ಸೂರಿಕುಮೇರುವಿನಲ್ಲಿ ನಡೆಯುವ SSF ಮಾಣಿ ಸೆಕ್ಟರ್ ಸಾಹಿತ್ಯೋತ್ಸವಕ್ಕೆ ಸ್ವಾಗತ ಸಮಿತಿ ರಚನೆ

ಮಾಣಿ : ವಿದ್ಯಾರ್ಥಿ ಸಂಘಟನೆಯಾದ ಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ SSF ಮಾಣಿ ಸೆಕ್ಟರ್ ಸಾಹಿತ್ಯೋತ್ಸವವು ಇದೇ ಬರುವ ಅಕ್ಟೋಬರ್ 20ರಂದು ಆದಿತ್ಯವಾರ ಸೂರಿಕುಮೇರು ಜಂಕ್ಷನ್ ಸಮೀಪ ಮಸೀದಿ ಬಳಿ ಮೈದಾನದಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಸಪ್ಟಂಬರ್ 30ರಂದು ತಾಜುಲ್ ಫುಖಹಾಅ್ ಸುನ್ನಿ ಸೆಂಟರ್ ಪರ್ಲೋಟಿನಲ್ಲಿ ಸಮಾಲೋಚನೆ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಸದಸ್ಯರಾದ ಯೂಸುಫ್ ಹಾಜಿ ವಹಿಸಿದ್ದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಮುಬಶ್ಶಿರ್ ದುಆಃ ನೆರೆವೇರಿಸಿ ಸಭೆಯನ್ನು ಉದ್ಘಾಟಿಸಿದರು. ಈ ಸಭೆಯಲ್ಲಿ ಸಾಹಿತ್ಯೋತ್ಸವ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸ್ವಾಗತ ಸಮಿತಿ ಚೇರ್ಮನ್ ಆಗಿ ಹನೀಫ್ ಸಂಕ ಸೂರಿಕುಮೇರು, ಕನ್ವೀನರಾಗಿ ಯೂಸುಫ್ ಸಯೀದ್ ಪುತ್ತೂರು ಹಾಗೂ ಕೋಶಾಧಿಕಾರಿಯಾಗಿ ಯೂಸುಫ್ ಹಾಜಿ ಸೂರಿಕುಮೇರು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ವೈಸ್ ಚೇರ್ಮನ್ ಆಗಿ ಮುಹಮ್ಮದ್ ಹಬೀಬ್ ಶೇರಾ, ಕಾಸಿಂ ಪಾಟ್ರಕೋಡಿ ಹಾಗೂ ಕಾಸಿಂ ಮುಸ್ಲಿಯಾರ್ ಸೂರ್ಯ, ವೈಸ್ ಕನ್ವೀನರಾಗಿ ಖಲಂದರ್ ಬುಡೋಳಿ ಹಾಗೂ ಸಾಜಿದ್ ಪಾಟ್ರಕೋಡಿ, ಮಾಧ್ಯಮ ವಿಭಾಗದ ಕನ್ವೀನರಾಗಿ ಸಲೀಂ ಮಾಣಿ ಹಾಗೂ ಸ್ವೀಕಾರ ವಿಭಾಗದ ಕನ್ವೀನರಾಗಿ ಇಸ್‌ಹಾಖ್ ಮಿತ್ತೂರು, ಸದಸ್ಯರಾಗಿ ಅಝೀಂ ಸೂರಿಕುಮೇರು, ಹಸೈನ್ ಸಂಕ ಸೂರಿಕುಮೇರು, ಅಬ್ದುಲ್ ಕರೀಂ ನೆಲ್ಲಿ, ಇಸ್ಮಾಯಿಲ್ ಪರ್ಲೋಟು, ಆದಂ ಪಾಟ್ರಕೋಡಿ, ಅಬ್ದುಲ್ ಜಲೀಲ್ ಮುಸ್ಲಿಯಾರ್ ಬುಡೋಳಿ, ಹಮೀದ್ ಸೂರ್ಯ, ಅಬ್ದುಲ್ ಲತೀಫ್ ಸೂರ್ಯ, ಇಬ್ರಾಹಿಂ ಸೂರ್ಯರವರನ್ನು ಆಯ್ಕೆ ಮಾಡಲಾಯಿತು.
ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಸದಸ್ಯರಾದ ಉಸೈದ್ ಸಖಾಫಿ ಸೂರ್ಯ ಹಾಗೂ ಎಸ್‌ವೈಎಸ್ ಮಾಣಿ ಸರ್ಕಲ್ ಸದಸ್ಯ ಕಾಸಿಂ ಮುಸ್ಲಿಯಾರ್ ಸೂರ್ಯ ಇವರು ಶುಭ ಹಾರೈಸಿದರು. ಸಭೆಯಲ್ಲಿ ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಕೋಶಾಧಿಕಾರಿ ಖಲಂದರ್ ಪಾಟ್ರಕೋಡಿ ಸಹಿತ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ಮಾಣಿ ಸರ್ಕಲ್, ಸೆಕ್ಟರ್ ವ್ಯಾಪ್ತಿಯ ನಾಯಕರು ಉಪಸ್ಥಿತರಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರು ಸ್ವಾಗತಿಸಿ, ಎಸ್ಸೆಸ್ಸೆಫ್ ಮಾಣಿ ಸರ್ಕಲ್ ಅಧ್ಯಕ್ಷ ಸಾಬಿತ್ ಪಾಟ್ರಕೋಡಿ ಇವರು ಧನ್ಯವಾದಗೈದರು. ಎಸ್‌ವೈಎಸ್ ಮಾಣಿ ಸರ್ಕಲ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.