ಅಲ್ಲಿಪಾದೆ ಸೈಂಟ್ ಜೋನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಮಹಮ್ಮದ್ ಮುಸ್ತಾಕ್ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಮಂಗಳೂರಿನ ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು, ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಂಟ್ವಾಳ ಅಲ್ಲಿಪಾದೆ – ಸೈಂಟ್ ಜೋನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಮಹಮ್ಮದ್ ಮುಸ್ತಾಕ್ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿ ಮಹಮ್ಮದ್ ಮುಸ್ತಾಕ್ ರಾಜ್ಯ ಮಟ್ಟದಲ್ಲಿ ವಿಜೇತನಾಗಿ ಮುಂದೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆ ಹಾಗೂ ನಾಡಿಗೆ ಕೀರ್ತಿ ತರುವಂತಾಗಲಿ ಎಂದು ಶಾಲಾ ಸಂಚಾಲಕಿ ಭಗಿನಿ ನರ್ಸಿಜಾ, ಮುಖ್ಯ ಶಿಕ್ಷಕಿ ಭಗಿನಿ ದೀಪಾ ಹಾಗೂ ಶಿಕ್ಷಕ ವರ್ಗ ಹೇಳಿದ್ದಾರೆ ಮತ್ತು ಅಭಿನಂದನೆ ಸಲ್ಲಿಸಿದ್ದಾರೆ.