February 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಪಡೀಲ್ ನಲ್ಲಿ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ; ಆಸ್ಪತ್ರೆಗಳು ಚಿಕಿತ್ಸೆಯ ಜೊತೆಗೆ ಜನಜಾಗೃತಿಯ ಕೇಂದ್ರವಾಗಲಿ – ಸನ್ಮಾನ್ಯ ಯು.ಟಿ. ಖಾದರ್

ಮಂಗಳೂರು : ಡಾ. ಅಬ್ದುಲ್ ಬಶೀರ್ ವಿ.ಕೆ. ಇವರ ಮಾಲೀಕತ್ವದ ಜನಪ್ರಿಯ ಆಸ್ಪತ್ರೆಯಲ್ಲಿ ಎಲ್ಲಾ ವರ್ಗದ ಜನರಿಗೆ ಕೈಗೆಟಕುವ ರೀತಿಯಲ್ಲಿ ಚಿಕಿತ್ಸೆ ದೊರೆಯಲಿ ಎಂದು  ಕರ್ನಾಟಕ ವಿಧಾನ ಸಭಾ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ಹೇಳಿದರು.

ಮಂಗಳೂರಿನ ಪಡೀಲ್ ನಲ್ಲಿ ಸಪ್ಟಂಬರ್ 29ರಂದು ನೂತನವಾಗಿ ಪ್ರಾರಂಭಗೊಂಡ ಹಾಸನದಲ್ಲಿರುವ ಜನಪ್ರಿಯ ಆಸ್ಪತ್ರೆಯ ಸಹಸಂಸ್ಥೆಯಾದ ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇದೊಂದು ಸಂತೋಷ ಸಂಭ್ರಮದ ಕ್ಷಣವಾಗಿದೆ. ಡಾ. ಅಬ್ದುಲ್ ಬಶೀರ್ ರವರ ವ್ಯಕ್ತಿತ್ವ ಬಹಳಷ್ಟು ಉತ್ತಮವಾಗಿದೆ. ಇವರು ಎಲ್ಲಾ ವರ್ಗದ ಜನರ‌ ಸಹಕಾರದಿಂದ ಈ ಹಂತಕ್ಕೆ ತಲುಪಲು ಕಾರಣವಾಗಿದೆ.  ಯುವ ಜನತೆಗೆ ಇವರ ವ್ಯಕ್ತಿತ್ವ ಒಂದು ಸಂದೇಶವಾಗಿದೆ. ಬಹಳಷ್ಟು ಶ್ರಮಪಟ್ಟು ತನ್ನೂರಿನ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗಲೆಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ನಿರಂತರವಾಗಿ ಸಾಮಾಜಿಕ ಜನಜಾಗೃತಿ ಮಾಡಿಸುವ ಕೆಲಸ ಆಸ್ಪತ್ರೆಯಿಂದ ಆಗಲಿ. ರೋಗ ತಡೆಗಟ್ಟುವ ಕೆಲಸ ಸಂಘ ಸಂಸ್ಥೆಗಳಿಂದ ಆಗಲಿ. ಇದೊಂದು ಉತ್ತಮ ವೈದ್ಯರನ್ನು ನಿರ್ಮಿಸುವ ಒಂದು ಕೇಂದ್ರವಾಗಿದೆ ಎಂದು ಹೇಳಿದರು.

ಬರ್ತ್ ಆಂಡ್ ಬ್ಲೂಮ್ ವಿಭಾಗವನ್ನು ಉದ್ಘಾಟಿಸಿದ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ್ ಮಾತನಾಡಿ, ಸೇವೆ ನೀಡುವ ನಿಟ್ಟಿನಲ್ಲಿ ಆರಂಭಿಸಲಾದ ಆಸ್ಪತ್ರೆ ಅತ್ಯಂತ ಯಶಸ್ಸಾಗುತ್ತದೆ. ‘ಟ್ರೀಟ್ ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್’ ಇದು ಡಾ. ಅಬ್ದುಲ್ ಬಶೀರ್ ರವರ ಪಾಲಿಸಿ. ಗುಣಮಟ್ಟದ ಸೇವೆ ನೀಡುವ ಕೆಲಸ‌ ಸಂಸ್ಥೆಯಿಂದ ಆಗಲಿದೆ ಎನ್ನುವ ಭರವಸೆ ನನಗಿದೆ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈರವರು ಮಾತನಾಡಿ, ಡಾ. ಅಬ್ದುಲ್ ಬಶೀರ್ ಅವರು ಸಾಮಾಜಿಕ ಕಳಕಳಿಯ ಭದ್ದತೆಯೊಂದಿಗೆ ಬಹಳ ಅಪೇಕ್ಷೆಯನ್ನು ಇಟ್ಟುಕೊಂಡು ಆರಂಭಿಸಿದ ಸಂಸ್ಥೆ ಇದಾಗಿದ್ದು, ಸಂಸ್ಥೆಯಲ್ಲಿ ಟ್ರೋಮೋ ಸೆಂಟರ್ ಆರಂಭಿಸಬೇಕು. ಪೈಪೋಟಿ ಇದ್ದಲ್ಲಿ ಯಶಸ್ಸು ಸಾಧ್ಯ. ಬಡವರಿಗೆ ಸಹಕಾರ ನೀಡುವ ಸಂಸ್ಥೆಯ ಗುಣ ಅಭಿನಂದನೀಯ ಎಂದರು.

ಮಾಜಿ ಕೇಂದ್ರ ಸಚಿವ ಸಿ. ಎಂ. ಇಬ್ರಾಹಿಂ ಮಾತನಾಡಿ ಬಹಳಷ್ಟು ಕ್ಲಿಷ್ಟಕರ ಆಪರೇಶನ್ ಮಾಡಿದ ಕೀರ್ತಿ ಅಬ್ದುಲ್ ಬಶೀರ್ ರವರಿಗೆ ಸಲ್ಲಬೇಕು. ಬಶೀರ್ ರವರ ಸೇವೆ ಅನನ್ಯವಾದುದು. ಮಾನವೀಯ ಧರ್ಮ ಇರುವ ವ್ಯಕ್ತಿ ಅವರು. ಹಾಸನದಲ್ಲಿ ಇವರ ಜನಪ್ರಿಯತೆ ಬಹಳಷ್ಟಿದೆ. ಇವರಿಂದಾಗಿ ಹಲವು ಬಡರೋಗಿಗಳು ಗುಣಮಟ್ಟದ ಚಿಕಿತ್ಸೆ ಪಡೆದು ತೆರಳಿರುವ ನಿದರ್ಶನಗಳು ಬಹಳಷ್ಟಿದೆ. ಇಲ್ಲಿಯೂ ಬಡವರ ಪಾಲಿಗೆ ಇದು ಸಹಕಾರಿಯಾಗಲಿದೆ ಎಂದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ಹಲವಾರು ವರುಷದ ಹಿಂದಿನ ಕಾರ್ಯಕ್ರಮವನ್ನು ನೆನಪಿಸುವ ಕಾರ್ಯಕ್ರಮ ಇದಾಗಿದೆ. ಎಲ್ಲಾ ವರ್ಗದ ಜನರ ಆಶ್ರಯತಾಣ ಇದಾಗಿದೆ. ವಿದ್ಯಾಭ್ಯಾಸಕ್ಕೆ ಒತ್ತು ನೀಡುವ ಕೆಲಸ ಇವರಿಂದ ನಡೆದಿದೆ. ಜೀವ ಉಳಿಸುವ ಕೆಲಸ ಈ ಆಸ್ಪತ್ರೆಯಿಂದ ಆಗಲಿದೆ. ಇವರ ಸಾಮಾಜಿಕ ಗುಣದಿಂದಾಗಿ ಇವರು ಈ ಹಂತಕ್ಕೆ ತಲುಪಲು ಕಾರಣವಾಗಿದೆ ಎಂದರು. ಜನಪ್ರಿಯ ಫೌಂಡೇಶನ್ ಚೇಯರ್ ಮ್ಯಾನ್ ಡಾ. ಅಬ್ದುಲ್ ಬಶೀರ್ ವಿ.ಕೆ. ಸ್ವಾಗತಿಸಿ ಆಸ್ಪತ್ರೆಯ ಸೌಲಭ್ಯ ಹಾಗೂ ವಿಶೇಷತೆಗಳ ಬಗ್ಗೆ ಮಾತನಾಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ. ಅಶ್ರಫ್, ಹಾಸನದ ಸಂಸದರಾದ ಶ್ರೇಯಸ್ ಎಂ. ಪಾಟೇಲ್, ಹಾಸನದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಂ.ಎನ್. ಮೋಹನ್, ಹಾಸನದ ಹಿರಿಯ ವೈದ್ಯ ಡಾ. ಶಾಮ್ ಸಂಪಿಗೆತಾಯ, ವಿಧಾನ ಪರಿಷತ್ತಿನ ಸದಸ್ಯ ಐವನ್ ಡಿಸೋಜಾ, ಕೆ.ಪಿ.ಸಿ.ಸಿ. ಪ್ರಧಾ‌ನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಇಂಡಿಯಾನ‌ ಆಸ್ಪತ್ರೆಯ ಮುಖ್ಯಸ್ಥ ಯೂಸುಫ್ ಕುಂಬ್ಳೆ, ಮಂಗಳೂರಿನ ಹ್ಯೂಸಮ್ ಸ್ಟೀಲ್ಸ್ ನ ಮಾಲಕ ಶಾಕೀರ್ ಹಾಜಿ, ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಪ್ರಮುಖರಾದ ಎಸ್.ಎಂ. ರಶೀದ್ ಹಾಜಿ, ರಫೀಕ್ ಮಾಸ್ಟರ್, ಅಬ್ದುಲ್ ಕುದ್ಕೋಳಿ, ವಿ.ಕೆ. ಅಬ್ದುಲ್ ಖಾದರ್ ಬದ್ರಿಯಾ, ಡಾ. ಅಣ್ಣಯ್ಯ ಕುಲಾಲ್, ಜನಪ್ರಿಯ ಫೌಂಡೇಶನ್ ನ ಉಪಾಧ್ಯಕ್ಷೆ ಫಾತಿಮಾ ನಸ್ರಿನಾ ಬಶೀರ್, ವೈದ್ಯರಾದ ಡಾ. ಶಾರುಕ್ ಅಬ್ದುಲ್ಲ, ಡಾ. ಜಸ್ನಿ ಬಶೀರ್, ಡಾ. ಶಫಾಕ್ ಮಹಮ್ಮದ್, ಡಾ. ಶಾಮಿಕ್ ಅಬ್ದುಲ್ ರಹಿಮಾನ್, ಜನಪ್ರಿಯ ಫೌಂಡೇಶನ್ ನ ನಿರ್ದೇಶಕ ಡಾ. ಹಸನ್ ಮುಭಾರಕ್, ಡಾ. ನೂಮನ್ ಮಹಮ್ಮದ್, ಡಾ. ಫಾತಿಮಾ ಇಸ್ಮತ್, ಡಾ. ಆಲಮ್ ನವಾಜ್ ಮತ್ತು ಡಾ. ಮೊಯಿದಿನ್ ನಫ್ಸಿರ್ ಮೊದಲಾದವರು ಉಪಸ್ಥಿತರಿದ್ದರು.

ಜನಪ್ರಿಯ ಫೌಂಡೇಶನ್ ನ ನಿರ್ದೇಶಕರುಗಳಾದ ಡಾ. ಕಿರಾಶ್ ಪರ್ತಿಪ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನುಮಾನ್ ಆಸ್ಪತ್ರೆಯ ವಿಶೇಷತೆಯ ಬಗ್ಗೆ ತಿಳಿಸಿದರು.  ಜನಪ್ರಿಯ ಫೌಂಡೇಶನ್ ನ ನಿರ್ದೇಶಕ ಶಾರುಕ್ ಅಬ್ದುಲ್ಲ ವಂದಿಸಿದರು.

You may also like

News

 ಗೆಳೆಯರ ಬಳಗ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮ

ಗೆಳೆಯರ ಬಳಗ ಅಕ್ಷಯನಗರ (ರಿ.) ನಿಡಿಗಲ್ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮವು ಫೆಬ್ರವರಿ 9ರಂದು ಆದಿತ್ಯವಾರ ಕಲ್ಮಂಜ ಗ್ರಾಮದ ಅಕ್ಷಯನಗರದ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
News

CELEBRATION OF THE FEAST OF OUR LADY OF LOURDES at Lourdes central School, Bejai, Mangalore

“Let us run to Mary and as her little children cast ourselves into her arms with a perfect confidence.”  —St.

You cannot copy content of this page