ಕಥೊಲಿಕ್ ಅಸೋಸಿಯೇಷನ್ ಓಫ್ ಸೌತ್ ಕೆನರಾ (CASK) ಇದರ ನೂತನ ಅಧ್ಯಕ್ಶರಾಗಿ ಲಯನ್ ರೊನಾಲ್ಡ್ ಗೋಮ್ಸ್
ಮಂಗಳೂರು: ಮಾಜಿ ಲಯನ್ಸ್ ಗವರ್ನರ್ ಲಯನ್ ರೊನಾಲ್ಡ್ ಗೋಮ್ಸ್ ಇವರನ್ನು ಕಥೊಲಿಕ್ ಅಸೋಸಿಯೇಷನ್ ಓಫ್ ಸೌತ್ ಕೆನರಾ (CASK) ಇದರ 111ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಮಾರ್ಜೋರಿ ಟೆಕ್ಸೀರಾ ಮತ್ತು ಡಾ. ರೋಹನ್ ಮೋನಿಸ್, ಕಾರ್ಯದರ್ಶಿ ಪೀಟರ್ ಪಿಂಟೋ, ಜಂಟಿ ಕಾರ್ಯದರ್ಶಿ ಟೈಟಸ್ ನೊರೊನ್ಹಾ ಮತ್ತು ಕೋಶಾಧಿಕಾರಿ ರೊನಾಲ್ಡ್ ಮೆಂಡೋನ್ಸಾ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳಾಗಿ ಇಯಾನ್ ಲೋಬೊ, ಇರ್ವಿನ್ ಲೋಬೊ, ಡೆರಿಲ್ ಲಸ್ರಾದೊ, ಜೂಡ್ ರೇಗೊ, ಡಾ. ಅನಿಲ್ ಗೋಮ್ಸ್, ಮಾರ್ಸೆಲ್ ಮೊಂತೇರೊ, ಕೀತ್ ಡಿಸೋಜಾ ಮತ್ತು ಸಪ್ನಾ ನೊರೊನ್ಹಾರವರನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.