ಬಣ್ಣ ಬೆರಗಿನ ಸಾಂಪ್ರದಾಯಿಕ ನೆಲೆಗಟ್ಟಿನ ಹಬ್ಬ – ಕರಮ್ ಉತ್ಸವ ಧಾರ್ಮಿಕ ಸಭೆಯಲ್ಲಿ ವಂದನೀಯ ಫಾದರ್ ಅಬ್ರಹಾಂ ಡಿಸೋಜ ಬಣ್ಣನೆ.
ಕರಮ್ ಹಬ್ಬವು ಬಣ್ಣ ಬೆರಗಿನ ಮತ್ತು ಸಾಂಪ್ರದಾಯಿಕ ನೆಲೆಗಟ್ಟು ಹೊಂದಿದ ಉತ್ಸವವಾಗಿತ್ತು ಎಂದು ಮುಲ್ಕಿಯ ಡಿವೈನ್ ಕಾಲ್ ರೆಟ್ರೀಟ್ ಸೆಂಟರ್ ನ ನಿರ್ದೇಶಕ ವಂದನೀಯ ಫಾದರ್ ಅಬ್ರಹಾಂ ಡಿಸೋಜ ಹೇಳಿದರು.
ಮಂಗಳೂರು ಮತ್ತು ಸುತ್ತಮುತ್ತಲಿನ 300 ಚೋಟಾ ನಾಗ್ಪುರ್ ವಲಸೆ ಆದಿವಾಸಿಗಳು ಮುಲ್ಕಿ ಕಾರ್ನಾಡು ಡಿವೈನ್ ಕಾಲ್ ರೆಟ್ರೀಟ್ ಸೆಂಟರ್ ನಲ್ಲಿ ಭಾನುವಾರ ತಮ್ಮ ಪಾರಂಪರಿಕ ಕರಮ್ ಹಬ್ಬವನ್ನು ನೃತ್ಯ, ಹಾಡು ಮತ್ತು ಆದಿವಾಸಿ ಸಂಪ್ರದಾಯಗಳೊಂದಿಗೆ ಆಚರಿಸಿದರು. ಮಂಗಳೂರು ಕೇಂದ್ರೀಕೃತಗೊಳಿಸಿ ವಿವಿಧ ಪ್ರದೇಶಗಳಲ್ಲಿ ಚೋಟಾ ನಾಗ್ಪುರ್ ಆದಿವಾಸಿ ವಲಸಿಗರು ಕಾರ್ಖಾನೆಗಳು, ಕೈಗಾರಿಕೆಗಳು, ಆಸ್ಪತ್ರೆಗಳು, ಕೃಷಿ ಮತ್ತು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಚೋಟಾ ನಾಗ್ಪುರ್ ಪ್ರದೇಶದ ಆರ್ಥಿಕ ಕಠಿಣ ಪರಿಸ್ಥಿತಿಯಿಂದ ಜೀವನೋಪಾಯ ಹುಡುಕಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಲಸೆ ಬಂದು ಕುಟುಂಬಗಳೊಂದಿಗೆ ನೆಲೆಸಿದ್ದಾರೆ. ಅವರ ಮಕ್ಕಳು ವಿದ್ಯಾವಂತರಾಗಿದ್ದಾರೆ ಮತ್ತು ಉತ್ತಮ ಉದ್ಯೋಗದಲ್ಲಿದ್ದಾರೆ. ಈ ಕಾರ್ಯಕ್ರಮವು ಎಲ್ಲಾ ವಲಸೆ ಸಮುದಾಯಗಳಿಗೆ ಮಾನ್ಯತೆ, ಗೌರವ ಮತ್ತು ಶೃದ್ಧೆಯನ್ನು ನೀಡುತ್ತದೆ. ವಂದನೀಯ ಫಾದರ್ ಸುಶೀಲ್ ಮತ್ತಿತರೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅನೇಕ ಗಣ್ಯರು ಉಪಸ್ಥಿತರಿದ್ದರು.