ಮೈಸೂರು ಧರ್ಮಕ್ಷೇತ್ರದಿಂದ ಸನ್ಮಾನ ಸ್ವೀಕರಿಸಿದ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್

ಮೈಸೂರು ಧರ್ಮಕ್ಷೇತ್ರದ ಕಥೊಲಿಕ್ ಎಸೋಶಿಯೇಷನ್ ಆಫ್ ಮೈಸೂರು ವತಿಯಿಂದ ಸೈಂಟ್ ಜೋಸೆಫ್ ಕೆಥೆಡ್ರಲ್ ಮೈಸೂರಿನಲ್ಲಿ ಇಂದು ಸಪ್ಟಂಬರ್ 29ರಂದು ಭಾನುವಾರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ AICU ಚುನಾವಣೆಯಲ್ಲಿ ಬಹು ಮತಗಳಿಂದ ರಾಜ್ಯಾಧ್ಯಕ್ಷರಾಗಿ ಚುನಾಯಿತರಾಗಿ ಬಂದ ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇವರಿಗೆ ಮೈಸೂರು ಧರ್ಮಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಡಿಸೋಜರವರು ನನಗೆ ಇದೊಂದು ಜನರ ಸೇವೆ ಮಾಡಲು ದೇವರು ಕೊಟ್ಟ ವರ. ನನಗೆ ಬಯಸದೆ ಬಂದ ಭಾಗ್ಯ. ನನ್ನ ಕೈಯಲ್ಲಾದಷ್ಟು ಸೇವೆಯನ್ನು ವಿವಿಧ ಸಂಘಟನೆಗಳ ಮುಖಾಂತರ ನೀಡುತ್ತಾ ಇದ್ದೇನೆ. ಮುಂದಕ್ಕೂ ದೇವರ ಆಶೀರ್ವಾದದಿಂದ ನೀಡುತ್ತೇನೆ ಎಂದು ಹೇಳಿದರು. ಸನ್ಮಾನವನ್ನು ನೀಡಿದ್ದಕ್ಕಾಗಿ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಿಗೆ ಹಾಗೂ ಸಂಘಟಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸೈಂಟ್ ಫಿಲೋಮಿನಾ ಕೆಥೆಡ್ರಲ್ ಇಲ್ಲಿಯ ಧರ್ಮಗುರುಗಳಾದ ಅತೀ ವಂದನೀಯ ಫಾದರ್ ಸ್ಟ್ಯಾನಿ ಆಲ್ಮೇಡಾ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಡಾ. ಅನಿಲ್ ತೊಮಸ್, ಮೈಸೂರು ಕಥೊಲಿಕ್ ಅಸೋಶಿಯೇಷನ್ ಅಧ್ಯಕ್ಷ ಎಂ.ಬಿ. ಸುರೇಶ್ ಹಾಗೂ ಕಾರ್ಯದರ್ಶಿ ಪ್ರೇಮಾನಂದ್ ಡಿಮೆಲ್ಲೊ ಉಪಸ್ಥಿತರಿದ್ದರು.