ಅಜಿಲಮೊಗರು : ಎಸ್ಕೆಎಸ್ಸೆಸ್ಸೆಫ್ ಶಾಖೆಯಿಂದ “ಇಶ್ಕೇ ರಬೀಅ್”
ಬಂಟ್ವಾಳ : ಪ್ರವಾದಿ ಮುಹಮ್ಮದ್ (ಸ.ಅ.) ರವರ ಜನ್ಮದಿನಾಚರಣೆ ಪ್ರಯುಕ್ತ ಎಸ್ಕೆಎಸ್ಎಸ್ಎಫ್ ಅಜಿಲಮೊಗರು ಶಾಖೆಯಿಂದ “ಇಶ್ಕೇ ರಬೀಅ್” ಕಾರ್ಯಕ್ರಮವು ಅಜಿಲಮೊಗರು ನೇಲ್ಯಪಲ್ಕೆಯ ಶಂಸುಲ್ ಉಲಮಾ ವೇದಿಕೆಯಲ್ಲಿ ಜರುಗಿತು. ಅಜಿಲಮೊಗರು ಸಯ್ಯದ್ ಹಂಝ ತಂಞಳ್ ರವರ ನೇತೃತ್ವದಲ್ಲಿ ಬೃಹತ್ ಮೌಲಿದ್ ಮಜ್ಲಿಸ್ ನಡೆಯಿತು. ಇಸ್ಮಾಯಿಲ್ ಯಮಾನಿಯವರು ಮಜ್ಲಿಸುನ್ನೂರು ನಡೆಸಿಕೊಟ್ಟರು. ಮುಹಮ್ಮದ್ ಬಶೀರ್ ಮುಸ್ಲಿಯಾರ್ ರವರ ಮಾರ್ಗದರ್ಶನದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ದಫ್ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭವನ್ನು ಇರ್ಶಾದ್ ದಾರಿಮಿ ಮಿತ್ತಬೈಲ್ ಉದ್ಘಾಟಿಸಿದರು. ಅಜಿಲಮೊಗರು ಮಸೀದಿ ಖತೀಬ್ ತ್ವಾಹಾ ಸಅದಿ ಅಲ್ ಅಪ್ಲಳಿ ಪ್ರಸ್ತಾವನೆಗೈದರು. ಜಮೀಯತುಲ್ ಉಲೂಮ್ ಅಧ್ಯಕ್ಷರಾದ ಅಬ್ದುಲ್ ಕಾದರ್ ದಾರಿಮಿ ಕುಕ್ಕಿಲ ಮುಖ್ಯ ಪ್ರಭಾಷಣಗೈದರು. ಸಯ್ಯದ್ ಹುಸೈನ್ ಬಾಅಲವಿ ತಂಙಲ್ ಕುಕ್ಕಾಜೆ ದುವಾ ನಡೆಸಿಕೊಟ್ಟರು.
ತ್ವಬೀಬ್ ಉಬೈದುಲ್ಲಾ ಅಝ್ಹರಿ ಪಾಂಡವರಕಲ್ಲು, ಇಬ್ರಾಹಿಂ ಗಂಡಿ, ಸತ್ತಾರ್ ಪಟಿಲ, ಕೆ.ಪಿ. ಅಬ್ದುಲ್ ಖಾದರ್ ಕಡೇಶ್ವಾಲ್ಯ, ಇಬ್ರಾಹಿಂ ಬೊಟ್ಟು, ದಾವೂದ್ ಪಲ್ಲಿಮನೆ, ಅಬ್ದುಲ್ ಹಮೀದ್ ಗಂಡಿ, ಕೆ.ಪಿ. ಖಾಸಿಂ ಪಿಲಿಗೂಡು, ಹಮೀದ್ ಪಾದೆ, ಅಬ್ದುಲ್ ಕಾದರ್ ಇಕ್ರಾ, ಅಬ್ದುಲ್ ರಝಾಕ್, ಮುಹಮ್ಮದ್ ಕಿಡಾವು, ಅಬೂಬಕ್ಕರ್ ಟಿಂಬರ್, ಅಸ್ವದ್, ಕಾದರ್, ರಝಾಕ್, ಉಮರಬ್ಬ ಗಂಡಿ, ಲತೀಪ್ ಸೂಪ, ಲತೀಪ್ ತಾಲುಕು, ರಫೀಕ್, ಶೆರೀಫ್ ನಂದಾವರ ಇನ್ನಿತರರು ಉಪಸ್ಥಿತರಿದ್ಧರು.
ಎಸ್ಕೆಎಸ್ಎಸ್ಎಫ್ ಅಜಿಲಮೊಗರು ಶಾಖೆಯ ಅಧ್ಯಕ್ಷ ಅಬ್ದುಲ್ ರಹ್ಮಾನ್ ಝುಹರಿ ಸ್ವಾಗತಿಸಿ, ಉಪಾಧ್ಯಕ್ಷ ಅಬ್ದುಲ್ ಲತೀಫ್ ಅಜಿಲಮೊಗರು ವಂದಿಸಿದರು. ಮುಹಮ್ಮದ್ ನವಾಲ್ ಕಿರಾಅತ್ ಪಠಿಸಿದರು. ಝೈನುಲ್ ಅಕ್ಬರ್ ಕಡೇಶ್ವಾಲ್ಯ ಕಾರ್ಯಕ್ರಮ ನಿರೂಪಿಸಿದರು.