ರಾಜೀವ್ ಯುವಜನ ಸೇವಾ ಟ್ರಸ್ಟ್ (ರಿ.) ಬಾಯಿಲ ಹಾಗೂ ಶ್ರೀ ದೇವಿ ಮಹಿಳಾ ಸಂಘ ಬಾಯಿಲ ವತಿಯಿಂದ ಸ್ವಚ್ಛತಾ ಕಾರ್ಯ

ಕಲ್ಲಡ್ಕ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ರಾಜೀವ್ ಯುವಜನ ಸೇವಾ ಟ್ರಸ್ಟ್ (ರಿ.) ಬಾಯಿಲ ಹಾಗೂ ಶ್ರೀ ದೇವಿ ಮಹಿಳಾ ಸಂಘ ವತಿಯಿಂದ ಅರೆಬೆಟ್ಟು – ಬಾಯಿಲ ರಸ್ತೆ ಬದಿಯ ಪೊದೆ ಕಡಿಯುವ ಮೂಲಕ ಸ್ವಚ್ಛತಾ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ರಾಜೀವ್ ಯುವಜನ ಸೇವಾ ಟ್ರಸ್ಟ್ ಇದರ ಅಧ್ಯಕ್ಸ ಸತೀಶ್ ಪೂಜಾರಿ ಬಾಯಿಲ, ಪದಾಧಿಕಾರಿಗಳು, ಟ್ರಸ್ಟಿಗಳು, ಶ್ರೀ ದೇವಿ ಮಹಿಳಾ ಸಂಘದ ಅಧ್ಯಕ್ಷೆ ಚೇತನಾ ಗೋಳಿಮಾರ್, ಪದಾಧಿಕಾರಿಗಳು, ವೀರಕಂಬ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಗೋಳಿಮಾರ್, ಊರಿನ ನಾಗರಿಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.