ಬೊವಿಕಾನ ಚರ್ಚ್ ನಲ್ಲಿ ‘ಚರ್ಚ್ ದಿನ’ ವಿಜೃಂಭಣೆಯಿಂದ ಆಚರಣೆ
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬೊವಿಕಾನ ಘಟಕದ ಆಶ್ರಯದಲ್ಲಿ ರಿಸನ್ ಸೇವಿಯರ್ ಸಮರ್ಪಿತ ಬೊವಿಕಾನ ಚರ್ಚ್ ನಲ್ಲಿ ‘ಚರ್ಚ್ ದಿನ’ವನ್ನು ಸಪ್ಟಂಬರ್ 22ರಂದು ಭಾನುವಾರ ದಿವ್ಯ ಬಲಿಪೂಜೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಪೂಜೆಯ ಬಳಿಕ ಚರ್ಚ್ ಆವರಣದಲ್ಲಿ ಚರ್ಚ್ ವ್ಯಾಪ್ತಿಯ ಭಕ್ತಾಧಿಗಳಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಚರ್ಚ್ ಧರ್ಮಗುರು ವಂದನೀಯ ಫಾದರ್ ಕ್ಲೋಡಿ ಸ್ಟ್ಯಾನಿ ವಾಸ್ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಅತಿಥಿ ಗುರುಗಳಾದ ವಂದನೀಯ ಫಾದರ್ ಮನೋಹರ್ ರವರು ಹಾಜರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಭಕ್ತಾಧಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಅದೇ ದಿನ ಸಂಜೆ ಸಮಾರೋಪ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರತಿಭಾ ಪುರಸ್ಕಾರ, ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರೋಗಿಗಳಿಗೆ ಕೇಶ ದಾನ ಮಾಡಿದವರಿಗೆ ಗೌರವ ಪುರಸ್ಕಾರ, ಶಿಕ್ಷಕರಿಗೆ ಸನ್ಮಾನ ಹಾಗೂ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಮಾಜಿ ಕೇಂದ್ರಿಯ ಅಧ್ಯಕ್ಷ ಪಾವ್ಲ್ ರೋಲ್ಪಿ ಡಿಕೋಸ್ತ, ಪ್ರಸ್ತುತ ಸಹಕಾರ್ಯದರ್ಶಿ ಲವೀನಾ ಗ್ರೆಟ್ಟಾ ಡಿಸೋಜ ಹಾಗೂ ಕಾಸರಗೋಡು ವಲಯ ಅಧ್ಯಕ್ಷ ಫ್ರಾನ್ಸಿಸ್ ಮೊಂತೇರೊ ಹಾಜರಿದ್ದರು.