ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ : ಸವಿನೆನಪಿಗೆ ಕೇಂದ್ರ ಕಚೇರಿಯ ನೂತನ ಕಟ್ಟಡ ‘ಪರಿಶ್ರಮ’ ಲೋಕಾರ್ಪಣೆ.
ಮಡಂತ್ಯಾರು : ಪಾರೆಂಕಿ ಮತ್ತು ಮಾಲಾಡಿ ಗ್ರಾಮಗಳ ಹಿರಿಯರ ಒಗ್ಗಟ್ಟಿನ ಸಂಕಲ್ಪದಂತೆ 1970ರಲ್ಲಿ ಪ್ರಾರಂಭಗೊಂಡ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 50 ವರ್ಷಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಇದರ ಸವಿನೆನಪಿಗೆ ಕೇಂದ್ರ ಕಚೇರಿಯ ನೂತನ ಕಟ್ಟಡ “ಪರಿಶ್ರಮ” ಇದರ ಉದ್ಘಾಟನಾ ಸಮಾರಂಭವು ಸಪ್ಟಂಬರ್ 23ರಂದು ಸಂಘದ ಅಧ್ಯಕ್ಷ ಕೆ. ಅರವಿಂದ ಜೈನ್ ಮತ್ತು ಆಡಳಿತ ಮಂಡಳಿಯ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಕೇಂದ್ರ ಕಚೇರಿಯ ನೂತನ ಕಟ್ಟಡ ಪರಿಶ್ರಮ ಲೋಕಾರ್ಪಣೆಗೊಳಿಸಿ ಶುಭಕೋರಿದರು.
ಕಾರ್ಯಕ್ರಮದಲ್ಲಿ ‘ಪರಿಶ್ರಮ’ ಸ್ಮರಣ ಸಂಚಿಕೆ ಮುಖಪುಟ ಬಿಡುಗಡೆಗೊಳಿಸಲಾಯಿತು. ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಪೂವಾಜೆ ಕುಶಾಲಪ್ಪ ಗೌಡ, ಸಂಘದ ಏಳಿಗೆಗೆ ಸಹಕರಿಸಿದ ಸಂಜೀವ ಶೆಟ್ಟಿ ಮುಗರೋಡಿ, ಪುಷ್ಪರಾಜ್ ಹೆಗ್ಡೆ, ಹಾಜಿ ಲತೀಫ್ ಸಾಹೇಬ್, ರಾಮಕೃಷ್ಣ ಹೆಬ್ಬಾರ್, ಡೀಕಯ್ಯ ಮೂಲ್ಯ, ತುಳಸಿ ಪಿ. ಆಚಾರ್ಯ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಂತ್ಯಾರು ಸಿ.ಎ. ಬ್ಯಾಂಕಿನ ಅಧ್ಯಕ್ಷ ಕೆ. ಅರವಿಂದ ಜೈನ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ. ರಘು, ಕೊಲ್ಪೆದ ಬೈಲು ಮೊಹಿಯುದ್ದೀನ್ ಜಾಮಿಯಾ ಮಸ್ಜಿದ್ ಅಧ್ಯಕ್ಷ ಹಾಜಿ| ಅಬ್ದುಲ್ ಲತೀಫ್ ಸಾಹೇಬ್, ಪಾರೆಂಕಿ ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಶ್ರೀ ಪೇಜಾವರ ಟಿ.ವಿ. ಶ್ರೀಧರ್ ರಾವ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ಡಾ. ಸ್ಟ್ಯಾನಿ ಗೋವಿಯಸ್, ಮಡಂತ್ಯಾರು ಸಿ.ಎ. ಬ್ಯಾಂಕಿನ ಉಪಾಧ್ಯಕ್ಷೆ ಧನಲಕ್ಷ್ಮೀ ಚಂದ್ರಶೇಖರ್ ಮತ್ತು ಸಂಜೀವ ಶೆಟ್ಟಿ ಮುಗರೋಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ, ಆಡಳಿತ ಮಂಡಳಿ ಸದಸ್ಯರಾದ ಕುಮಾರ್ ನಾಯ್ಕ್, ಅಬ್ಧುಲ್ ರಹಿಮಾನ್ ಪಡ್ಪು, ಬಿ. ಪದ್ಮನಾಭ ಸಾಲ್ಯಾನ್, ಎಚ್. ಧರ್ಣಪ್ಪ ಗೌಡ, ಕಿಶೋರ್ ಕುಮಾರ್ ಶೆಟ್ಟಿ, ಜೋಯಲ್ ಗಾಡ್ ಫ್ರೀ ಮೆಂಡೋನ್ಸಾ, ತುಳಸಿ ಜಿ. ಪೂಜಾರಿ, ಉಷಾಲತಾ, ರಮೇಶ್, ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಹಾಗೂ ವಿವಿಧ ಸಿ.ಎ. ಬ್ಯಾಂಕಿನ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಸಹಕಾರಿ ಬಂಧುಗಳು ಉಪಸ್ಥಿತರಿದ್ದರು. ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿ’ಸೋಜ ಧನ್ಯವಾದವಿತ್ತರು.