October 17, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದುಬೈಯಲ್ಲಿ ಮರೆಯಲಾರದ ಸಂಗೀತ ಮತ್ತು ಹಾಸ್ಯ ಸಂಜೆ !

ದುಬೈಯ ಇಂಡಿಯನ್ ಹೈಸ್ಕೂಲ್ ನಲ್ಲಿರುವ ಶೇಖ್ ರಶೀದ್ ಆಡಿಟೋರಿಯಂ ಒಂದು ಸುಂದರ ನಗು ಬೆರೆತ ಸಂಗೀತ ಸಂಜೆಗೆ ಸಾಕ್ಷಿಯಾಯಿತು. ಕರಾವಳಿಯ ಮಿನುಗುವ ನಕ್ಸತ್ರಗಳ ಪ್ರತಿಭೆಗೆ ಇಡೀ ಪ್ರೇಕ್ಷಕ ಸಮೂಹ ಮನ ಸೋತಿತು. ವಾವ್ ಎಂತಹ ಅದ್ಬುತ ಸಂಜೆ ಮಾರಾಯರೆ!  “USWAS SHIRVA ” ಸಂಘಟನೆ 28 ಸಪ್ಟಂಬರ್ ಸಂಜೆ 6 ಗಂಟೆಗೆ ” ಕಲಾ ಸಂಗಮ್” ಅನ್ನುವ ಸಂಗೀತ ಮತ್ತು ಹಾಸ್ಯ ಸಂಜೆಯನ್ನು ಆಯೋಜಿಸಿತ್ತು. ಉಸ್ವಾಸ್ ಶಿರ್ವ ಹೆಸರೇ ಹೇಳುವಂತೆ ನಿಜವಾಗಲೂ ದುಬೈಯಲ್ಲಿನ ಕೊಂಕಣಿ ಸಮುದಾಯದ ಉಸಿರಾಗಿದೆ. ನಮ್ಮಲ್ಲಿ ಒಂದು ಮಾತಿದೆ. ಶಿರ್ವದವರು ತುಂಬಾ ಅದ್ಬುತ ಜನಗಳು ಅಂತ! ನಿಜ ಕಣ್ರೀ. ನಿನ್ನೆ ನಾನು ಪ್ರತ್ಯಕ್ಷವಾಗಿ ನೋಡಿದೆ. ಈ ಸಂಘಟನೆಯ ಬಗ್ಗೆ ನಾನು ಕೇಳಿದ್ದೆ. ವರ್ಷವಿಡೀ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಈ ಸಂಘಟನೆಯ ಒಗ್ಗಟ್ಟು, ನಾಯಕತ್ವ ನಿಜಕ್ಕೂ ಮೆಚ್ಚಿಗೆಗೆ ಅರ್ಹ. ಒಂದು ಪುಟ್ಟ ಊರಿನ ಸಂಘಟನೆ, ಕಾಲಸಂಗಮ ದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ವಿಶ್ವದಾದ್ಯಂತ ಕೊಂಕಣಿ ಸಮುದಾಯದ ಗಮನ ಸೆಳೆದಿರೋದನ್ನು ಮೆಚ್ಚದಿರಲು ಸಾಧ್ಯವಿಲ್ಲ.

ಸಂಜೆ ಸರಿಯಾಗಿ 6 ಗಂಟೆ 10 ನಿಮಿಷಕ್ಕೆ ” ಉಸ್ವಾಸ್ ಶಿರ್ವದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ದಿವಂಗತ ಶರನ್ ಡಿಸೋಜಾರವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಕಾರ್ಯಕ್ರಮ ಸುರು ಆಯಿತು. ಅವರ ನೆನಪಿನಂಗಳಾದ ಪಟಗಳು ನೆರೆದಿದ್ದ ಸಭಿಕರನ್ನು ಭಾವುಕಗೊಳಿಸಿತು.  ವೆರ್ನೊನ್ ಡಿಸೋಜ ರವರ ನಿರೂಪಣೆಯಲ್ಲಿ ಇಡೀ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮೂಡಿ ಬಂತು. ಪ್ರತಿಭಾವಂತ ವೆರ್ನೊನ್ ಡಿಸೋಜಾರವರ ಮಾತಿನ ಮೋಡಿ ನಿಜಕ್ಕೂ ಇಡೀ ಕಾರ್ಯಕ್ರಮದ ಪ್ರಾಣವಾಯುವಾಗಿತ್ತು. ಒಬ್ಬ ಅದ್ಬುತ ನಿರೂಪಕ ಸಿಕ್ಕರೆ ಇಡೀ ಕಾರ್ಯಕ್ರಮದ ಯಶಸ್ವಿನ ಬಗ್ಗೆ ಮೊದಲೇ ಭವಿಷ್ಯ ಹೇಳಿಬಿಡಬಹುದು ಅಲ್ವೇ.

 

ಮೊದಲಿಗೆ ಯುವ ಪ್ರತಿಭೆ ಕ್ಯಾರೋಲ್ ತಮ್ಮ ಅದ್ಭುತವಾದ ಧ್ವನಿಯ ಮೂಲಕ ಸುಂದರ ಹಾಡುಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಿದರೆ ನಂತರದ ಸರದಿ ಯುವ ಪ್ರತಿಭೆ ಸಕಲಕಲಾವಲ್ಲಭ, ನಟ, ಗಾಯಕ, ಸಂಗೀತ ನಿರ್ದೇಶಕ, ನರ್ತಕ, ಅಶ್ವಿನ್ ಡಿಕೋಸ್ತರವರ ಜಬರ್ದಸ್ತ್ ಸಂಗೀತ. ನಿನ್ನೆ ಇವರು ಹಾಡಿದ ಓಂ ಶಾಂತಿ ಚಿತ್ರದ ಹಾಡು ಪ್ರೇಕ್ಷಕರನ್ನು ಮಂತ್ರ ಮುಗ್ದಗೊಳಿಸಿತು. ಇವರಿಗೆ ಜೊತೆಯಾದದ್ದು ಪ್ರೇಕ್ಷಕರ ಶಿಳ್ಳೆ ಮತ್ತು ಚಪ್ಪಾಳೆ. ಮೆಲೋಡಿ ಸ್ಟಾರ್ ಮ್ಯಾಕ್ಸಿಮ್ ಪಿರೇರಾ ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು. ಹಾಡುಗಾರ, ಸಂಗೀತ ಸಂಯೋಜಕ, ಸಿನಿಮಾ ನಿರ್ದೇಶಕ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುರು! ಆಡು ಮುಟ್ಟದ ಸೊಪ್ಪಿಲ್ಲ ಗಾದೆಗೆ ಸಮಾನಾರ್ಥಕ ಪದ ಮ್ಯಾಕ್ಸಿಮ್ ಪಿರೇರಾ.  ಇವರು ನನ್ನ ಒಂದು ಕಾಲದ ಸಹೋದ್ಯೋಗಿ, ಮಿತ್ರ ಅನ್ನೊದು ನನಗೆ ಹೆಮ್ಮೆ. ನಿನ್ನೆ ಇಡೀ ಪ್ರೇಕ್ಷಕ ಸಮೂಹದಿಂದ ವನ್ಸ್ ಮೋರ್ ಅನ್ನುವ ಬೇಡಿಗೆ ಗಿಟ್ಟಿಸಿದ ಗಾಯಕ. ಒಂದಕ್ಕಿಂತ ಒಂದು ಅದ್ಬುತ ಹಾಡುಗಳು.

ಲವೀಟಾ ಲೋಬೊ. ನಿನ್ನ ಮೊತ್ತ ಮೊದಲ ಬಾರಿಗೆ ಒಂದೇ ದಿನದಲ್ಲಿ ಒಂದೇ ವೇದಿಕೆಯ ಮೇಲೆ 6 ಭಾಷೆಗಳಲ್ಲಿ ಹಾಡಿ ಪ್ರೇಕ್ಷಕರ ಮನ ಸೂರೆಗೊಂಡರು. ಇವರು ಎ.ರ್. ರೆಹಮಾನ್ ರವರೊಂದಿಗೆ ಕೆಲಸಮಾಡಿದವರು. ಅನೇಕ ಚಲನಚಿತ್ರಗಲ್ಲಿ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ನಿನ್ನೆ ಇಡೀ ವೇದಿಕೆಗೆ ಸಂಗೀತದ ಕಿಚ್ಚು ಹತ್ತಿಬಿಟ್ಟ್ರು. ಈ ಸಂಗೀತಗಾರರಿಗೆ ಜೊತೆಯಾದದ್ದು ಓಷನ್ ಕಿಡ್ಡ್ಸ್ ನ್ರತ್ಯ ತಂಡ ಮತ್ತು V6 ಮ್ಯೂಸಿಕ್ ಗ್ರೂಪ್. ಇನ್ನು ಸುಮಧುರ ಸಂಜೆಯ ಕಿರೀಟ, ನಿತೀಶ್ ಶೆಟ್ಟಿ ಎನ್ನುವ ಅದ್ಬುತ ಹಾಸ್ಯ ಕಲಾವಿದ. ಸೋನಿ ಟಿವಿಯಲ್ಲಿ ನೀವು ಖಂಡಿತವಾಗಿಯೂ ಇವರನ್ನು ನೋಡಿರುತ್ತಿರಿ. ನೆರೆದಿದ್ದ ಜನರನ್ನು ನೆಗೆಗಡಲಿನಲ್ಲಿ ತೇಲಿಸಿಬಿಟ್ಟರು ನಿನ್ನೆ.  ನಿಜಕ್ಕೂ ಅವರಿಗೊಂದು ಸಲಾಂ.

ಒಟ್ಟಿನಲ್ಲಿ ಉಸ್ವಾಸ್ ಶಿರ್ವಕ್ಕೆ ಹೃದಯದಿಂದ ಧನ್ಯವಾದಗಳು, ಮರೆಯಲಾರದ ಸಂಗೀತ ಸಂಜೆಯನ್ನು ಕೊಟ್ಟದ್ದಕ್ಕೆ.

ಪ್ರಕಾಶ್ ಮಲೆಬೆಟ್ಟು

You may also like

News

ತಲೆಮರೆಸಿಕೊಂಡ ಆರೋಪಿಗಳ ಜಾಮೀನುದಾರರ ವಿರುದ್ದ ಕ್ರಮ

ಆರೋಪಿಗಳು ಸ್ವತಃ ನ್ಯಾಯಾಲಯಕ್ಕೆ ಶರಣು – ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯ ಆರೋಪಿಗಳ ಜಾಮೀನುದಾರರ
News

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸರಸ್ವತಿ ಮಂಟಪ ಲೋಕಾರ್ಪಣೆ

ಧರ್ಮಾಚರಣೆಯಿಂದ ಪ್ರಪಂಚಕ್ಕೆ ಶ್ರೇಯಸ್ಸು – ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಧರ್ಮಾಚರಣೆಯಿಂದ ಪ್ರಪಂಚಕ್ಕೆ ಶ್ರೇಯಸ್ಸು. ಧರ್ಮದಿಂದಲೇ ಸುಖ, ಸಂಪತ್ತು ಸಿದ್ಧಿಸುವುದು. ಜಗತ್ತಿನಲ್ಲಿ ಹಲವಾರು ಸೌಖರ್ಯಗಳಿದ್ದರೂ‌

You cannot copy content of this page