘ್ರವೇ ಬುದ್ಧಿ ಕಲಿಯಲಾರಂಭಿಸುವ ದಿನ ದೂರವಿಲ್ಲ. SP ಯವರು ದಕ್ಷಿಣ ಕನ್ನಡ ಜಿಲ್ಲೆಯ ಭ್ರಷ್ಟ ಪೋಲಿಸರನ್ನು ಗುರುತಿಸಿ ಎತ್ತಂಗಡಿ ಗೊಳಿಸಬೇಕಾಗಿದೆ. ಅದೇ ರೀತಿ ಪ್ರಾಮಾಣಿಕರನ್ನು ಪುರಸ್ಕರಿಸಬೇಕಾಗಿದೆ.
ಎಷ್ಟೇ ದೊಡ್ಡ ಪ್ರಭಾವಿಗಳ ಆಸೆ, ಅಮಿಷ ಹಾಗೂ ಬೆದರಿಕೆಗಳಿಗೆ ಬಗ್ಗದೆ, ರಾಜಕಾರಣಿಗಳ ಒತ್ತಡ ಬಲವಂತಗಳಿಗೆ ಜಗ್ಗದೆ, ಪೊಲೀಸ್ ಕಾನೂನಿನ ಪ್ರತೀ ಇಂಚನ್ನು ಕ್ರಮಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಸಮಾಜ ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸಿ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಒಂದು ಹೊಸ ಅಧ್ಯಾಯವನ್ನೇ ಬರೆಯಬೇಕಾಗಿದೆ. SP ರಿಷ್ಯಂತ್ ರಂತೆ ಒಬ್ಬ ಧೀಮಂತ ಮತ್ತು ದಕ್ಷ ಪೊಲೀಸ್ ಅಧಿಕಾರಿಯಾಗಿರುವ ಯತೀಶ್ ರನ್ನು ಪಡೆದ ಈ ಜಿಲ್ಲೆ ನಿಜಕ್ಕೂ ಧನ್ಯವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಶ್ರೀಯುತ ಯತೀಶ್ ರವರು ಇನ್ನಷ್ಟು ಉನ್ನತ ಪದವಿಗಳನ್ನೇರಿ ರಾಜ್ಯ ಕ್ಕೆ ಮಹತ್ತರ ಕೀರ್ತಿ ತರಲೆಂದು ನಾವು ಹಾರೈಸುತ್ತೇವೆ.
ಶೇಖ್ ಇಸಾಕ್, ಸಂಪಾದಕರು, ಕಾರ್ಕೋಟಕ ಸಾಪ್ತಾಹಿಕ ಪತ್ರಿಕೆ