ನಾರಾಯಣಗುರುಗಳು ಸಾತ್ವಿಕ ಚಿತ್ತದ ಸಮಾಜ ಸುಧಾರಕರು : ಪ್ರೇಮನಾಥ್ ಕರ್ಕೇರಾ
ಬಂಟ್ವಾಳ : ಅಹಿಂಸಾ ತತ್ವವನ್ನು ಪಾಲಿಸಲು ಪ್ರೇರಕರಾಗಿ, ಅಸ್ಪೃಶ್ಯತೆ ನಿವಾರಣೆಗೆ ಹೋರಾಡುತ್ತಾ, ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಗುರುಗಳು, ಓರ್ವ ಸಾತ್ವಿಕ ಚಿತ್ತದ ಸುಧಾರಕರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಪ್ರೇಮನಾಥ್ ಕರ್ಕೇರಾ ತಿಳಿಸಿದರು. ಗುರುವಾರ ಅಕ್ಟೋಬರ್ 3ರಂದು ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಸದಾನಂದ ಎನ್. ಪೂಜಾರಿ ಇವರ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಗುರುತತ್ವವಾಹಿನಿ 14ನೇ ಮಾಲಿಕೆಯಲ್ಲಿ ಗುರುಗಳ ಸಂದೇಶಗಳನ್ನು ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ರಾಮಚಂದ್ರ ಸುವರ್ಣ, ನಾಗೇಶ್ ಪೊನ್ನೋಡಿ, ಶಿವಾನಂದ ಎಂ., ಅರುಣ್ ಬಿ.ಸಿ. ರೋಡ್, ಸದಸ್ಯರಾದ ನಾಗೇಶ್ ಪೂಜಾರಿ ಏಲಬೆ, ಯತೀಶ್ ಬೊಳ್ಳಾಯಿ, ಹರೀಶ್ ಅಜೆಕಲ, ರತ್ನಾಕರ್ ಸಿದ್ಧಕಟ್ಟೆ, ಅರ್ಜುನ್ ಅರಳ, ಯಶೋಧರ ಕಡಂಬಲ್ಕೆ, ಶೇಖರ್ ಕಲ್ಯಾಣಾಗ್ರಹಾರ, ರಾಕೇಶ್ ಜತ್ತನ್ ರಾಯಿ, ಯೋಗೀಶ್ ಕರ್ಪೆ ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.